Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹೋಟೆಲ್ ರೂಮಿನಲ್ಲಿ ಇಬ್ಬರು ಪುರುಷರೊಂದಿಗೆ ವಿವಾಹಿತ ಮಹಿಳೆಯ ಚೆಲ್ಲಾಟ; ಪತಿಯಿಂದ ಸರಿಯಾಗಿ ಬಿತ್ತು ಧರ್ಮದೇಟು

ಇತ್ತೀಚಿನ ದಿನಗಳಲ್ಲಿ ವಿವಾಹಿತ ಪುರುಷರು ಮತ್ತು ಮಹಿಳೆಯರ ಅಕ್ರಮ ಸಂಬಂಧದ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಇಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಹೋಟೆಲ್ ರೂಮಿನಲ್ಲಿ ವಿವಾಹಿತ ಮಹಿಳೆಯೊಬ್ಬರು ಇಬ್ಬರು ಪುರುಷರೊಂದಿಗೆ ಚಕ್ಕಂದವಾಡುತ್ತಿದ್ದ ಸಂದರ್ಭದಲ್ಲಿ ಪತಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಆ ಮೂವರಿಗೂ ಪತಿಯ ಕೈಯಿಂದ ಸರಿಯಾಗಿ ಚಪ್ಪಲಿ ಏಟು ಬಿದ್ದಿದೆ. ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Viral Video: ಹೋಟೆಲ್ ರೂಮಿನಲ್ಲಿ ಇಬ್ಬರು ಪುರುಷರೊಂದಿಗೆ  ವಿವಾಹಿತ ಮಹಿಳೆಯ ಚೆಲ್ಲಾಟ; ಪತಿಯಿಂದ ಸರಿಯಾಗಿ ಬಿತ್ತು ಧರ್ಮದೇಟು
Follow us
ಮಾಲಾಶ್ರೀ ಅಂಚನ್​
| Updated By: ನಯನಾ ರಾಜೀವ್

Updated on: May 13, 2024 | 2:53 PM

ಅನೈತಿಕ ಸಂಬಂಧಗಳ ಕಾರಣದಿಂದಾಗಿ ಅದೆಷ್ಟೋ ಸುಂದರ ಸಂಸಾರ(Family)ಗಳು ಹಾಳಾಗಿವೆ. ಇತ್ತೀಚಿನ ದಿನಗಳಲ್ಲಿ ಈ ಅಕ್ರಮ ಸಂಬಂಧದ ಪ್ರಕರಣಗಳು ಹೆಚ್ಚುತ್ತಿವೆ. ಇಂತಹದ್ದೇ ವಿಚಿತ್ರ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದ್ದು, ಹೋಟೆಲ್(Hotel) ರೂಮಿನಲ್ಲಿ ವಿವಾಹಿತ ಮಹಿಳೆಯೊಬ್ಬರು ತನ್ನ ಇಬ್ಬರು ಪ್ರೇಮಿಗಳೊಂದಿಗೆ ಚಕ್ಕಂದವಾಡುತ್ತಿದ್ದ ಸಂದರ್ಭದಲ್ಲಿ ಪತಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಆ ಮೂವರಿಗೂ ಪತಿಯ ಕೈಯಿಂದ ಸರಿಯಾಗಿ ಚಪ್ಪಲಿ ಏಟು ಬಿದ್ದಿದೆ. ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ಘಟನೆ ಉತ್ತರ ಪ್ರದೇಶದ ಕಾಸ್‌ಗಂಜ್‌ ಎಂಬಲ್ಲಿ ನಡೆದಿದ್ದು, ಹೋಟೆಲ್‌ ರೂಮಿನಲ್ಲಿ ಪರ ಪುರುಷರೊಂದಿಗೆ ಚಕ್ಕಂದವಾಡುತ್ತಿದ್ದ ಪತ್ನಿ ಪತಿಯ ಕೈಗೆ ರೆಡ್‌ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ. ವೃತ್ತಿಯಲ್ಲಿ ವೈದ್ಯರಾದ ಇಬ್ಬರೂ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ಆದರೆ ವೈದ್ಯ ಪತಿಗೆ ತನ್ನ ಪತ್ನಿಯ ನಡವಳಿಕೆ ಸರಿಯಿಲ್ಲ ಎಂದೆನಿಸಿ, ಆಕೆಯ ಮೇಲೆ ಒಂದು ಕಣ್ಣಿಟ್ಟಿದ್ದನು.

ಹೀಗೆ ಕೆಲದಿನಗಳ ಹಿಂದೆ ಪತ್ನಿಯನ್ನು ಹಿಂಬಾಲಿಸುತ್ತಾ ಹೋದ ಹೋಟೆಲ್‌ ರೂಮಿಗೆ ಹೋದ ಈತನಿಗೆ ಆಘಾತವೊಂದು ಕಾದಿತ್ತು, ಅಲ್ಲಿ ಪತ್ನಿ ಬುಲಂದ್‌ಶಹರ್‌ ಮತ್ತು ಗಾಜಿಯಾಬಾದಿನ ಇಬ್ಬರು ಪುರುಷರೊಂದಿಗೆ ಚಕ್ಕಂದವಾಡುತ್ತಿರುವ ದೃಶ್ಯ ಪತಿಯ ಕಣ್ಣಿಗೆ ಬಿದ್ದಿದೆ. ಇದರಿಂದ ಕೋಪಗೊಂಡ ವೈದ್ಯ ಪತಿ ಹೋಟೆಲ್‌ ರೂಮಿನಲ್ಲಿದ್ದ ಮೂವರಿಗೂ ಧರ್ಮದೇಟು ಕೊಟ್ಟಿದ್ದಾನೆ.

ಮತ್ತಷ್ಟು ಓದಿ: Viral Video: 13 ವರ್ಷದ ಅಪ್ರಾಪ್ತ ಬಾಲಕನನ್ನು ವಿವಾಹವಾದ ಯುವತಿ; ವೈರಲ್ ಆಯ್ತು ವಿಡಿಯೋ

ಬಳಿಕ ಈ ಮೂವರ ವಿರುದ್ಧ ಪತಿ ಪೊಲೀಸ್‌ ಠಾಣೆಗೆ ದೂರನ್ನು ನೀಡಿದ್ದು, ಪತಿಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪತ್ನಿ ಮತ್ತು ಹೋಟೆಲ್‌ ರೂಮಿನಲ್ಲಿದ್ದ ಇಬ್ಬರು ಪುರುಷರನ್ನು ಬಂಧಿಸಿದ್ದಾರೆ. ಆದರೆ ಮಹಿಳೆ ಇವರೆಗೆ ಯಾವುದೇ ಪ್ರತಿ ದೂರನ್ನು ದಾಖಲಿಸಿಲ್ಲ ಎಂದು ವರದಿಗಳು ಹೇಳಿವೆ.

ವೈರಲ್  ವಿಡಿಯೋ:

ಈ ಕುರಿತ ವಿಡಿಯೋವನ್ನು @NCMIndiaa ಎಂಬ ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಮಹಿಳೆಯೊಬ್ಬರು ಪರ ಪುರುಷರೊಂದಿಗೆ ಚಕ್ಕಂದವಾಡುತ್ತಿದ್ದ ಸಂದರ್ಭದಲ್ಲಿ ರೆಡ್‌ ಹ್ಯಾಂಡ್‌ ಸಿಕ್ಕಿ ಬಿದ್ದು, ಪತಿಯ ಕೈಯಲ್ಲಿ ಆ ಮೂವರೂ ಚಪ್ಪಲಿ ಏಟು ತಿನ್ನುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಬಳಿಕ ಪೊಲೀಸರು ಪತಿಯ ದೂರಿನನ್ವಯ ಹೊಟೇಲ್‌ ರೂಮಿನಲ್ಲಿದ್ದ ಆ ಮೂವರನ್ನೂ ಬಂಧಿಸಿದ್ದಾರೆ.

ಮೇ 10 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.2 ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ವಿವಾಹಿತ ಮಹಿಳೆಯ ಈ ಸ್ಟೋರಿ ನೋಡಿ ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ