AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: 5 ರೂ. ಕುರ್ಕುರೆ ತಂದಿಲ್ಲ ಎಂದು ಗಂಡನಿಗೆ ಡಿವೋರ್ಸ್​​​ ನೀಡಿದ ಪತ್ನಿ

ಮಹಿಳೆಯ ದೂರನ್ನು ಫ್ಯಾಮಿಲಿ ಕೌನ್ಸೆಲಿಂಗ್ ಸೆಲ್‌ಗೆ ವರ್ಗಾಯಿಸಿ ಪತಿ-ಪತ್ನಿಯನ್ನು ಕೌನ್ಸೆಲಿಂಗ್‌ಗಾಗಿ ಸೆಲ್‌ಗೆ ಕರೆಸಲಾಗಿತ್ತು. ಈ ವೇಳೆ ಇವರಿಬ್ಬರ ನಡುವಿನ ಜಗಳಕ್ಕೆ 5 ರೂ. ಕುರ್ಕುರೆ ಕಾರಣ ಎಂದು ತಿಳಿದುಬಂದಿದೆ. ಈ ವಿಚಿತ್ರ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಲ್ಲಿದೆ.

Viral News: 5 ರೂ. ಕುರ್ಕುರೆ ತಂದಿಲ್ಲ ಎಂದು ಗಂಡನಿಗೆ ಡಿವೋರ್ಸ್​​​ ನೀಡಿದ ಪತ್ನಿ
5 ರೂ ಕುರ್ಕುರೆ ತಂದಿಲ್ಲ ಎಂದು ಗಂಡನಿಗೆ ಡಿವೋರ್ಸ್​​​ ನೀಡಿದ ಪತ್ನಿ(ಸಾಂದರ್ಭಿಕ ಚಿತ್ರ)Image Credit source: Pinterest
ಅಕ್ಷತಾ ವರ್ಕಾಡಿ
|

Updated on:May 14, 2024 | 10:57 AM

Share

ಉತ್ತರ ಪ್ರದೇಶ(Uttar Pradesh)ದ ಆಗ್ರಾದಲ್ಲಿನ ವಿಚಿತ್ರ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಲ್ಲಿದೆ. ಮಹಿಳೆಯೊಬ್ಬಳು ತನ್ನ ಪತಿ 5 ರೂಪಾಯಿ ಕುರ್ಕುರೆ ಚಿಪ್ಸ್​​​​ ತರಲಿಲ್ಲ ಎಂಬ ಕಾರಣಕ್ಕೆ ಆತನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ, ಇದಲ್ಲದೇ ಡಿವೋರ್ಸ್(Divorce) ಕೊಡಲು ಮುಂದಾಗಿದ್ದಾಳೆ.

ಆಜ್ ತಕ್‌ನ ವರದಿಯ ಪ್ರಕಾರ, ಮಹಿಳೆ ಕಳೆದ ಒಂದೂವರೆ ತಿಂಗಳಿನಿಂದ ತನ್ನ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದು, ಇತ್ತೀಚೆಗಷ್ಟೇ ಆಕೆ ತನ್ನ ಗಂಡನ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದಳು. ಮಹಿಳೆಯ ದೂರನ್ನು ಫ್ಯಾಮಿಲಿ ಕೌನ್ಸೆಲಿಂಗ್ ಸೆಲ್‌ಗೆ ವರ್ಗಾಯಿಸಲಾಗಿದ್ದು,ಪತಿ-ಪತ್ನಿಯನ್ನು ಕೌನ್ಸೆಲಿಂಗ್‌ಗಾಗಿ ಸೆಲ್‌ಗೆ ಕರೆಸಲಾಗಿತ್ತು. ಈ ವೇಳೆ ಇವರಿಬ್ಬರ ನಡುವಿನ ಜಗಳಕ್ಕೆ 5 ರೂ. ಕುರ್ಕುರೆ ಕಾರಣ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Viral Video: ಹೋಟೆಲ್ ರೂಮಿನಲ್ಲಿ ಇಬ್ಬರು ಪುರುಷರೊಂದಿಗೆ ವಿವಾಹಿತ ಮಹಿಳೆಯ ಚೆಲ್ಲಾಟ; ಪತಿಯಿಂದ ಸರಿಯಾಗಿ ಬಿತ್ತು ಧರ್ಮದೇಟು

ಪತಿ-ಪತ್ನಿ ಇಬ್ಬರಿಗೂ ಕೌನ್ಸಿಲಿಂಗ್ ಮಾಡಿದ ಡಾ.ಸತೀಶ್ ಖೀರವಾರ ಅವರು ಹೇಳುವಂತೆ “ಕಳೆದ ವರ್ಷ (2023 ರಲ್ಲಿ) ವಿವಾಹವಾಗಿದ್ದ ಈ ಜೋಡಿ ಕೇವಲ ಒಂದು ವರ್ಷದಲ್ಲೇ ವಿಚ್ಛೇಧನ ನೀಡಲು ಮುಂದಾಗಿದ್ದಾರೆ. ಪತಿ ತನಗೆ ಹೊಡೆಯುತ್ತಾನೆ ಎಂದು ಹೆಂಡತಿ ಹೇಳಿದರೆ,5 ರೂಪಾಯಿ ಬೆಲೆಯ ಕುರ್ಕುರೆಗೆ ಹೆಂಡತಿ ಜಗಳವಾಡಿದ್ದಾಳೆ. ಕುರ್ಕುರೆ ಸಿಗದಿದ್ದಾಗ ಆಕೆಯ ತಾಯಿಯ ಮನೆಗೆ ಹೋಗಿದ್ದಾಳೆ ಎಂದು ಪತಿ ಹೇಳಿದ್ದಾನೆ. ಪ್ರಕರಣವನ್ನು ಮುಂದೂಡಲಾಗಿದ್ದು, , ಮುಂದಿನ ದಿನಾಂಕದಂದು ಇಬ್ಬರ ನಡುವೆ ರಾಜಿಯಾಗುವ ಸಾಧ್ಯತೆಯಿದೆ” ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:51 am, Tue, 14 May 24