Viral Video: ಸ್ಪೈಡರ್​ಕ್ಯಾಟ್​; ಕಂಡೀರಾ ಗೋಡೆ ಏರುವ ಬೆಕ್ಕನ್ನು?

Cat Lovers: ಬೆಕ್ಕು ಎಂದಾದರೂ ಗೋಡೆ ಏರುತ್ತವೆಯೇ? ಆದರೆ ಈ ಬೆಕ್ಕು ಏರಿದೆ. ಅರೆ ಹೇಗೆ ಎಂದು ಅಚ್ಚರಿಯಾಗುತ್ತಿದೆಯೇ? ಅಚ್ಚರಿಯಾಗುವ ರೀತಿಯಲ್ಲಿಯೇ ಇದೆ ಈ ವಿಡಿಯೋ. ಹಾಗಿದ್ದರೆ ಈ ಬೆಕ್ಕು ಗೋಡೆಯನ್ನು ಸರಾಗವಾಗಿ ಏರಿದ್ದರ ಹಿಂದಿರುವ ತಂತ್ರವೇನು? ಒಂದೇ ಒಂದು ಬೆಳಕಿನ ಕಿರಣವನ್ನು ಹಿಂಬಾಲಿಸಿ ಈ ಬೆಕ್ಕು ತನ್ನನ್ನೇ ತಾ ಮೈಮರೆತಿದೆ!

Viral Video: ಸ್ಪೈಡರ್​ಕ್ಯಾಟ್​; ಕಂಡೀರಾ ಗೋಡೆ ಏರುವ ಬೆಕ್ಕನ್ನು?
ಲೇಸರ್​ ಕಿರಣವನ್ನು ಅನುಸರಿಸಿ ಸರಸರನೆ ಗೋಡೆ ಏರುತ್ತಿರುವ ಬೆಕ್ಕು
Follow us
ಶ್ರೀದೇವಿ ಕಳಸದ
|

Updated on:Nov 17, 2023 | 11:16 AM

Cats: ಇದೀಗ ವೈರಲ್ ಆಗಿರುವ ಈ ವಿಡಿಯೋ ಬೆಕ್ಕುಪ್ರಿಯರನ್ನು ಮತ್ತಷ್ಟು ಅಚ್ಚರಿ ಮತ್ತು ಸಂತೋಷದಲ್ಲಿ ಇರಿಸುವಂಥದ್ದು. ಇದರ ಪೋಷಕ ಲೇಸರ್​ ಕಿರಣವನ್ನು (Laser light) ಗೋಡೆಯ ಮೇಲೆ ಬಿಡುತ್ತಿದ್ದಂತೆ ಸರಸರನೆ ಅದು ಗೋಡೆ ಹತ್ತಿ ಸೀಲಿಂಗ್​ ಕೂಡ ತಲುಪಿಬಿಡುತ್ತದೆ. ಇದನ್ನು ನೋಡಿದ ಯಾರಿಗೂ ಅಚ್ಚರಿಯಾಗದೇ ಇದ್ದೀತೇ? ನೆಲದ ಮೇಲೆ ಓಡಾಡುವ ಬೆಕ್ಕು ಗ್ರಾಫಿಕ್ ಬೆಕ್ಕಿನಂತೆ ಗೋಡೆ ಏರುತ್ತದೆಯೆಂದರೆ! ನೆಟ್ಟಿಗರು ಈ ವಿಡಿಯೋ ನೋಡಿ ವಿಸ್ಮಯಕ್ಕೊಳಗಾಗಿದ್ದಾರೆ. ಒಂದು ಬೆಳಕಿನ ಕಿರಣವನ್ನು ನಂಬಿಕೊಂಡ ಬೆಕ್ಕು ತನ್ನ ಸಾಮರ್ಥ್ಯವನ್ನು ಹೇಗೆ ಮೆರೆಯುತ್ತದೆಯಲ್ಲ?

ಇದನ್ನೂ ಓದಿ : Viral Video: ಏರ್​ಪೋರ್ಟಿನಲ್ಲಿ ಅಪ್ಪನನ್ನು ನೋಡುತ್ತಿದ್ದಂತೆ ಮಗ… 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಬೆಕ್ಕಿನ ಈ ಸ್ಟಂಟ್​ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. 6 ದಿನಗಳ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋವನ್ನು ಈತನಕ 10 ಮಿಲಿಯನ್​ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. 2.9 ಲಕ್ಷ ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ.

ಸ್ಪೈಡರ್​ ಕ್ಯಾಟ್​ ಇಲ್ಲಿದೆ!

ಈ ಬ್ರೋ ಗುರುತ್ವಾಕರ್ಷಣೆಯನ್ನೇ ಮರೆತಂತಿದೆ ಎಂದಿದ್ದಾರೆ ಒಬ್ಬರು. ಇವನು ಕಾರ್ಪೋರೇಟ್​ ಏಣಿಯನ್ನು ಏರುತ್ತಿದ್ದಾನೆ, ಕಾಯುತ್ತಿರಿ ಎಂದಿದ್ದಾರೆ ಇನ್ನೊಬ್ಬರು. ಗ್ರಾವಿಟಿ ಚಾಟ್​ ಮೀರಿ ಹೋಗಿದೆ ಎಂದಿದ್ದಾರೆ ಮತ್ತೊಬ್ಬರು. ನಾನು ಕೂಡ ಹೀಗೆ ನಮ್ಮ ಮನೆಯ ಬೆಕ್ಕಿಗೆ ಪ್ರಯತ್ನಿಸಬೇಕು ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಗೆಳೆಯನೊಂದಿಗೆ ಆನೆಗಳ ಪುನರ್ಮಿಲನ; ಹೃದಯಸ್ಪರ್ಶಿ ದೃಶ್ಯ ನೋಡಿ ಭಾವುಕರಾದ ನೆಟ್ಟಿಗರು

ಭಲೇ ಭಲೇ ಸ್ಪೈಡರ್​ ಕ್ಯಾಟ್ ಅಂತಾನೇ ಸೀರಿಸ್​ ಶುರು ಮಾಡಬಹುದು ಎಂದಿದ್ದಾರೆ ಒಬ್ಬರು. ಈ ಬೆಕ್ಕಿನಂತೆ ನಾನೂ ಸರಸರನೆ ಗೋಡೆ ಏರುವುದನ್ನು ಕಲಿಯಬೇಕು ಎಂದಿದ್ದಾರೆ ಮತ್ತೊಬ್ಬರು. ನಮ್ಮ ಮನೆ ಹೀಗೆ ಗಿಡವನ್ನು ಏರುತ್ತದೆ. ಆದರೆ ಗೋಡೆ ಏರಿದ ಬೆಕ್ಕನ್ನು ಇದೇ ಮೊದಲು ಸಲ ನೋಡುತ್ತಿರುವುದು ಎಂದಿದ್ದಾರೆ ಮಗದೊಬ್ಬರು. ಮನುಷ್ಯನೇ ಆಗಿರಲಿ ಪ್ರಾಣಿಯೇ ಆಗಿರಲಿ ಬೆರಗು ಅವರ/ಅದರ ಮಿತಿಯನ್ನು ಮುರಿಯುತ್ತದೆ ಎಂದಿದ್ದಾರೆ ಇನ್ನೂ ಒಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:16 am, Fri, 17 November 23

ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ