Viral Video: ಗೆಳೆಯನೊಂದಿಗೆ ಆನೆಗಳ ಪುನರ್ಮಿಲನ; ಹೃದಯಸ್ಪರ್ಶಿ ದೃಶ್ಯ ನೋಡಿ ಭಾವುಕರಾದ ನೆಟ್ಟಿಗರು
Wildlife : ಪ್ರಾಣಿಗಳು ಮತ್ತು ಮನುಷ್ಯರು ಒಮ್ಮೆ ಪರಸ್ಪರ ಸ್ನೇಹಿತರಾದರೆ ಮುಗಿಯಿತು. ಜೀವನಪರ್ಯಂತ ಆ ಪ್ರೀತಿ, ವಿಶ್ವಾಸ, ನೆನಪು ಜೀವಂತವಾಗಿರುತ್ತದೆ. ಇದೀಗ ಕೆನಡಾದ ಅಭಯಾರಣ್ಯದ ದೃಶ್ಯ ವೈರಲ್ ಆಗುತ್ತಿದೆ. ಒಂದು ತಿಂಗಳ ನಂತರ ತಮ್ಮನ್ನು ನೋಡಲು ಬರುತ್ತಿರುವ ಸ್ನೇಹಿತನನ್ನು ನೋಡಿದ ಎರಡು ಆನೆಗಳು ಅವನನ್ನು ಬರಮಾಡಿಕೊಳ್ಳುವ ರೀತಿ ಬಹಳ ಆಪ್ತವಾಗಿದೆ.
Elephant Lover : ಪ್ರಾಣಿಗಳಿಗೂ ಮತ್ತು ಮನುಷ್ಯರಿಗೂ ಅವಿನಾಭಾವ ಸಂಬಂಧ. ಸಾಕುಪ್ರಾಣಿಗಳಾದ ಬೆಕ್ಕು, ನಾಯಿ, ಹಸು, ಕುದುರೆ ಇವೆಲ್ಲವುಗಳೊಂದಿಗೆ ಆಪ್ತವಾಗಿ ಒಡನಾಡುವುದು ಸಹಜ. ಆದರೆ ವನ್ಯಜೀವಿಗಳೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳುವುದು ಅಪರೂಪ. ಇದೀಗ ವೈರಲ್ (Viral) ಆಗಿರುವ ಈ ವಿಡಿಯೋದಲ್ಲಿ ಎರಡು ಆನೆಗಳು ಬಹಳ ದಿನಗಳ ನಂತರ ತಮ್ಮ ಗೆಳೆಯನನ್ನು ಎದುರುಗೊಂಡಿವೆ. ಈ ಭಾವಪೂರ್ಣ ವಿಡಿಯೋ ನೋಡಿದ ನೆಟ್ಟಿಗರು ಈ ಆನೆಗಳನ್ನು ಮತ್ತವರ ಗೆಳೆಯನನ್ನು ಕೊಂಡಾಡುತ್ತಿದ್ದಾರೆ. ಇನ್ಸ್ಟಾಗ್ರಾಂನ ಗುಡ್ ಮೂವ್ಮೆಂಟ್ ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ : Viral Brain Teaser: ಮೆದುಳಿಗೆ ಗುದ್ದು; ಶಾಲಾದಿನಗಳ ಇಂಥ ಲೆಕ್ಕಗಳು ನೆನಪಿವೆಯೇ? ಹಾಗಿದ್ದರೆ ಪ್ರಯತ್ನಿಸಿ
ಈ ದೃಶ್ಯ ಕೆನಡಾ ಮೂಲದ್ದು. ಒಂದು ತಿಂಗಳ ನಂತರ ಅಭಯಾರಣ್ಯಕ್ಕೆ ಈತ ಮರಳಿದ್ದಾನೆ. ಈತ ಬರುವುದನ್ನು ಗಮನಿಸಿದ ಆನೆಗಳು ಅವನನ್ನು ಸ್ವಾಗತಿಸಿದ ರೀತಿ ಆಪ್ಯಾಯಮಾನವಾಗಿದೆ. ಒಂದು ದಿನದ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋವನ್ನು ಸುಮಾರು 2 ಮಿಲಿಯನ್ ಜನರು ನೋಡಿದ್ದಾರೆ. 1.4 ಲಕ್ಷ ಜನರು ಈ ವಿಡಿಯೋ ಲೈಕ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.
ಆನೆಗಳು ತಮ್ಮ ಗೆಳೆಯನನ್ನು ಸ್ವಾಗತಿಸಿದ ವಿಡಿಯೋ
View this post on Instagram
ಈ ದೃಶ್ಯ ನೋಡಿ ನನ್ನ ಕಣ್ಣುಗಳು ತುಂಬಿಕೊಂಡವು ಎಂದು ಒಬ್ಬರು. ನನ್ನ ಮನಸ್ಸು ತೋಯ್ದಿತು ಎಂದು ಇನ್ನೊಬ್ಬರು. ಆನೆ ಸೌಮ್ಯ ಮತ್ತು ದೈತ್ಯ, ಎಂದಿಗೂ ಪುಟ್ಟ ಮಗುವಿನಂತೆ ಎಂದಿದ್ದಾರೆ ಮತ್ತೊಬ್ಬರು. ಇಂಥ ಅವಕಾಶ ಎಲ್ಲರಿಗೂ ದೊರೆಯಲಾರದು ಎಂದಿದ್ದಾರೆ ಮಗದೊಬ್ಬರು. ಇದಕ್ಕೇ ಮನುಷ್ಯರಿಗಿಂತ ಪ್ರಾಣಿಗಳಲೇ ಮೇಲು ಎನ್ನುವುದು ಎಂದಿದ್ದಾರೆ ಇನ್ನೂ ಒಬ್ಬರು.
ಇದನ್ನೂ ಓದಿ : Viral: ಫ್ಲೋರಿಡಾ; 5 ಜನರಿಂದ 17 ಅಡಿ ಹೆಬ್ಬಾವಿನ ರಕ್ಷಣೆ, ಫೋಟೋ ವೈರಲ್
ಇದು ಶುದ್ಧ ಪ್ರೀತಿ ಎಂದಿದ್ದಾರೆ ಒಬ್ಬರು. ಸ್ನೇಹ ಮತ್ತು ವಿಶ್ವಾಸದ ಅಪರೂಪದ ಕ್ಷಣಗಳು ಎಂದಿದ್ದಾರೆ ಇನ್ನೊಬ್ಬರು. ಈ ವಿಡಿಯೋ ಅನೇಕರ ಮನಸನ್ನು ಮುದಗೊಳಿಸಿದೆ. ಈತನಕ ನೋಡಿದ ಅಪರೂಪದ ವಿಡಿಯೋಗಳಲ್ಲಿ ಇದು ಒಂದು. ಈ ವಿಡಿಯೋ ನೋಡಿದಾಗಿನಿಂತ ಮನಸ್ಸು ಉಲ್ಲಾಸದಿಂದ ತುಯ್ಯುತ್ತಿದೆ ಎಂದಿದ್ದಾರೆ ಕೆಲವರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ