ವಿಶ್ವಕಪ್ ಸೆಮಿಫೈನಲ್​​ನಲ್ಲಿ ಭಾರತಕ್ಕೆ ಗೆಲುವು: ಸ್ವಿಗ್ಗಿಯಲ್ಲಿ 240 ಅಗರಬತ್ತಿ ಆರ್ಡರ್ ಮಾಡಿ ಸಂಭ್ರಮಿಸಿದ ವ್ಯಕ್ತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 16, 2023 | 5:18 PM

ನೆನ್ನೆ ನಡೆದ ವಿಶ್ವಕಪ್​​​​ ಸೆಮಿಫೈನಲ್​​ ಎಲ್ಲರ ಗಮನ ಸೆಳೆದಿದೆ. ಅದರಲ್ಲೂ ಭಾರತ ವಿಶ್ವ ಕಪ್​​​ ಫೈನಲ್​​​​ಗೆ ಲಗ್ಗೆ ಇಟ್ಟಿದ್ದು ಕ್ರಿಕೆಟ್​​ ಅಭಿಮಾನಿಗಳ ಸಂತೋಷ ತಂದಿದೆ. ಈ ಗೆಲುವನ್ನು ಅನೇಕರು ಹಲವು ರೀತಿಯಲ್ಲಿ ಸಂಭ್ರಮಿಸಿದ್ದಾರೆ. ಇಂತಹದೇ ಒಂದು ಗೆಲುವಿನ ಸಂಭ್ರಮಿಸಿದ ಕ್ಷಣವನ್ನು​​ ಎಕ್ಸ್​​ನಲ್ಲಿ ಒಬ್ಬರು ಹಂಚಿಕೊಂಡಿದ್ದಾರೆ. ಅಭಿಮಾನಿಯೊಬ್ಬರು Swiggyಯಲ್ಲಿ 240 ಪ್ಯಾಕ್​​​ ಅಗರಬತ್ತಿಗಳನ್ನು ಆರ್ಡರ್ ಮಾಡುವ ಮೂಲಕ ಭಾರತ ತಂಡ ಗೆಲುವಿನ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ.

ವಿಶ್ವಕಪ್ ಸೆಮಿಫೈನಲ್​​ನಲ್ಲಿ ಭಾರತಕ್ಕೆ ಗೆಲುವು: ಸ್ವಿಗ್ಗಿಯಲ್ಲಿ 240 ಅಗರಬತ್ತಿ ಆರ್ಡರ್ ಮಾಡಿ ಸಂಭ್ರಮಿಸಿದ ವ್ಯಕ್ತಿ
ವೈರಲ್​​​ ಫೋಟೋ
Follow us on

ಕ್ರಿಕೆಟ್​​​ ಹುಚ್ಚು ಯಾರಿಗಿಲ್ಲ ಹೇಳಿ, ಅದರಲ್ಲೂ ವಿಶ್ವಕಪ್ (World Cup)​​​ ಕ್ರೇಜ್​​​ ಸುಮಾರು ಜನರಿಗಿದೆ. ನೆನ್ನೆ ನಡೆದ ವಿಶ್ವಕಪ್​​​​ ಸೆಮಿಫೈನಲ್​​ ಎಲ್ಲರ ಗಮನ ಸೆಳೆದಿದೆ. ಅದರಲ್ಲೂ ಭಾರತ ವಿಶ್ವ ಕಪ್​​​ ಫೈನಲ್​​​​ಗೆ ಲಗ್ಗೆ ಇಟ್ಟಿದ್ದು ಕ್ರಿಕೆಟ್​​ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಟೀಮ್​​ ಇಂಡಿಯಾ ಮಾಡಿದ ಮೋಡಿ ಎಲ್ಲರ ಮನಸ್ಸು ಗೆದ್ದಿದೆ. ಕೊನೆಯ ಹಂತದಲ್ಲಿ ನಡೆದ ಹಣಾಹಣಿ ಎಲ್ಲರಲ್ಲೂ ರೋಚಕತೆಯನ್ನು ಸೃಷ್ಟಿಸಿತ್ತು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತವು ನ್ಯೂಜಿಲೆಂಡ್ ಅನ್ನು 70 ರನ್‌ಗಳಿಂದ ಸೋಲಿಸಿತು. ಭಾರತದ ಈ ಗೆಲುವುವನ್ನು ಸ್ಟೇಡಿಯಂನಲ್ಲಿ ಮಾತ್ರವಲ್ಲದೆ ಹೊರಗೆ ಕೂಡ ಅಭಿಮಾನಿಗಳು ಸಂಭ್ರಮಿಸಿದ್ದರು. ಇಂತಹದೇ ಒಂದು ಗೆಲುವಿನ ಸಂಭ್ರಮಿಸಿದ ಕ್ಷಣವನ್ನು​​ ಎಕ್ಸ್​​ನಲ್ಲಿ ಒಬ್ಬರು ಹಂಚಿಕೊಂಡಿದ್ದಾರೆ. ಅಭಿಮಾನಿಯೊಬ್ಬರು Swiggyಯಲ್ಲಿ 240 ಪ್ಯಾಕ್​​​ ಅಗರಬತ್ತಿಗಳನ್ನು ಆರ್ಡರ್ ಮಾಡುವ ಮೂಲಕ ಭಾರತ ತಂಡ ಗೆಲುವಿನ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸ್ವತಃ ಇನ್‌ಸ್ಟಂಟ್ ಡೆಲಿವರಿ ಪ್ಲಾಟ್‌ಫಾರ್ಮ್ ಹೊಂದಿರುವ Swiggy ಎಕ್ಸ್​​​ (ಹಿಂದೆ ಟ್ವಿಟರ್​​​) ಹಾಗೂ ಇನ್ಸ್ಟ್​​​ಗ್ರಾಮ್​​​ನಲ್ಲಿ ಹಂಚಿಕೊಂಡಿದೆ. ಆಲೂಗಡ್ಡೆ ಮೇಲೆ ಅಗರಬತ್ತಿಯನ್ನು ಇಟ್ಟು ಉರಿಸಿರುವ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಈ ಪೋಸ್ಟ್​​​ನಲ್ಲಿ ಡಜನ್ಗಟ್ಟಲೆ ಅಗರಬತ್ತಿಯನ್ನು ಉರಿಸಲಾಗಿದೆ. ಫೋಟೋದಲ್ಲಿ ಆಲೂಗಡ್ಡೆ ಮೇಲೆ ಅಗರಬತ್ತಿಯನ್ನು ಇಟ್ಟು ಉರಿಸಿರುವುದನ್ನು ಫೋಕಸ್​​​​ ಮಾಡಿ, ಟಿವಿಯಲ್ಲಿ ಪಂದ್ಯ ನಡೆಯುತ್ತಿರುವುದನ್ನು ಬ್ಲರ್​​ ಮಾಡಿ ತೋರಿಸಲಾಗಿದೆ.

ವೈರಲ್​​​ ಫೋಟೋ ಇಲ್ಲಿದೆ:

ಮುಂಬೈನ ಥಾಣೆಯಲ್ಲಿರುವ ವ್ಯಕ್ತಿಯೊಬ್ಬರು 240 ಅಗರಬತ್ತಿ ಪ್ಯಾಕ್​​​ಗಳನ್ನು Swiggyಯಲ್ಲಿ ಆರ್ಡರ್ ಮಾಡಿದ್ದಾರೆ. ಭಾರತದ ಕ್ರಿಕೆಟ್​​​​ ತಂಡ ಸೆಮಿಫೈನಲ್​​ನಲ್ಲಿ ಗೆಲ್ಲಬೇಕು ಎಂದು ಪ್ರಾರ್ಥಿಸಿಕೊಂಡಿದ್ದಾರೆ. ಆ ಪ್ರಕಾರ ಗೆಲುವಿನ ಸಂಭ್ರಮಕ್ಕೆ 240 ಅಗರಬತ್ತಿ ಪ್ಯಾಕ್​​​ಗಳನ್ನು Swiggyಯಲ್ಲಿ ಆರ್ಡರ್ ಮಾಡಿ ಹಚ್ಚಿದ್ದಾರೆ. ಈ ಬಗ್ಗೆ ಎಕ್ಸ್​​ನಲ್ಲಿ ಭಾರೀ ಆಸಕ್ತಿದಾಯಕ ಕಮೆಂಟ್​​ಗಳು ಬಂದಿದೆ. ಒಬ್ಬ ಬಳಕೆದಾರ ನಿಮ್ಮ ಪ್ರೀತಿಯನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗೆಳೆಯನೊಂದಿಗೆ ಆನೆಗಳ ಪುನರ್ಮಿಲನ; ಹೃದಯಸ್ಪರ್ಶಿ ದೃಶ್ಯ ನೋಡಿ ಭಾವುಕರಾದ ನೆಟ್ಟಿಗರು

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಪಂದ್ಯದಲ್ಲಿ ಭಾರತ 397 ರನ್​​ ಗಳಿಸುವ ಮೂಲಕ ಪೈನಲ್​​ಗೆ​​​​ ಹೆಜ್ಜೆ ಹಾಕಿದೆ. ಕಿಂಗ್​​​ ಕ್ಲೋಹಿ 117 ರ ಇನ್ನಿಂಗ್ಸ್‌ನಲ್ಲಿ 50 ನೇ ಶತಕ ಬಾರಿಸಿದ್ದಾರೆ. ನ್ಯೂಜಿಲೆಂಡ್ ಕೂಡ ಸೆಮಿಪೈನಲ್​​​ ಭಾರೀ ಪೈಪೋಟಿಯನ್ನು ನೀಡಿತ್ತು.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:22 pm, Thu, 16 November 23