ಹೃದಯದಲ್ಲಿ ಮಡುಗಟ್ಟಿದ ನೋವು, ಮೊಗದಲ್ಲಿ ಮುಗುಳ್ನಗೆ, ತನ್ನ ಸಾವಿನ ಸುದ್ದಿಯನ್ನು ತಾನೇ ಘೋಷಿಸಿದ ಮಹಿಳೆ
ಪ್ರೀತಿಸುವ ಗಂಡ, ಮುದ್ದಾದ ಮಕ್ಕಳು, ಜೀವನವನ್ನು ಸಾಗಿಸಲು ಬೇಕಾದಷ್ಟು ಸಂಪಾದನೆ ಇನ್ನೇನು ಬೇಕು ಹೇಳಿ ಬದುಕಲ್ಲಿ. ಆದರೆ ಅಂತಹ ಸುಂದರ ಬದುಕಲ್ಲಿ ಕ್ಯಾನ್ಸರ್ ಎನ್ನುವ ಬಿರುಗಾಳಿ ಬೀಸಿದಾಗ ಅದನ್ನು ತಡೆದುಕೊಳ್ಳುವ ಶಕ್ತಿ ಯಾರಿಗೂ ಇರುವುದಿಲ್ಲ. ಆದರೆ ಈ ಮಹಿಳೆ ತನ್ನ ಸಾವಿನ ಸುದ್ದಿಯನ್ನು ತಾನೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ.

ಎಂದೂ ತನಗೆ ಇಂಥಾ ಪರಿಸ್ಥಿತಿ ಬಂದುಬಿಡ್ತಲ್ಲಾ ಎಂದು ದೇವರನ್ನು ಶಪಿಸಿಲ್ಲ, ಇರುವಷ್ಟು ದಿನ ಇದ್ದ ಜೀವನವನ್ನು ಖುಷಿಯಿಂದಲೇ ಕಳೆದಿದ್ದಾರೆ ಈ ಮಹಿಳೆ. ಈ ಮಹಿಳೆ ಹೆಸರು ಕೇಸಿ ಮ್ಯಾಕ್ಇಂಟೈರ್ ಆಕೆ ಅಂಡಾಶಯದ ಕ್ಯಾನ್ಸರ್ನಿಂದ ಭಾನುವಾರ ನಿಧನರಾಗಿದ್ದಾರೆ. ಆಕೆ ಸಾಯುವ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಸಾವನ್ನು ಘೋಷಿಸಿ ಬಳಿಕ ಪ್ರೀತಿಪಾತ್ರರಿಗೆ ಕೊನೆಯ ವಿದಾಯವನ್ನು ಬರೆದಿದ್ದಳು.
ನೀವು ಈ ಪೋಸ್ಟ್ ಅನ್ನು ಓದುತ್ತಿದ್ದರು ನಾನು ಈ ಜಗತ್ತಿನಲ್ಲಿ ಇಲ್ಲ ಎಂದರ್ಥ, ನನಗೆ ಅಂಡಾಶಯ ಕ್ಯಾನ್ಸರ್ ಇತ್ತು ಅದನ್ನು ನಾಲ್ಕನೇ ಹಂತವನ್ನು ತಲುಪಿತ್ತು. ಚಿಕಿತ್ಸೆ ಪಡೆದ ಬಳಿಕವೂ ಪುನರಾವರ್ತನೆಯಾಗಿದೆ.
ಈ ಐದು ತಿಂಗಳು ವರ್ಜೀನಿಯಾ, ರೋಡ್ ಐಲೆಂಡ್ ಹಾಗೂ ನ್ಯಾಯಾರ್ಕ್ನಲ್ಲಿ ನನ್ನ ಸ್ನೇಹಿತರೊಂದಿಗೆ ಹಾಗೂ ಕುಟುಂಬದ ಜತೆ ಕಳೆಯಲು ಅವಕಾಶ ದೊರೆತಿರುವುದಕ್ಕೆ ನಾನು ಧನ್ಯ.
ಆಸ್ಪತ್ರೆಗೆ ತೆರಳಿ ಯಾರಿಗೂ ತಿಳಿಯದಂತೆ ಬೇರೆಯವರ ವೈದ್ಯಕೀಯ ಸಾಲವನ್ನು ತಾವು ಪಾವತಿಸಲು ಚಾರಿಟಿಯನ್ನು ತೆರೆಯುವುದು ಆಕೆಯ ಕನಸಾಗಿತ್ತು, ಆ ಕನಸನ್ನು ಸಾಕಾರಗೊಳಿಸುತ್ತೇನೆ ಎಂದು ಮಹಿಳೆಯ ಪತಿ ತಿಳಿಸಿದ್ದಾರೆ. ಶುಕ್ರವಾರದವರೆಗೆ 1.09 ಕೋಟಿ ರೂ. ಸಂಗ್ರಹವಾಗಿದೆ. ಕೇಸಿ ಅವರು ಮಕ್ಕಳು ಹಾಗೂ ವಯಸ್ಕರಿಗೆ ಪುಸ್ತಕಗಳನ್ನು ಪ್ರಕಟಿಸುವ ಪೆಂಗ್ವಿನ್ ರಾಂಡಮ್ ಹೌಸ್ನಲ್ಲಿ ಪ್ರಕಾಶಕರಾಗಿದ್ದರು.
ಕೇಸಿ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ, ನಾವು ನಿಮ್ಮನ್ನು ಕಳೆದುಕೊಂಡುಬಿಟ್ಟೆವು, ನೀನೆಲ್ಲೇ ಇದ್ದರೂ ನಮ್ಮೊಂದಿಗೆ ಇದ್ದೀಯ ಎನ್ನುವ ಭಾವನೆ ನಮ್ಮದು ಎಂದು ಪತಿ ಬರೆದುಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:33 pm, Fri, 17 November 23