Viral : ಮೊದಲ ಹೆಂಡತಿ ಪೊಲೀಸರೊಂದಿಗೆ ಆರತಕ್ಷತೆ ನಡೆಯುತ್ತಿದ್ದ ವೇಳೆ ಬರುತ್ತಿದ್ದಂತೆ ವರ ಅಲ್ಲಿಂದ ಓಟಕಿತ್ತ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ವರನನ್ನು ಸೈಯದ್ ನಝೀರ್ ಎಂದು ಗುರುತಿಸಲಾಗಿದೆ. ಈತನು ತನ್ನ ಹೆಂಡತಿಗೆ ತಿಳಿಸದೆ ಎರಡನೇ ಮದುವೆಯಾಗಲು ಹೊರಟಿದ್ದ. ಆದರೆ, ಆರತಕ್ಷತೆ ಸಂದರ್ಭದಲ್ಲಿ ಆತನ ಹೆಂಡತಿ ಪೊಲೀಸರೊಂದಿಗೆ ಬಂದಾಗ, ನಝೀರ್ ಹಿಂಬಾಗಿಲಿನಿಂದ ಓಡಿಹೋಗುವ ಮೂಲಕ ಅಲ್ಲಿ ಉಂಟಾಗುವ ಗಲಾಟೆಯನ್ನು ತಪ್ಪಿಸಿದ್ದಾನೆ! ಮೊದಲ ಪತ್ನಿ ಡಾ. ಸನಾ ಸಮ್ರೀನ್ ತನ್ನ ಗಂಡನ ವಿರುದ್ಧ ಸಂತೋಷ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸೆಪ್ಟೆಂಬರ್ 4 ರಂದು ಹೈದರಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಆ ದಿನ ಸೈಯದ್ ನಝೀರ್ ಎರಡನೇ ಮದುವೆಯ ಆರತಕ್ಷತೆಯಲ್ಲಿ ಸಂತೋಷದಿಂದ ಪಾಲ್ಗೊಂಡ ಸಂದರ್ಭದಲ್ಲಿ ಅಚಾನಕ್ ಆಗಿ ಮೊದಲ ಹೆಂಡತಿಯು ಪೊಲೀಸರೊಂದಿಗೆ ಬಂದಾಗ ಎಚ್ಚೆತ್ತುಕೊಂಡ ವ್ಯಕ್ತಿ ಹಿಂಬಾಗಿಲಿನಿಂದ ಪರಾರಿಯಾಗಿದ್ದಾನೆ. ವರದಿಯ ಪ್ರಕಾರ, ಈತ ತನ್ನ ಮೊದಲ ಪತ್ನಿ ಡಾ. ಸನಾ ಸಮ್ರೀನ್‌ಗೆ, ಎರಡನೇ ಮದುವೆಯಾಗುವ ಬಗ್ಗೆ ತಿಳಿಸಿರಲಿಲ್ಲ. ಆದ್ದರಿಂದ ಸಮ್ರೀನ್ ಈ ಕ್ರಮ ಕೈಗೊಳ್ಳಬೇಕಾಯಿತು. ಈ ಸಂದರ್ಭವನ್ನು ಎದುರಿಸುವುದಕ್ಕಿಂತ ಓಡಿಹೋಗುವುದೇ ಲೇಸೆಂದು ಭಯದಿಂದ ಈ ಉಪಾಯದ ಮೊರೆ ಹೋಗಿದ್ದಾನೆ.
ಈ ಘಟನೆಯ ಕುರಿತು ಸಮ್ರೀನ್ ಅವರ ಸಹೋದರ, ‘ನನ್ನ ಸಹೋದರಿ 2019 ರಲ್ಲಿ ನ್ಯೂಝಿಲೆಂಡ್‌ನಿಂದ ಬಂದ ಕೂಡಲೇ ಸೈಯದ್ ಅವರನ್ನು ವಿವಾಹವಾದರು. COVID-19 ಲಾಕ್‌ಡೌನ್ ಸಮಯದಲ್ಲಿ ನಮ್ಮಲ್ಲಿಯೇ ಉಳಿದರು. ಸೈಯ್ಯದ್ ಅವರನ್ನು ನಾವೇ ನೋಡಿಕೊಂಡೆವು. ರೂ. 15 ಲಕ್ಷ ಬೇಡಿಕೆಯಿಟ್ಟರು, ಆದರೆ ನಾವು ಕೊಡಲಿಲ್ಲ. ಆದಕಾರಣ ನನ್ನ ಸಹೋದರಿಯಿಂದ ದೂರವಿರಲು ಪ್ರಾರಂಭಿಸಿದರು.’ ಎಂದು ಡೆಕ್ಕನ್ ಕ್ರಾನಿಕಲ್ಗೆ ತಿಳಿಸಿದ್ದಾರೆ.
ಈ ಮಧ್ಯೆ, ಹಣಕ್ಕಾಗಿ ಕಿರುಕುಳ ನೀಡಲು ಪ್ರಾರಂಭಿಸಿದ್ದರ ಬಗ್ಗೆ ಸಮ್ರೀನ್ ಮಾತನಾಡುತ್ತಾ, ‘ನಾನೊಬ್ಬ ವೈದ್ಯೆ. COVID-19 ರ ಎರಡನೇ ಅಲೆಯ ಸಮಯದಲ್ಲಿ, ನಾನು ಕೋವಿಡ್ ಪಾಸಿಟಿವ್ ಆಗಿದ್ದ ಸೈಯದ್ ಅವರ ಚಿಕ್ಕಪ್ಪನಿಗೆ ಸೇವೆ ಸಲ್ಲಿಸಿದೆ ಮತ್ತು ಲಾಕ್‌ಡೌನ್ ಸಮಯದಲ್ಲಿ ನನ್ನ ಉಳಿತಾಯದ ಹಣವನ್ನು ಅವರಿಗೆ ನೀಡಿದ್ದೆ’ ಎಂದಿದ್ದಾರೆ.
ಎರಡನೇ ಮದುವೆಯ ಘಟನೆಯ ಬಗ್ಗೆ ಮಾತನಾಡುತ್ತಾ, ‘ತನ್ನ ಗಂಡನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಬಯಸಿದ್ದೆ. ಆದರೆ ಆತ ತಪ್ಪಿಸಿಕೊಂಡಿದ್ದರಿಂದ ಸಂತೋಷ್ ನಗರ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಬೇಕಾಯಿತು ಎಂದಿದ್ದಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:18 pm, Tue, 6 September 22