Viral Video: ಡಿಬಾಸ್ ಜೈಲಿಂದ ಹೊರಗಡೆ ಬಂದಿಲ್ಲಾಂದ್ರೆ ನನ್ ಬದುಕಿರೋಲ್ಲ, ದರ್ಶನ್ ಅಭಿಮಾನಿಯ ಹುಚ್ಚಾಟ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಬಂಧಿಸಲಾಗಿದೆ. ಈ ಕೊಲೆ ಕೇಸ್ ರಾಜ್ಯದ್ಯಂತ ಸಂಚಲನ ಸೃಷ್ಟಿಸಿದ್ದು, ನಮ್ ಡಿ ಬಾಸ್ ಯಾವುದೇ ತಪ್ಪು ಮಾಡಿಲ್ಲ ಅಂತ ಅಭಿಮಾನಿಗಳೆಲ್ಲಾ ಹೇಳ್ತಿದ್ದಾರೆ. ಈ ನಡುವೆ ಇಲ್ಲೊಬ್ಬ ಅಂಧಾಭಿಮಾನಿ ಡಿ ಬಾಸ್ ಏನಾದ್ರೂ ಜೈಲಿಂದ ಹೊರಗಡೆ ಬಂದಿಲ್ಲಾಂದ್ರೆ ನಾನು ಬದುಕಿರೋಲ್ಲ, ಎಲ್ಲಾದ್ರೂ ಹೋಗಿ ಸಾಯ್ತೀನಿ ಎಂದು ಹುಚ್ಚು ಮಾತುಗಳನ್ನಾಡಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.

Viral Video: ಡಿಬಾಸ್ ಜೈಲಿಂದ ಹೊರಗಡೆ ಬಂದಿಲ್ಲಾಂದ್ರೆ ನನ್ ಬದುಕಿರೋಲ್ಲ, ದರ್ಶನ್ ಅಭಿಮಾನಿಯ ಹುಚ್ಚಾಟ
ವೈರಲ್​ ವಿಡಿಯೋ
Updated By: ಅಕ್ಷಯ್​ ಪಲ್ಲಮಜಲು​​

Updated on: Jun 17, 2024 | 6:13 PM

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕರ್ನಾಟಕದಾದ್ಯಂತ ದೊಡ್ಡ ಅಭಿಮಾನಿ ಬಳಗವೇ ಇದೆ. ಆದರೆ ಇದೀಗ ನಟ ದರ್ಶನ್ ಅವರನ್ನು  ನಟಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು  ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದ್ದು, ಈ ಸುದ್ದಿ ಫ್ಯಾನ್ಸ್ ಗಳಿಗೆ ದೊಡ್ಡ ಶಾಕ್ ನೀಡಿದೆ. ದರ್ಶನ್ ಕೊಲೆ ಆರೋಪಿಯಾಗಿದ್ದರೂ ಕೆಲವು ಹುಚ್ಚು ಅಭಿಮಾನಿಗಳು ನಮ್ ಡಿ ಬಾಸ್ ಯಾವುದೇ ತಪ್ಪು ಮಾಡಿಲ್ಲ, ನಮ್ಮ ಸಪೋರ್ಟ್ ಯಾವತ್ತಿದ್ರೂ ಅವರಿಗೆ ಎಂದೆಲ್ಲಾ ಹೇಳ್ತಿದ್ದಾರೆ. ಈ ನಡುವೆ ಇಲ್ಲೊಬ್ಬ ಅಂಧಾಭಿಮಾನಿ ಡಿ ಬಾಸ್ ಏನಾದ್ರೂ ಜೈಲಿಂದ ಹೊರಗಡೆ ಬಂದಿಲ್ಲಾಂದ್ರೆ ನಾನು ಬದುಕಿರೋಲ್ಲ, ಎಲ್ಲಾದ್ರೂ ಹೋಗಿ ಸಾಯ್ತೀನಿ ಅಂತ ಹುಚ್ಚು ಮಾತುಗಳನ್ನಾಡಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.

ಈ ವಿಡಿಯೋವನ್ನು ʼಕರ್ನಾಟಕ ನ್ಯಾಯ ಬೆಲೆ ಅಂಗಡಿʼ ಎಂಬ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ನಟ ದರ್ಶನ್ ಬಂಧನಕ್ಕೊಳಗಾದ ಆಘಾತದಲ್ಲಿ ಅಭಿಮಾನಿಯೊಬ್ಬ ನಾನು ಇನ್ಮೇಲೆ ಬದುಕಿರೋಕೆ ಚಾನ್ಸೇ ಇಲ್ಲ. ಡಿ ಬಾಸ್ ಹೊರಗಡೆ ಬಂದಿಲ್ಲಾ ಅಂದ್ರೆ ನನ್ ಹೆಣ ಕೂಡಾ ಸಿಗೋಲ್ಲ, ಎಲ್ಲೋ ಮೂಲೆಗೆ ಹೋಗಿ ಸತ್ತೋಗ್ತೀನಿ ಎಂದು ಹೇಳುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: 80ರ ವೃದ್ಧನನ್ನು ಪ್ರೀತಿಸಿ ಮದುವೆಯಾದ 23ರ ಯುವತಿ, ಅಪರೂಪದ ಲವ್ ಸ್ಟೋರಿ 

ವೈರಲ್​​ ವಿಡಿಯೋ ಇಲ್ಲಿದೆ:

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 7 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಕೆಲವರು ಈ ಹುಚ್ಚಾಟ ಬಿಟ್ಟು ಹೋಗಿ ಅಮ್ಮ ಅಪ್ಪನನ್ನು ಚೆನ್ನಾಗಿ ನೋಡ್ಕೋ ಎಂದು ಹೇಳಿದ್ರೆ, ಇನ್ನೂ ಅನೇಕರು ಒಳ್ಳೆಯ ನಿರ್ಧಾರ ಮೊದ್ಲು ಇಲ್ಲಿಂದ ಹೋಗ್ಬಿಡು ಎಂದು ಕಾಮೆಂಟ್ಸ್ ಮಾಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: