Viral Video: ಏರ್​ಪೋರ್ಟಿನಲ್ಲಿ ಅಪ್ಪನನ್ನು ನೋಡುತ್ತಿದ್ದಂತೆ ಮಗ…

Relation: ಬಹಳ ದಿನಗಳ ನಂತರ ಬೇಕಾದವರನ್ನು ನೋಡಿದಾಗ ಏನನ್ನಿಸುತ್ತದೆ? ಖುಷಿ, ಅಚ್ಚರಿಯಿಂದ ಭಾವುಕರಾಗುತ್ತಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಇದನ್ನು ಗಮನಿಸಬಹುದು. ಬಹಳ ದಿನಗಳ ನಂತರ ಮಗನೊಬ್ಬ ಅಪ್ಪನನ್ನು ನೋಡಿದ್ದಾನೆ. ನೋಡಿದ ತಕ್ಷಣ ಅವನು ಕ್ಷಣವೂ ನಿಂತಲ್ಲಿ ನಿಲ್ಲದೇ ಓಡಿಬಂದು ಅವರನ್ನು ತಬ್ಬಿದ ರೀತಿ ಮಾತ್ರ ಅನನ್ಯವಾಗಿದೆ.

Viral Video: ಏರ್​ಪೋರ್ಟಿನಲ್ಲಿ ಅಪ್ಪನನ್ನು ನೋಡುತ್ತಿದ್ದಂತೆ ಮಗ...
ಏರ್​ಪೋರ್ಟಿನಲ್ಲಿ ಅಪ್ಪನನ್ನು ತಬ್ಬಿಕೊಂಡ ಮಗ
Follow us
ಶ್ರೀದೇವಿ ಕಳಸದ
|

Updated on: Nov 16, 2023 | 3:02 PM

Father Son: ಸ್ನೇಹವೇ ಆಗಿರಲಿ ಯಾವುದೇ ಸಂಬಂಧವೇ ಆಗಿರಲಿ ಅದೊಂದು ಅನುಭಾವ. ಪದಗಳಲ್ಲಿ ವಿವರಿಸಲಾಗದಂಥ ಅನುಬಂಧ. ಇದೀಗ ಅಪ್ಪ ಮಗನ ವಿಡಿಯೋ ವೈರಲ್ ಆಗಿದೆ. ಏರ್​ಪೋರ್ಟಿನಲ್ಲಿ  (Airport) ದೂರದಿಂದ ಅಪ್ಪನನ್ನು ನೋಡಿದ ಮಗ, ಜಿಂಕೆಯ ಮರಿಯಂತೆ ಜಿಗಿಜಿಗಿದು ಓಡಿ ಬರುತ್ತಾನೆ. ಬಂದವನೇ ಅಪ್ಪನನ್ನು ಅಪ್ಪಿ, ಏರಿ ಕುಳಿತುಕೊಳ್ಳುತ್ತಾನೆ. ಹಾಗೆಂದು ಮಗನೇನು ಶಾಲಾಬಾಲಕನಲ್ಲ! ಈ ಆಪ್ತವಾದ ವಿಡಿಯೋ ನೋಡಿದ ನೆಟ್ಟಿಗರು ಭಾವುಕರಾಗುತ್ತಿದ್ದಾರೆ. ತಮ್ಮ ತಂದೆಯನ್ನು ನೆನಪಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : Viral Video: ಗೆಳೆಯನೊಂದಿಗೆ ಆನೆಗಳ ಪುನರ್ಮಿಲನ; ಹೃದಯಸ್ಪರ್ಶಿ ದೃಶ್ಯ ನೋಡಿ ಭಾವುಕರಾದ ನೆಟ್ಟಿಗರು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

18 ಗಂಟೆಗಳ ಹಿಂದೆ ಇನ್​ಸ್ಟಾಗ್ರಾಂನ ಗುಡ್​ ಮೂವ್​ಮೆಂಟ್ ಖಾತೆಯಲ್ಲಿ ಈ ಪೋಸ್ಟ್​ ಹಂಚಿಕೊಳ್ಳಲಾಗಿದೆ. ಈತನಕ ಸುಮಾರು 10 ಲಕ್ಷ ಜನರು ನೋಡಿದ್ದು 54,000 ಲಕ್ಷ ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.

ಅಪ್ಪ ಮಗನ ಆಪ್ತವಾದ ವಿಡಿಯೋ

ನಿಜಕ್ಕೂ ಈ ವಿಡಿಯೋ ನೋಡಿ ನನ್ನ ಕಣ್ಣಲ್ಲಿ ನೀರು ಜಿನುಗುತ್ತಿದೆ ಎಂದಿದ್ದಾರೆ ಒಬ್ಬರು. ನನಗೆ ತೀರಿಹೋದ ನನ್ನ ಅಪ್ಪ ನೆನಪಾಗುತ್ತಿದ್ದಾರೆ ಎಂದಿದ್ದಾರೆ ಇನ್ನೊಬ್ಬರು. ನನ್ನ ಹಾಸ್ಟೆಲ್​ ದಿನಗಳಲ್ಲಿ ನಾನು ಅಪ್ಪನನ್ನು ಹೀಗೆಯೇ ಓಡಿಬಂದು ತಬ್ಬಿಕೊಳ್ಳುತ್ತಿದ್ದೆ ಎಂದಿದ್ದಾರೆ ಮತ್ತೊಬ್ಬರು. ಅಮ್ಮ ನನ್ನನ್ನು ಹಾಸ್ಟೆಲ್​​ಗೆ ನೋಡಲು ಬಂದಾಗ ಹೀಗೆಯೇ ಕೂಸುಮರಿಯಂತೆ ಆಗುತ್ತಿದ್ದೆ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral: ಟಿಂಡರ್​; ಹುಡುಗರು ಯಾಕಿಷ್ಟು ಹತಾಶೆಗೊಳಗಾಗುತ್ತಿದ್ದಾರೆ? ಯುವತಿಯ ಪ್ರಶ್ನೆ

ಮಕ್ಕಳು ಎಷ್ಟೇ ದೊಡ್ಡವರಾದರೂ ಅಪ್ಪಂದಿರಿಗೆ ಅವರಿನ್ನೂ ಮಕ್ಕಳೇ ಅಲ್ವಾ? ಎಂದಿದ್ದಾರೆ ಒಬ್ಬರು. ಅಬ್ಬಾ! ಅಪ್ಪ ಎಂದರೆ ಸೂಪರ್​ಮ್ಯಾನ್​, ದೊಡ್ಡಮಗುವನ್ನು ಎತ್ತಿಕೊಂಡಿರುವುದನ್ನು ನೋಡಿ ಎಂದಿದ್ದಾರೆ ಇನ್ನೊಬ್ಬರು. ಈಗಲೂ ನಾನು ಅಪ್ಪನನ್ನು ಹೀಗೆಯೇ ತಬ್ಬಿಕೊಳ್ಳುತ್ತೇನೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Brain Teaser: ಮೆದುಳಿಗೆ ಗುದ್ದು; ಶಾಲಾದಿನಗಳ ಇಂಥ ಲೆಕ್ಕಗಳು ನೆನಪಿವೆಯೇ? ಹಾಗಿದ್ದರೆ ಪ್ರಯತ್ನಿಸಿ

ವರ್ಷಗಳ ನಂತರ ಅಪ್ಪನನ್ನು ನೋಡಿದಾಗ ಹೀಗೆಯೇ ಆಗುತ್ತದೆ, ಈ ದೃಶ್ಯ ನೋಡಿ ನನಗಂತೂ ಕಣ್ಣು ಉಕ್ಕುತ್ತಿವೆ ಎಂದಿದ್ದಾರೆ ಮಗದೊಬ್ಬರು. ಹೀಗೆ ನಾನು ನನ್ನ ಗೆಳೆಯರನ್ನು ನೋಡಿದಾಗ ಮಾಡುತ್ತೇನೆ, ಆದರೆ ಈ ಅಪ್ಪ ಮಗ ಗ್ರೇಟ್​ ಎಂದಿದ್ದಾರೆ ಇನ್ನೊಬ್ಬರು.

ಈ ವಿಡಿಯೋ ನೋಡಿದ ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು