AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Tweet: ನಮ್ಮ ಹಣವನ್ನು ವಿದೇಶದಲ್ಲಿ ಡಾಲರ್‌ನಂತೆಯೇ ಬಳಸಲು ಅನುವು ಮಾಡಿಕೊಟ್ಟ ಮೋದಿಗೆ ಧನ್ಯವಾದ ಹೇಳಿದ ಬಾಲಿವುಡ್ ಗಾಯಕ

ನಮ್ಮ ಹಣವನ್ನು ವಿದೇಶದಲ್ಲಿ ಡಾಲರ್‌ನಂತೆ ಬಳಸಲು ನಮಗೆ ಅನುವು ಮಾಡಿಕೊಟ್ಟಿದ್ದಕ್ಕಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಂದನೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿ ಪ್ರಧಾನಿಗೆ ಸೆಲ್ಯೂಟ್ ಮಾಡಿರುವ  ಬಾಲಿವುಡ್ ಗಾಯಕ ಮಿಕಾ ಸಿಂಗ್(Mika Singh)  ಅವರ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.

Viral Tweet: ನಮ್ಮ ಹಣವನ್ನು ವಿದೇಶದಲ್ಲಿ ಡಾಲರ್‌ನಂತೆಯೇ ಬಳಸಲು ಅನುವು ಮಾಡಿಕೊಟ್ಟ ಮೋದಿಗೆ ಧನ್ಯವಾದ ಹೇಳಿದ ಬಾಲಿವುಡ್ ಗಾಯಕ
ಸೆಲ್ಯೂಟ್​​ ಮೋದಿ ಜೀ ಎಂದ ಮಿಕಾ ಸಿಂಗ್Image Credit source: Twitter
ಅಕ್ಷತಾ ವರ್ಕಾಡಿ
|

Updated on:Apr 13, 2023 | 12:48 PM

Share

ಕತಾರ್‌ನ ದೋಹಾ ವಿಮಾನ ನಿಲ್ದಾಣ(Doha Airport) ದಲ್ಲಿ ಡಾಲರ್​​​ನಂತೆಯೇ ಭಾರತೀಯ ಕರೆನ್ಸಿಯನ್ನು ಬಳಸಿ ಶಾಪಿಂಗ್​​ ಮಾಡಬಹುದು. ನಮ್ಮ ಹಣವನ್ನು ವಿದೇಶದಲ್ಲಿ ಡಾಲರ್‌ನಂತೆ ಬಳಸಲು ನಮಗೆ ಅನುವು ಮಾಡಿಕೊಟ್ಟಿದ್ದಕ್ಕಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಂದನೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿ ಪ್ರಧಾನಿಗೆ ಸೆಲ್ಯೂಟ್ ಮಾಡಿರುವ  ಬಾಲಿವುಡ್ ಗಾಯಕ ಮಿಕಾ ಸಿಂಗ್(Mika Singh)  ಅವರ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ಸ್ವತಃ ಮಿಕಾ ಸಿಂಗ್​​ ಟ್ವಿಟರ್​​ನಲ್ಲಿ ಪೋಸ್ಟ್​​​ ಮಾಡಿದ್ದು, ಜೊತೆಗೆ ಪ್ರಧಾನಿಯವರನ್ನೂ ಟ್ಯಾಗ್ ಮಾಡಲಾಗಿದೆ.

ಕತಾರ್‌ನ ವಿಮಾನ ನಿಲ್ದಾಣದ ಐಷಾರಾಮಿ Louis Vuitton ಸ್ಟೋರ್‌ನಲ್ಲಿ ಭಾರತೀಯ ಕರೆನ್ಸಿ ಬಳಸಿ ಮಿಕಾ ಸಿಂಗ್ ಶಾಪಿಂಗ್​​ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಏ.12ರಂದು ಟ್ವಿಟರ್​​ನಲ್ಲಿ ಪೋಸ್ಟ್​​ ಮಾಡಲಾದ ಈ ವಿಡಿಯೋ ಇದೀಗಾಗಲೇ 5.59 ಲಕ್ಷ ವೀಕ್ಷಣೆಯನ್ನು ಪಡೆದುಕೊಂಡಿದೆ. 13.8 ಲೈಕ್​​​ ಹಾಗೂ ಸಾವಿರಾರು ರೀಟ್ವೀಟ್​​ಗಳನ್ನು ಕೂಡ ಕಾಣಬಹುದು.

ಇದನ್ನೂ ಓದಿ: ಬಿಬಿಸಿ ವರದಿಗಾರನೊಂದಿಗೆ ಎಲಾನ್ ಮಸ್ಕ್ ಸಂದರ್ಶನ; ‘ನೀನು ಸುಳ್ಳು ಹೇಳುತ್ತಿದ್ದೀಯ’ ಎಂದು ವರದಿಗಾರನನ್ನು ದೂಷಿಸಿದ ಮಸ್ಕ್

ಸಾಕಷ್ಟು ಬಳಕೆದಾರರು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಕ್ಕಾಗಿ ಮಿಕಾ ಸಿಂಗ್ ಅವರನ್ನು ಶ್ಲಾಘಿಸಿದರು. ಅವರ ಟ್ವೀಟ್‌ಗೆ ಬಳಕೆದಾರರು ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಭಾರತೀಯ ಕರೆನ್ಸಿ ವಿದೇಶದೆಲ್ಲೆಡೆ ಬಲಗೊಳ್ಳುತ್ತಿದೆ ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ನವ ಭಾರತದ ಶಕ್ತಿ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 12:47 pm, Thu, 13 April 23

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ