ವಿಶ್ವಕಪ್ ಸೆಮಿಫೈನಲ್ನಲ್ಲಿ ಭಾರತಕ್ಕೆ ಗೆಲುವು: ಸ್ವಿಗ್ಗಿಯಲ್ಲಿ 240 ಅಗರಬತ್ತಿ ಆರ್ಡರ್ ಮಾಡಿ ಸಂಭ್ರಮಿಸಿದ ವ್ಯಕ್ತಿ
ನೆನ್ನೆ ನಡೆದ ವಿಶ್ವಕಪ್ ಸೆಮಿಫೈನಲ್ ಎಲ್ಲರ ಗಮನ ಸೆಳೆದಿದೆ. ಅದರಲ್ಲೂ ಭಾರತ ವಿಶ್ವ ಕಪ್ ಫೈನಲ್ಗೆ ಲಗ್ಗೆ ಇಟ್ಟಿದ್ದು ಕ್ರಿಕೆಟ್ ಅಭಿಮಾನಿಗಳ ಸಂತೋಷ ತಂದಿದೆ. ಈ ಗೆಲುವನ್ನು ಅನೇಕರು ಹಲವು ರೀತಿಯಲ್ಲಿ ಸಂಭ್ರಮಿಸಿದ್ದಾರೆ. ಇಂತಹದೇ ಒಂದು ಗೆಲುವಿನ ಸಂಭ್ರಮಿಸಿದ ಕ್ಷಣವನ್ನು ಎಕ್ಸ್ನಲ್ಲಿ ಒಬ್ಬರು ಹಂಚಿಕೊಂಡಿದ್ದಾರೆ. ಅಭಿಮಾನಿಯೊಬ್ಬರು Swiggyಯಲ್ಲಿ 240 ಪ್ಯಾಕ್ ಅಗರಬತ್ತಿಗಳನ್ನು ಆರ್ಡರ್ ಮಾಡುವ ಮೂಲಕ ಭಾರತ ತಂಡ ಗೆಲುವಿನ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ಹುಚ್ಚು ಯಾರಿಗಿಲ್ಲ ಹೇಳಿ, ಅದರಲ್ಲೂ ವಿಶ್ವಕಪ್ (World Cup) ಕ್ರೇಜ್ ಸುಮಾರು ಜನರಿಗಿದೆ. ನೆನ್ನೆ ನಡೆದ ವಿಶ್ವಕಪ್ ಸೆಮಿಫೈನಲ್ ಎಲ್ಲರ ಗಮನ ಸೆಳೆದಿದೆ. ಅದರಲ್ಲೂ ಭಾರತ ವಿಶ್ವ ಕಪ್ ಫೈನಲ್ಗೆ ಲಗ್ಗೆ ಇಟ್ಟಿದ್ದು ಕ್ರಿಕೆಟ್ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಟೀಮ್ ಇಂಡಿಯಾ ಮಾಡಿದ ಮೋಡಿ ಎಲ್ಲರ ಮನಸ್ಸು ಗೆದ್ದಿದೆ. ಕೊನೆಯ ಹಂತದಲ್ಲಿ ನಡೆದ ಹಣಾಹಣಿ ಎಲ್ಲರಲ್ಲೂ ರೋಚಕತೆಯನ್ನು ಸೃಷ್ಟಿಸಿತ್ತು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತವು ನ್ಯೂಜಿಲೆಂಡ್ ಅನ್ನು 70 ರನ್‌ಗಳಿಂದ ಸೋಲಿಸಿತು. ಭಾರತದ ಈ ಗೆಲುವುವನ್ನು ಸ್ಟೇಡಿಯಂನಲ್ಲಿ ಮಾತ್ರವಲ್ಲದೆ ಹೊರಗೆ ಕೂಡ ಅಭಿಮಾನಿಗಳು ಸಂಭ್ರಮಿಸಿದ್ದರು. ಇಂತಹದೇ ಒಂದು ಗೆಲುವಿನ ಸಂಭ್ರಮಿಸಿದ ಕ್ಷಣವನ್ನು ಎಕ್ಸ್ನಲ್ಲಿ ಒಬ್ಬರು ಹಂಚಿಕೊಂಡಿದ್ದಾರೆ. ಅಭಿಮಾನಿಯೊಬ್ಬರು Swiggyಯಲ್ಲಿ 240 ಪ್ಯಾಕ್ ಅಗರಬತ್ತಿಗಳನ್ನು ಆರ್ಡರ್ ಮಾಡುವ ಮೂಲಕ ಭಾರತ ತಂಡ ಗೆಲುವಿನ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸ್ವತಃ ಇನ್‌ಸ್ಟಂಟ್ ಡೆಲಿವರಿ ಪ್ಲಾಟ್‌ಫಾರ್ಮ್ ಹೊಂದಿರುವ Swiggy ಎಕ್ಸ್ (ಹಿಂದೆ ಟ್ವಿಟರ್) ಹಾಗೂ ಇನ್ಸ್ಟ್ಗ್ರಾಮ್ನಲ್ಲಿ ಹಂಚಿಕೊಂಡಿದೆ. ಆಲೂಗಡ್ಡೆ ಮೇಲೆ ಅಗರಬತ್ತಿಯನ್ನು ಇಟ್ಟು ಉರಿಸಿರುವ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ನಲ್ಲಿ ಡಜನ್ಗಟ್ಟಲೆ ಅಗರಬತ್ತಿಯನ್ನು ಉರಿಸಲಾಗಿದೆ. ಫೋಟೋದಲ್ಲಿ ಆಲೂಗಡ್ಡೆ ಮೇಲೆ ಅಗರಬತ್ತಿಯನ್ನು ಇಟ್ಟು ಉರಿಸಿರುವುದನ್ನು ಫೋಕಸ್ ಮಾಡಿ, ಟಿವಿಯಲ್ಲಿ ಪಂದ್ಯ ನಡೆಯುತ್ತಿರುವುದನ್ನು ಬ್ಲರ್ ಮಾಡಿ ತೋರಿಸಲಾಗಿದೆ.
ವೈರಲ್ ಫೋಟೋ ಇಲ್ಲಿದೆ:
haan bhay that someone from thane mai hi hoon. poore ilaake mein itna manifest karenge ki poora ilaaka dhuaan dhuaan ho jaayega 😤 https://t.co/l8zDNYqI6z pic.twitter.com/IXJ6AO3c5R
— gordon (@gordonramashray) November 15, 2023
ಮುಂಬೈನ ಥಾಣೆಯಲ್ಲಿರುವ ವ್ಯಕ್ತಿಯೊಬ್ಬರು 240 ಅಗರಬತ್ತಿ ಪ್ಯಾಕ್ಗಳನ್ನು Swiggyಯಲ್ಲಿ ಆರ್ಡರ್ ಮಾಡಿದ್ದಾರೆ. ಭಾರತದ ಕ್ರಿಕೆಟ್ ತಂಡ ಸೆಮಿಫೈನಲ್ನಲ್ಲಿ ಗೆಲ್ಲಬೇಕು ಎಂದು ಪ್ರಾರ್ಥಿಸಿಕೊಂಡಿದ್ದಾರೆ. ಆ ಪ್ರಕಾರ ಗೆಲುವಿನ ಸಂಭ್ರಮಕ್ಕೆ 240 ಅಗರಬತ್ತಿ ಪ್ಯಾಕ್ಗಳನ್ನು Swiggyಯಲ್ಲಿ ಆರ್ಡರ್ ಮಾಡಿ ಹಚ್ಚಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಭಾರೀ ಆಸಕ್ತಿದಾಯಕ ಕಮೆಂಟ್ಗಳು ಬಂದಿದೆ. ಒಬ್ಬ ಬಳಕೆದಾರ ನಿಮ್ಮ ಪ್ರೀತಿಯನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗೆಳೆಯನೊಂದಿಗೆ ಆನೆಗಳ ಪುನರ್ಮಿಲನ; ಹೃದಯಸ್ಪರ್ಶಿ ದೃಶ್ಯ ನೋಡಿ ಭಾವುಕರಾದ ನೆಟ್ಟಿಗರು
ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಪಂದ್ಯದಲ್ಲಿ ಭಾರತ 397 ರನ್ ಗಳಿಸುವ ಮೂಲಕ ಪೈನಲ್ಗೆ ಹೆಜ್ಜೆ ಹಾಕಿದೆ. ಕಿಂಗ್ ಕ್ಲೋಹಿ 117 ರ ಇನ್ನಿಂಗ್ಸ್‌ನಲ್ಲಿ 50 ನೇ ಶತಕ ಬಾರಿಸಿದ್ದಾರೆ. ನ್ಯೂಜಿಲೆಂಡ್ ಕೂಡ ಸೆಮಿಪೈನಲ್ ಭಾರೀ ಪೈಪೋಟಿಯನ್ನು ನೀಡಿತ್ತು.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:22 pm, Thu, 16 November 23