ಮ್ಯಾಗಿಯಲ್ಲಿ ಮೂಡಿಬಂದ ನಟಿ ಸಾಯಿ ಪಲ್ಲವಿ ಚಿತ್ರ; ಕಲಾವಿದ ಕೈ ಚಳಕಕ್ಕೆ ಮನಸೋತ  ನೆಟ್ಟಿಗರು

ಸಾಮಾನ್ಯವಾಗಿ ಚಿತ್ರ ಕಲಾವಿದರು ಪೆನ್, ಪೆನ್ಸಿಲ್, ವಿವಿಧ ಪೇಂಟ್ ಬಳಸಿ ಅದ್ಭುತವಾದ ಚಿತ್ರಗಳನ್ನು ಬಿಡಿಸುತ್ತಾರೆ. ಆದರೆ ಇಲ್ಲೊಬ್ಬ ಕಲಾವಿದ ಮ್ಯಾಗಿ ಹಾಗೂ ಟೊಮೆಟೊ ಸಾಸ್ ಬಳಸಿ ಚಿತ್ರ ನಟಿ ಸಾಯಿ ಪಲ್ಲವಿಯವರ ಚಿತ್ರವನ್ನು ಬಿಡಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಕಲಾವಿದನ ಕೈ ಚಳಕಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಮ್ಯಾಗಿಯಲ್ಲಿ ಮೂಡಿಬಂದ ನಟಿ ಸಾಯಿ ಪಲ್ಲವಿ ಚಿತ್ರ; ಕಲಾವಿದ ಕೈ ಚಳಕಕ್ಕೆ ಮನಸೋತ  ನೆಟ್ಟಿಗರು
Follow us
ಮಾಲಾಶ್ರೀ ಅಂಚನ್​
| Updated By: ರಮೇಶ್ ಬಿ. ಜವಳಗೇರಾ

Updated on: May 13, 2024 | 4:21 PM

ಸೋಷಿಯಲ್ ಮೀಡಿಯಾ ಪ್ರತಿಭಾವಂತ ಕಲಾವಿದರಿಗೆ ತಮ್ಮ ಅದ್ಭುತ ಸಾಮರ್ಥ್ಯ ಮತ್ತು ಸೃಜನಶೀಲತೆಯನ್ನು ಅನಾವರಣಗೊಳಿಸಲಿರುವ ವೇದಿಕೆಯಾಗಿದೆ. ಇಂತಹ ಅಧ್ಬುತ ವೇದಿಕೆಯನ್ನು ಸಮರ್ಮಕವಾಗಿ ಬಳಸಿಕೊಂಡು ಸ್ಟಾರ್ ಆದವರು ಚಿತ್ರ ಕಲಾವಿದ ಶಿಂಟು ಮೌರ್ಯ. ಇವರೊಬ್ಬ ಅದ್ಭುತ ಕಲಾವಿದರಾಗಿದ್ದು, ಪೆನ್ಸಿಲ್ ಅಥವಾ ಯಾವುದೇ ರೀತಿಯ ಪೇಂಟಿಂಗ್ಸ್ ಬಳಸದೆ ಟೊಮೆಟೊ ಸಾಸ್, ಚಹಾ, ಶಾಂಪೂ ಇತ್ಯಾದಿ ವಸ್ತುಗಳಿಂದ ಅದ್ಭುತವಾಗ ಚಿತ್ರಗಳನ್ನು ಬಿಡಿಸುತ್ತಾರೆ. ಇವರು ತನ್ನ ಈ ವಿಶಿಷ್ಟ ಪ್ರತಿಭೆಯಿಂದ ಇದಾಗಲೇ ಭಾರಿ ಹೆಸರನ್ನು ಗಳಿಸಿದ್ದಾರೆ. ಇದೀಗ ಅವರು ಮ್ಯಾಗಿ ಮತ್ತು ಟೊಮೆಟೊ ಕೆಚಪ್ ಬಳಸಿ ನಟಿ ಸಾಯಿ ಪಲ್ಲವಿ ಅವರ ಸುಂದರ ಚಿತ್ರವನ್ನು ಬಿಡಿಸಿದ್ದು, ಈ ಕುರಿತ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ವಿಡಿಯೋವನ್ನು ಶಿಂಟು ಮೌರ್ಯ (@artist_shintu_moury) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಶಿಂಟು ಮೌರ್ಯ ಅವರು ಒಂದು ಬಿಳಿ ಹಾಳೆಯ ಮೇಲೆ ಬೇಯಿಸಿದ ಮ್ಯಾಗಿ ನೂಡಲ್ಸ್ ಇಟ್ಟು ಅದರ ಮೇಲೆ ಟೊಮೆಟೊ ಕೆಚಪ್ ಹಾಕಿ ನಟಿ ಸಾಯಿ ಪಲ್ಲವಿಯ ಅವರ ಸುಂದರ ಚಿತ್ರವನ್ನು ಬಿಡಿಸುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: Viral Video: ಹೋಟೆಲ್ ರೂಮಿನಲ್ಲಿ ಇಬ್ಬರು ಪುರುಷರೊಂದಿಗೆ ವಿವಾಹಿತ ಮಹಿಳೆಯ ಚೆಲ್ಲಾಟ; ಪತಿಯಿಂದ ಸರಿಯಾಗಿ ಬಿತ್ತು ಧರ್ಮದೇಟು

ಆರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 9.8 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಶಿಂಟು ಮೌರ್ಯ ಅವರ ಈ ಅದ್ಭುತ ಕಲಾ ಪ್ರತಿಭೆಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ