ತಪ್ಪುಗಳನ್ನು ನಾವೆಲ್ಲ ಮಾಡುತ್ತೇನೆ, ಅದರೆ ಆದ ಪ್ರಮಾದಗಳಿಂದ ಕಲಿಯುಯುವುದು ಬುದ್ಧಿವಂತಿಕೆ ಮಾರಾಯ್ರೇ. ‘ತಪ್ಪುಗಳು ನಮಗೆ ಕಲಿಯುವ ಅವಕಾಶಗಳನ್ನು ಕಲ್ಪಿಸುತ್ತವೆ. ನಮ್ಮಲ್ಲಿನ ಕೌಶಲ್ಯತೆ ಮತ್ತು ಜ್ಞಾನವನ್ನು ವೃದ್ಧಿಸುತ್ತವೆ’ ಅಂತ ಉದ್ಯಮಿ (industrialist) ಹರ್ಷ್ ಗೊಯೆಂಕಾ (Harsh Goenka) ಅವರು ತಪ್ಪುಗಳಿಂದ ಕಲಿಯಿರಿ ಅಂತ ನೆಟ್ಟಿಗರಿಗೆ ಪ್ರೇರೇಪಿಸುತ್ತಿದ್ದಾರೆ. ಆರ್ ಪಿ ಜಿ ಗ್ರೂಪ್ ನ (RPG Group) ಚೇರ್ಮನ್ ಆಗಿರುವ ಗೊಯೆಂಕಾ 5 ಅಂಶಗಳ ಒಂದು ಪಟ್ಟಿಮಾಡಿದ್ದು ಟ್ವಿಟರ್ ಬಳಕೆದಾರರು ಅದನ್ನು ಪ್ರಶಂಸಿಸುತ್ತಿದ್ದಾರೆ ಮತ್ತು ಅವರ ಟ್ವೀಟನ್ನು ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿದ್ದಾರೆ.
ಅವರು ಹೇಳುವಂತೆ, ‘ನಮ್ಮಿಂದ ತಪ್ಪಾಗಿದ್ದರೆ, ಅದು ಯಾಕಾಯಿತು, ಆ ತಪ್ಪು ಜರುಗದಣತಾಗಲು ನಾವು ಏನು ಮಾಡಬಹುದಿತ್ತು ಅನ್ನೋದು ಬಹಳ ಮುಖ್ಯ.
ಯಾವುದು ಅಗತ್ಯ ಮತ್ತು ಯಾವುದಕ್ಕೆ ನಮ್ಮ ಹೆಚ್ಚಿನ ಶಕ್ತಿ ವ್ಯಯವಾಗುತ್ತಿದೆ ಅನ್ನೋದನ್ನು ಗ್ರಹಿಸುವುದು ಕೂಡ ಮುಖ್ಯವಾಗುತ್ತದೆ,’ ಎಂದು ಅವರು ಹೇಳುತ್ತಾರೆ. ನಮ್ಮಲ್ಲಿ ಕೊರತೆಯಾಗಿರುವ ಅಂಶನನ್ನು ಕಂಡುಕೊಳ್ಳಬೇಕೆಂದು ಅವರು ಹೇಳಿರುವ ಅಂಶವನ್ನು ಬಹಳ ಜನ ಕೊಂಡಾಡುತ್ತಿದ್ದಾರೆ.
‘ಮಾಡಿ ತಪ್ಪಿನಿಂದ ನೀವು ಕಲಿತರೆ ಅದು ತಪ್ಪೆನಿಸಿಕೊಳ್ಳಲಾರದು,’ ಅಂತ ಹರ್ಷ್ ಹೇಳಿದ್ದಾರೆ.
Always learn from your mistakes:
– See what went wrong
– See what could have been done better
– See what was not necessary
– See what took most of your energy
– See what knowledge you lackedIf you learn from a mistake, a mistake isn't a mistake anymore!
— Harsh Goenka (@hvgoenka) October 18, 2022
ಒಬ್ಬ ಟ್ವಿಟರ್ ಯೂಸರ್ ಹರ್ಷ್ ಟ್ವೀಟ್ ಗೆ ಪ್ರತಿಕ್ರಿಯಿಸಿ, ‘ ಗುರಿ ಸಾಧನೆ ಸಮಯದಲ್ಲಿ ತಪ್ಪುಗಳನ್ನು ಮಾಡಿದರೆ ಅವುಗಳಿಂದ ಹಾನಿಯಿಲ್ಲ. ನಮಗ ಲಭ್ಯವಾಗುವ ಯಶಸ್ಸು ಒಂದು ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ ಮತ್ತು ಪ್ರತಿ ಯಶಸ್ಸಿನಲ್ಲಿ ತಪ್ಪುಗಳನ್ನು ಅಡಗಿಸಿಕೊಳ್ಳಲು ಸಾಕಷ್ಟು ಸ್ಥಳಾವಕಾಶವಿರುತ್ತದೆ,’ ಎಂದು ಹೇಳಿದ್ದಾರೆ, ಮತ್ತೊಬ್ಬ ಯೂಸರ್, ‘ನಿಮ್ಮಿಂದಾದ ಕೊನೆಯ ತಪ್ಪೇ ನಿಮ್ಮ ಅತ್ಯುತ್ತಮ ಟೀಚರ್ ಅಂತ ಯಾರೋ ಒಬ್ಬ ಮಹಾತ್ಮ ಅತ್ಯಂತ ಯುಕ್ತವಾಗಿ ಹೇಳಿದ್ದಾರೆ,’ ಅಂತ ಪ್ರತಿಕ್ರಿಯಿಸಿದ್ದಾರೆ.
ಅದರೆ ಒಬ್ಬ ಯೂಸರ್ ಹರ್ಷ್ ಅವರ ಪಟ್ಟಿಯನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಹೇಳೋದು ಸುಲಭ ಮಾಡೋದು ಕಷ್ಟ, ನಾವು ನಮ್ಮ ತಪ್ಪುಗಳಿಂದ ನಾವು ಕಲಿತಿದ್ದೇಯಾದರೆ, ಇತಿಹಾಸ ಯಾವತ್ತೂ ತಾನಾಗೇ ಮರುಕಳಿಸುತ್ತಿರಲಿಲ್ಲ.’ ಎಂದು ಅವರು ಹೇಳಿದ್ದಾರೆ.
ವೃತ್ತಿ ಬದುಕಿನಲ್ಲಿ ಅಗುವ ಪ್ರಮಾದಗಳ ಪಟ್ಟಿಯನ್ನು ಹರ್ಷ್ ಮಾರ್ಚ್ ನಲ್ಲಿ ಟ್ವೀಟ್ ಮಾಡಿದ್ದರು. ಅದಕ್ಕೆ 3,000 ಲೈಕ್ಸ್ ಸಿಕ್ಕಿದ್ದವು ಮತ್ತು 715 ರೀಟ್ವೀಟ್ ಗಳಾಗಿದ್ದವು. ‘ನನಗೆಲ್ಲವೂ ಗೊತ್ತು.’ ಮತ್ತು ’ನಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳದಿರುವುದು,’ ವ್ಯಕ್ತಿಯೊಬ್ಬ ತನ್ನ ವೃತ್ತಿಬದುಕಿನಲ್ಲಿ ಮಾಡುವ ಎರಡು ಅತಿದೊಡ್ಡ ಪ್ರಮಾದಗಳಾಗಿವೆ, ಎಂದು ಅವರು ಹೇಳಿದ್ದರು. ಹಲವಾರು ನೆಟ್ಟಿಗರು ಅದಕ್ಕೆ ತಮ್ಮ ಅಭಿಪ್ರಾಯಗಳನ್ನು ಸೇರಿಸಿದ್ದರು.