Blanket Octopus: 20 ವರ್ಷಗಳ ಬಳಿಕ ಅಪರೂಪದ ಬ್ಲಾಂಕೆಟ್​ ಆಕ್ಟೋಪಸ್​ ಪತ್ತೆ ಮಾಡಿದ ವಿಜ್ಞಾನಿಗಳು

| Updated By: Pavitra Bhat Jigalemane

Updated on: Jan 18, 2022 | 6:52 PM

20 ಬಳಿಕ ಅಪರೂಪದ ಬ್ಲಾಂಕೆಟ್​ ಆಕ್ಟೋಪಸ್​ ಅನ್ನು ಜೀವಶಾಸ್ತ್ರಜ್ಞರು ಪತ್ತೆ ಮಾಡಿದ್ದಾರೆ. ಬಂಗಾರದ ಬಣ್ಣದಲ್ಲಿ ಹೊಳೆಯವ  ಅಪರೂಪದ ಬ್ಲಾಂಕೆಟ್​ ಆಕ್ಟೋಪಸ್​ ಗ್ರೇಟ್​ ಬಾರಿಯರ್​ನ ಲೇಡಿ ಎಲಿಯಟ್​ ಐಸ್​ಲ್ಯಾಂಡ್​ನಲ್ಲಿ ಕಂಡುಬಂದಿದೆ.

Blanket Octopus: 20 ವರ್ಷಗಳ ಬಳಿಕ ಅಪರೂಪದ ಬ್ಲಾಂಕೆಟ್​ ಆಕ್ಟೋಪಸ್​ ಪತ್ತೆ ಮಾಡಿದ ವಿಜ್ಞಾನಿಗಳು
ಅಪರೂಪದ ಬ್ಲಾಂಕೆಟ್​ ಆಕ್ಟೋಪಸ್​
Follow us on

20 ಬಳಿಕ ಅಪರೂಪದ ಬ್ಲಾಂಕೆಟ್​ ಆಕ್ಟೋಪಸ್ (Blanket Octopus)​ ಅನ್ನು ಜೀವಶಾಸ್ತ್ರಜ್ಞರು ಪತ್ತೆ ಮಾಡಿದ್ದಾರೆ. ಬಂಗಾರದ ಬಣ್ಣದಲ್ಲಿ ಹೊಳೆಯವ  ಅಪರೂಪದ ಬ್ಲಾಂಕೆಟ್​ ಆಕ್ಟೋಪಸ್​ ಗ್ರೇಟ್​ ಬಾರಿಯರ್​ನ ಲೇಡಿ ಎಲಿಯಟ್​ ಐಸ್​ಲ್ಯಾಂಡ್ (Lady Elliot Island )​  ನಲ್ಲಿ ಕಂಡುಬಂದಿದೆ.  ಆಸ್ಟ್ರೇಲಿಯಾದಲ್ಲಿ ಕಂಡುಬಂದ ಈ ಜೀವಿಯನ್ನು ಜೆಸಿಂತಾ ಶಾಕಲ್ಟನ್​ ಎನ್ನುವ ಸಮುದ್ರ ಜೀವಶಾಸ್ತ್ರಜ್ಞೆ  ಈ ಅಪರೂಪದ ಬ್ಲಾಂಕೆಟ್​ ಆಕ್ಟೋಪಸ್​ ಅನ್ನು ಪತ್ತೆ ಮಾಡಿದ್ದಾರೆ. ಈ ಕುರಿತು ಅವರು ತಮ್ಮ ಇನ್ಸ್ಟಾಗ್ರಾಮ್​ (Instagram) ಖಾತೆಯಲ್ಲಿ  ಹಂಚಿಕೊಂಡಿದ್ದಾರೆ. ಅಪರೂಪದ ಬ್ಲಾಂಕೆಟ್​ ಆಕ್ಟೋಪಸ್​ ನ ವಿಡಿಯೋ ಹಾಗೂ ಫೋಟೊಗಳನ್ನು ಹಂಚಿಕೊಂಡಿದ್ದಾರೆ. 

ದಿ ಇಂಡಿಯನ್​ ಎಕ್ಸ್​​ಪ್ರೆಸ್​ ವರದಿ ಮಾಡಿರುವ ಪ್ರಕಾರ,  ಕ್ವೀನ್ಸ್​ಲ್ಯಾಂಡ್​  ಪ್ರವಾಸೋದ್ಯಮ  ಮತ್ತು ಈವೆಂಟ್​ಗಳಿಗಾಗಿ ಕಂಟೆಟ್​ ಕ್ರಿಯೇಟ್​ ಮಾಡುವ  ಶಾಕಲ್ಟನ್​ ಅವರು ಹಂಚಿಕೊಂಡಿರುವ ಫೋಟೋಗಳು ಸಖತ್​ ವೈರಲ್​ ಆಗಿದ್ದು, ಜೀವಶಾಸ್ತ್ರಜ್ಞರ ಗಮನ ಸೆಳೆದಿದೆ. ಈ ಕುರಿತು ಅವರು ನಾನು ಅದನ್ನು ಮೊದಲು ಉದ್ದವಾದ ರೆಕ್ಕೆಗಳಿರುವ ಮೀನಿನ ಮರಿ ಎಂದುಕೊಂಡೆ ಆದರೆ ಹತ್ತಿರ ಬರುತ್ತಿದ್ದಂತೆ ನನಗೆ ಅಚ್ಚರಿಯಾಗಿತ್ತು. ಅಪರೂಪದ ಬ್ಲಾಂಕೆಟ್​ ಆಕ್ಟೋಪಸ್​ ಎಂದು ತಿಳಿದಾಗ ಅಗಾಧವಾದ ಸಂತೋಷವಾಯಿತು.  ಜೀವನದಲ್ಲಿ ಈ ಅಪರೂಪದ ಜೀವಿಯನ್ನು ನೋಡಿ ಪುಳಕಿತನಾಗಿದ್ದೇನೆ. ಅದರ ಚಲನೆ, ಕಣ್ಣ ಸೆಳೆಯುವ ಅದರ ಮೈಬಣ್ಣ ನನ್ನನ್ನು ಆಕರ್ಷಿಸಿತ್ತು  ಎಂದಿದ್ದಾರೆ. ಕಳೆದ 3 ವರ್ಷಗಳಿಂದ  ಗ್ರೇಟ್​ ಬ್ಯಾರಿಯರ್​ ದ್ವೀಪದಲ್ಲಿ ನಡೆಸುತ್ತಿರುವ ಸಮುದ್ರ ಜೀವಿಗಳ ಮೇಲಿನ ಅಧ್ಯಯನದ  ವೇಳೆ ಕೇವಲ 3 ಬಾರಿ ಮಾತ್ರ ಈ ಆಕ್ಟೋಪಸ್​ ಕಾಣಿಸಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ನ್ಯೂಜಿಲೆಂಡ್​ನ ಜರ್ನಲ್​ ಆಫ್​ ಮೆರೈನ್​ ಆ್ಯಂಡ್​ ಫ್ರೆಶ್​ ವಾಟರ್​ ರಿಸರ್ಚ್​ ಪ್ರಕಾರ, ಬ್ಲಾಂಕೆಟ್​ ಆಕ್ಟೋಪಸ್​ ಅಪರೂಪವಾಗಲು ಕಾರಣ ಅವುಗಳ  ಲೈಂಗಿಕ ಗಾತ್ರದ ದ್ವಿರೂಪತೆ.  ಹೆಣ್ಣು ಬ್ಲಾಂಕೆಟ್​ ಆಕ್ಟೊಪಸ್​ಗಳು  ಆರು ಅಡಿಗಳವರೆಗೆ ಬೆಳೆಯುತ್ತವೆ. ಗಂಡು ಆಕ್ಟೋಪಸ್​ಗಳು 2.4 ಸೆಂ.ಮೀ ಗಳವರೆಗೆ ಬೆಳೆಯುತ್ತವೆ. ಹೆಣ್ಣು ಆಕ್ಟೋಪಸ್​ಗಳು ಗಂಡು ಆಕ್ಟೋಪಸ್​ಗಳಿಗಿಂತ 40 ಸಾವಿರಪಟ್ಟು ಹೆಚ್ಚು ತೂಕವಿರುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:

24 ಅಡಿ ಎತ್ತರದ ಸೈಕಲ್​ ತಯಾರಿಸಿ ರೈಡ್​ ಮಾಡಿದ ವ್ಯಕ್ತಿ: ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​ ಪಟ್ಟಿ ಸೇರಿದ ಸೈಕಲ್​