Viral News: 7 ರೂ. ಬ್ಯಾಗ್ ತಗೊಳ್ಳಿ ಎಂದು ಒತ್ತಾಯಿಸಿದ ಪಿಜ್ಜಾ ಶಾಪ್​ಗೆ 11,000 ರೂ. ದಂಡ!

| Updated By: ಸುಷ್ಮಾ ಚಕ್ರೆ

Updated on: Nov 18, 2021 | 3:44 PM

ನನಗೆ ಕ್ಯಾರಿ ಬ್ಯಾಗ್ ಬೇಡ ಎಂದರೂ ಕೇಳದೆ ಒತ್ತಾಯಪೂರ್ವಕವಾಗಿ ಬಿಲ್​ನಲ್ಲಿ ಕ್ಯಾರಿ ಬ್ಯಾಗ್​ ಮೊತ್ತ 7.62 ರೂ. ನಮೂದಿಸಿ ಬಿಲ್ ನೀಡಿದ್ದಾರೆ ಎಂದು ಗ್ರಾಹಕರೊಬ್ಬರು ಹೈದರಾಬಾದಿನ ಗ್ರಾಹಕ ವೇದಿಕೆಗೆ ದೂರು ನೀಡಿದ್ದರು.

Viral News: 7 ರೂ. ಬ್ಯಾಗ್ ತಗೊಳ್ಳಿ ಎಂದು ಒತ್ತಾಯಿಸಿದ ಪಿಜ್ಜಾ ಶಾಪ್​ಗೆ 11,000 ರೂ. ದಂಡ!
ಪಿಜ್ಜಾ
Follow us on

ಹೈದರಾಬಾದ್: ಯಾವುದೇ ಅಂಗಡಿ, ಶಾಪಿಂಗ್ ಮಾಲ್​, ಸೂಪರ್ ಮಾರ್ಕೆಟ್​ಗೆ ಹೋದರೂ ಬಿಲ್ಲಿಂಗ್ ಕೌಂಟರ್​ನಲ್ಲಿ ‘ಕ್ಯಾರಿ ಬ್ಯಾಗ್ ಬೇಕಾ?’ ಎಂದು ಕೇಳುವುದು ಮಾಮೂಲು. ನಿಮಗೇನಾದರೂ ಬ್ಯಾಗ್ ಬೇಕಾಗಿದ್ದರೆ ಅದರ ಬೆಲೆ ತೆತ್ತು ಬ್ಯಾಗ್ ಖರೀದಿಸಬಹುದು. ಅಥವಾ ನಿಮ್ಮದೇ ಬ್ಯಾಗ್​ನಲ್ಲಿ ಅಲ್ಲಿ ಖರೀದಿಸಿದ ವಸ್ತುಗಳನ್ನು ಹಾಕಿಕೊಂಡು ಬರಬಹುದು. ಆದರೆ, ಪಿಜ್ಜಾ ಶಾಪ್​ವೊಂದು ತಮ್ಮ ಲೋಗೋ ಇರುವ ಕ್ಯಾರಿ ಬ್ಯಾಗ್​ ತೆಗೆದುಕೊಳ್ಳಲು ಗ್ರಾಹಕನಿಗೆ ಒತ್ತಾಯಿಸಿದ್ದಕ್ಕೆ ಇದೀಗ 11 ಸಾವಿರ ರೂ. ದಂಡ ತೆರಬೇಕಾಗಿದೆ!

ನನಗೆ ಕ್ಯಾರಿ ಬ್ಯಾಗ್ ಬೇಡ ಎಂದರೂ ಕೇಳದೆ ಒತ್ತಾಯಪೂರ್ವಕವಾಗಿ ಬಿಲ್​ನಲ್ಲಿ ಕ್ಯಾರಿ ಬ್ಯಾಗ್​ ಮೊತ್ತ 7.62 ರೂ. ನಮೂದಿಸಿ ಬಿಲ್ ನೀಡಿದ್ದಾರೆ ಎಂದು ಗ್ರಾಹಕರೊಬ್ಬರು ಹೈದರಾಬಾದಿನ ಗ್ರಾಹಕ ವೇದಿಕೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆ ಪಿಜ್ಜಾ ಔಟ್‌ಲೆಟ್‌ಗೆ 11,000 ರೂ. ದಂಡ ವಿಧಿಸಲಾಗಿದೆ. 7 ರೂ. ಬ್ಯಾಗ್​ನ ಬಿಲ್ ಹಾಕಿದ್ದಕ್ಕೆ ಆ ಪಿಜ್ಜಾ ಶಾಪ್ ಈಗ 11 ಸಾವಿರ ರೂ. ಹಣ ತೆರಬೇಕಾಗಿದೆ.

ಹೈದರಾಬಾದ್​ನ ಕೆ. ಮುರಳಿ ಕುಮಾರ್ ಎಂಬ ವಿದ್ಯಾರ್ಥಿ ಪಿಜ್ಜಾ 2019ರ ಸೆಪ್ಟೆಂಬರ್ 16ರಂದು ಪಿಜ್ಜಾ ಶಾಪ್​ ಒಂದರಲ್ಲಿ ಪಾರ್ಸಲ್​ಗೆ ಆರ್ಡರ್ ಮಾಡಿದ್ದರು. ಪಿಜ್ಜಾ ಮತ್ತಿತರ ಆಹಾರ ಪದಾರ್ಥಗಳನ್ನು ಅಲ್ಲಿ ಖರೀದಿಸಿದ ಅವರ ಬಿಲ್ 983.5 ರೂ. ಆಗಿತ್ತು. ಅದರಲ್ಲಿ ಆ ಪಿಜ್ಜಾ ಔಟ್​ಲೆಟ್​ನ ಲೋಗೋ ಇರುವ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗೆ ಹೆಚ್ಚುವರಿಯಾಗಿ 7.62 ರೂ.ಗಳನ್ನು ವಿಧಿಸಲಾಗಿತ್ತು. ನನಗೆ ಕ್ಯಾರಿ ಬ್ಯಾಗ್ ಬೇಡ, ಒಂದೊಮ್ಮೆ ನೀವು ಬ್ಯಾಗ್ ಕೊಡುವುದೇ ಆದರೆ ಲೋಗೋ ಇಲ್ಲದ ಬ್ಯಾಗ್ ಕೊಡಿ ಎಂದು ಮುರಳಿ ಕೇಳಿದ್ದರು. ಅದಕ್ಕೆ ಆ ಶಾಪ್​ನವರು ಒಪ್ಪಿರಲಿಲ್ಲ.

ಹೀಗಾಗಿ, ತಮ್ಮ ಬ್ರಾಂಡ್ ಅನ್ನು ಪ್ರಚಾರ ಮಾಡಿಕೊಳ್ಳಲು ನಮ್ಮ ಹಣ ಬಳಸಿಕೊಳ್ಳಲಾಗುತ್ತಿದೆ. ಆ ಶಾಪ್​ನವರಿಂದ ನನಗೆ ಕಿರುಕುಳ ಆಗಿದೆ ಎಂದು ಮುರಳಿ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು. ಆ ಪ್ರಕರಣದ ಎರಡು ವರ್ಷಗಳ ಸುದೀರ್ಘ ವಿಚಾರಣೆಯ ನಂತರ ಗ್ರಾಹಕರ ವೇದಿಕೆಯು ದೂರು ನೀಡಿದ ಗ್ರಾಹಕ ಮುರಳಿ ಅವರಿಗೆ 11,000 ರೂ. ಪಾವತಿಸಬೇಕೆಂದು ಪಿಜ್ಜಾ ಔಟ್​ಲೆಟ್​ಗೆ ಆದೇಶ ನೀಡಿದೆ.

ಇದನ್ನೂ ಓದಿ: Viral News: ಮದುವೆಯಾದ ಮರುದಿನವೇ ಗರ್ಲ್​ಫ್ರೆಂಡ್ ಜೊತೆ ವಧು ಪರಾರಿ; ಶಾಕ್ ಆದ ಗಂಡನಿಗೆ ಹೃದಯಾಘಾತ!

Viral News: ಜೈಲಿಗೆ ಹಾಕಿ ಪ್ಲೀಸ್!; ಮನೆಯಲ್ಲಿ ಹೆಂಡತಿಯ ಕಾಟ ತಾಳಲಾರದೆ ಪೊಲೀಸರ ಬಳಿ ಬೇಡಿಕೊಂಡ ಗಂಡ