ಐದು ನಾಯಿಮರಿಗಳನ್ನು ನೆಲಕ್ಕೆ ಬಡಿದು ಕಲ್ಲಿನಿಂದ ಜಜ್ಜಿ ಕೊಂದ ವ್ಯಕ್ತಿ, ಅಮಾನವೀಯ ಕೃತ್ಯದ ವಿಡಿಯೋ ವೈರಲ್

ಕೆಲವರು ಮೂಕ ಪ್ರಾಣಿಗಳ ಮೇಲೆ ಅತಿರೇಕದ ವರ್ತನೆಯನ್ನು ತೋರಿಸುತ್ತಾರೆ. ಮನಬಂದಂತೆ ಹೊಡೆಯುವ ಅಥವಾ ವಾಹನಕ್ಕೆ ಕಟ್ಟಿಹಾಕಿಕೊಂಡು ಎಳೆದುಕೊಂಡು ಹೋಗುವ ಮೂಲಕ ಮಾನವೀಯತೆ ಇಲ್ಲದಂತೆ ವರ್ತಿಸುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ತನ್ನ ಸಾಕು ನಾಯಿಯ ಐದು ನವಜಾತ ಮರಿಗಳನ್ನು ಮನಸ್ಸೋ ಇಚ್ಛೆ ಬಂದಂತೆ ಎಸೆಯುತ್ತ ಕೊಂದಿದ್ದು, ಈ ಅಮಾನವೀಯ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐದು ನಾಯಿಮರಿಗಳನ್ನು ನೆಲಕ್ಕೆ ಬಡಿದು ಕಲ್ಲಿನಿಂದ ಜಜ್ಜಿ ಕೊಂದ ವ್ಯಕ್ತಿ, ಅಮಾನವೀಯ ಕೃತ್ಯದ ವಿಡಿಯೋ ವೈರಲ್
ವೈರಲ್​​ ವಿಡಿಯೋ
Updated By: ಅಕ್ಷಯ್​ ಪಲ್ಲಮಜಲು​​

Updated on: Apr 18, 2025 | 2:18 PM

ಹೈದರಾಬಾದ್, ಏಪ್ರಿಲ್ 18: ಈಗಿನ ಕಾಲದಲ್ಲಿ ಮನುಷ್ಯರು ಮಾನವೀಯತೆ (humanity) ಯನ್ನು ಮರೆತೇ ಬಿಟ್ಟಿದ್ದಾರೆ. ತಮ್ಮಂತೆ ಜೀವವಿರುವ ಮಾತು ಬಾರದ ಮೂಕ ಪ್ರಾಣಿ (animals) ಗಳ ಜೊತೆಗೆ ಅಮಾನುಷವಾಗಿ ವರ್ತಿಸಿ ತಮ್ಮ ಕೋಪ ಸಿಟ್ಟನ್ನು ತೀರಿಸಿಕೊಳ್ಳುವುದನ್ನು ನೋಡಿರಬಹುದು. ಇದೀಗ ಇಂತಹದ್ದೆ ಘಟನೆಯೊಂದು ಹೈದರಾಬಾದ್ (hyderbad) ನ ಫತೇನಗರ (fathenagar) ದಲ್ಲಿ ನಡೆದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಹೋಮ್ ವ್ಯಾಲಿ ಅಪಾರ್ಟ್‌ಮೆಂಟ್‌ (home valley apartments) ನ ನೆಲಮಾಳಿಗೆಯಲ್ಲಿ ವ್ಯಕ್ತಿಯೊಬ್ಬರು ನವಜಾತ ಮರಿಗಳನ್ನು ಎತ್ತಿ ಎತ್ತಿ ನೆಲಕ್ಕೆ ಬಡಿಯುತ್ತಿದ್ದು, ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾ (social media) ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

@greatandhranews ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಅಪಾರ್ಟ್‌ಮೆಂಟ್‌ ನೆಲಮಾಳಿಗೆಯಲ್ಲಿ ವ್ಯಕ್ತಿಯೊಬ್ಬರು ನಾಯಿ ಜೊತೆಗೆ ಓಡಾಡುತ್ತಿರುವುದನ್ನು ನೋಡಬಹುದು. ಈ ವೇಳೆಯಲ್ಲಿ ನಾಯಿಮರಿಗಳ ಹತ್ತಿರ ಹೋಗಿ ವ್ಯಕ್ತಿಯೂ ನಾಯಿಮರಿಗಳನ್ನು ಎತ್ತಿಕೊಂಡು ನೆಲಕ್ಕೆ ಹೊಡೆದು, ಕಲ್ಲಿನಿಂದ ಜಜ್ಜುತ್ತಿರುವುದನ್ನು ನೋಡಬಹುದು. ಅಷ್ಟೇ ಅಲ್ಲದೇ, ಆ ನಾಯಿಮರಿಗಳು ಸತ್ತಿದೆಯೇ ಎಂದು ನೋಡಿ ಮತ್ತೆ ಕೈಯಿಂದ ಗುದ್ದುತ್ತಿದ್ದಾನೆ. ಈ ವೇಳೆಯಲ್ಲಿ ತಾಯಿ ನಾಯಿಯೊಂದು ಅತ್ತಿಂದ ಇತ್ತ ಓಡಾಡುತ್ತಿದೆ.

ಇದನ್ನೂ ಓದಿ
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ:

ಈ ವಿಡಿಯೋವೊಂದು ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಬಳಕೆದಾರರು ಈ ವ್ಯಕ್ತಿಯ ವಿರುದ್ಧ ಗರಂ ಆಗಿದ್ದು ಖಾರವಾಗಿಯೇ ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರು, ಈತನ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಿ ಎಂದಿದ್ದಾರೆ. ಇನ್ನೊಬ್ಬರು, ‘ನೀವೇನು ಮನುಷ್ಯರೋ, ಮಾತು ಬಾರದ ಪ್ರಾಣಿಗಳನ್ನು ಕೊಂದರೆ ಆ ಶಾಪ ನಿಮ್ಮನ್ನು ತಟ್ಟದೇ ಬಿಡದು’ ಎಂದಿದ್ದಾರೆ. ಮತ್ತೊಬ್ಬರು, ‘ಅವನು ಮನುಷ್ಯನೇ ಅಲ್ಲ, ಅವನ ನಡವಳಿಕೆಯೂ ಕೆಟ್ಟದ್ದಾಗಿದೆ. ಈ ವ್ಯಕ್ತಿಗೆ ಖಂಡಿತ ಶಿಕ್ಷೆಯಾಗಬಹುದು. ಇಂತಹ ಘಟನೆಗಳನ್ನು ನೋಡಿದಾಗ ಮಾನವೀಯತೆ ಅನ್ನೋದೇ ಇಲ್ಲ ಎಂದೆನಿಸುತ್ತದೆ’ ಎಂದಿದ್ದಾರೆ.

ಇದನ್ನೂ ಓದಿ : ಬೆಂಗಳೂರು ಕ್ಯಾಬ್​​​ನಲ್ಲಿ ಓಡಾಡುವುದು ಎಷ್ಟು ಸೇಫ್? ತಮಗಾದ ಕಹಿ ಅನುಭವ ಹಂಚಿಕೊಂಡ ಯುವತಿ

ಈ ಐದು ನಾಯಿಮರಿಗಳನ್ನು ಕೊಂದ ಈ ವ್ಯಕ್ತಿಯೂ ಉದ್ಯಮಿಯಾಗಿದ್ದು, ಈತನನ್ನು ಆಶಿಶ್ ಎಂದು ಗುರುತಿಸಲಾಗಿದೆ. ಈಗಾಗಲೇ ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಾನು ಮಾಡಿದ ತಪ್ಪನ್ನು ಆರೋಪಿಯೂ ಒಪ್ಪಿಕೊಂಡಿದ್ದು, ಈ ಘಟನೆಗೆ ಸಂಬಂಧ ಪಟ್ಟಂತೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ