ಏಕಾಏಕಿ ಸ್ಫೋಟಗೊಂಡ ರಾಯಲ್ ಎನ್‌ಫೀಲ್ಡ್ ಬೈಕ್ – ವಿಡಿಯೋ ನೋಡಿ

|

Updated on: May 13, 2024 | 1:48 PM

ಏಕಾಏಕಿ ಎನ್‌ಫೀಲ್ಡ್ ಬೈಕ್ ಸ್ಫೋಟಗೊಂಡಿದೆ. ಅದನ್ನೆಲ್ಲ ಅಲ್ಲಿದ್ದ ಕೆಲವರು ಸ್ಮಾರ್ಟ್ ಫೋನ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ದ್ವಿಚಕ್ರ ವಾಹನಗಳ ಬಗ್ಗೆ ಜಾಗರೂಕರಾಗಿರಿ ಎನ್ನುತ್ತಾರೆ ತಜ್ಞರು. ವಿಶೇಷವಾಗಿ ಸುಡುವ ಬಿಸಿಲು ಇದ್ದಾಗ ಪೆಟ್ರೋಲ್ ಸೋರಿಕೆಯಾಗುವ ಸಂದರ್ಭದಲ್ಲಿ ಹಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

ಏಕಾಏಕಿ ಸ್ಫೋಟಗೊಂಡ ರಾಯಲ್ ಎನ್‌ಫೀಲ್ಡ್ ಬೈಕ್ -  ವಿಡಿಯೋ ನೋಡಿ
ಏಕಾಏಕಿ ಸ್ಫೋಟಗೊಂಡ ರಾಯಲ್ ಎನ್‌ಫೀಲ್ಡ್ ಬೈಕ್
Follow us on

ಹೆದ್ದಾರಿಗಳಲ್ಲಿ ಕಾರುಗಳಿಗೆ ಏಕಾಏಕಿ ಬೆಂಕಿ ತಗುಲಿ ಸುಟ್ಟು ಭಸ್ಮ ಆಗುವ ಘಟನೆಗಳು ಇತ್ತೀಚೆಗೆ ಆಗಾಗ್ಗೆ ನಡೆಯುತ್ತಲೇ ಇರುವೆ. ಪ್ರಖರ ಬಿಸಿಲು, ವಾಹನದ ಪೆಟ್ರೋಲ್ ಟ್ಯಾಂಕ್‌ನಲ್ಲಿನ ದೋಷಗಳು ಸೇರಿದಂತೆ ನಾನಾ ತಾಂತ್ರಿಕ ವೈಫಲ್ಯಗಳಿಂದಾಗಿ ವಾಹನಗಳು ಬೆಂಕಿಗೆ ಆಹುತಿಯಾಗುತ್ತಿರುವುದು ಎಲ್ಲರಲ್ಲೂ ಭಯ ಪಡಿಸುತ್ತಿದೆ. ಇಂತಹ ಘಟನೆಗಳಲ್ಲಿ (Trending) ಹಲವರು ಸಾವನ್ನಪ್ಪಿರುವ ಪ್ರಕರಣಗಲೂ ನಡೆದಿವೆ. ಏತನ್ಮಧ್ಯೆ, ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ರಾಯಲ್ ಎನ್‌ಫೀಲ್ಡ್ ಸ್ಫೋಟದ (Royal Enfield Bike Catches Fire) ಘಟನೆಯು ಎಲ್ಲರನ್ನೂ ಆತಂಕಕ್ಕೆ ದೂಡಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಆದರೆ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಭಾರೀ ಅನಾಹುತ ತಪ್ಪಿದೆ. ಹಾಗಾದರೆ ಈ ಘಟನೆ ನಡೆದಿದ್ದು ಎಲ್ಲಿ? ನಿಜವಾಗಿ ಏನಾಯಿತು ಎಂದು ತಿಳಿಯಲು, ನೀವು ಈ ಸುದ್ದಿಯನ್ನು ಓದಬೇಕು.

ಹೈದರಾಬಾದ್‌ನ ಬೀಬಿ ಬಜಾರ್ ರಸ್ತೆಯಲ್ಲಿರುವ ಮೊಘಲ್‌ಪುರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ರಾಯಲ್ ಎನ್‌ಫೀಲ್ಡ್ ಅನ್ನು ನಿಲ್ಲಿಸಿದ್ದ. ಅಷ್ಟರಲ್ಲಿ ಬೈಕ್‌ಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಅಲ್ಲಿದ್ದ ಕೆಲ ಪೊಲೀಸರು ಹಾಗೂ ಯುವಕರು ಬೆಂಕಿ ನಂದಿಸಲು ಯತ್ನಿಸಿದರು. ಆದರೆ ಬೈಕ್ ಏಕಾಏಕಿ ಸ್ಫೋಟಗೊಂಡಿದೆ. ಇದರ ಪರಿಣಾಮವಾಗಿ ಅಲ್ಲಿಗೆ ಬಂದಿದ್ದ ಪೊಲೀಸ್ ಅಧಿಕಾರಿಯೊಬ್ಬರಿಗೆ ಬೆಂಕಿ ತಗುಲಿದೆ. ಆದರೆ ಸ್ಥಳೀಯರು ಸಕಾಲದಲ್ಲಿ ಅವರಿಗೆ ನೆರವಾಗಿ ಆತನನ್ನು ಬದುಕಿಸಿಕೊಂಡಿದ್ದಾರೆ.

Also Read: ಅಯೋಧ್ಯೆಯಲ್ಲಿ ಭಕ್ತರ ಹಣೆಗೆ ತಿಲಕವಿಡುತ್ತಾ ಈ ಬಾಲಕ ಗಳಿಸುತ್ತಿರುವುದು ಎಷ್ಟು ಗೊತ್ತಾ? ವಿಡಿಯೋ ನೋಡಿ

ಇದನ್ನೆಲ್ಲ ಅಲ್ಲಿದ್ದ ಕೆಲವರು ಸ್ಮಾರ್ಟ್ ಫೋನ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ದ್ವಿಚಕ್ರ ವಾಹನಗಳ ಬಗ್ಗೆ ಜಾಗರೂಕರಾಗಿರಿ ಎನ್ನುತ್ತಾರೆ ತಜ್ಞರು. ವಿಶೇಷವಾಗಿ ಸುಡುವ ಬಿಸಿಲು ಇದ್ದಾಗ ಪೆಟ್ರೋಲ್ ಸೋರಿಕೆಯಾಗುವ ಸಂದರ್ಭದಲ್ಲಿ ಹಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ