Viral Video: ಕೊಳಕು ಮಂಡಲ ಹಾವನ್ನು ನುಂಗಿದ ನಾಗರ ಹಾವು

ನಾಗರ ಹಾವು ಮತ್ತು ಕೊಳಕ ಮಂಡಲ ಹಾವಿನ ಮಧ್ಯೆ ಕಾದಾಟ ಶುರುವಾಗಿದ್ದು, ಕೊನೆಗೆ ಕೊಳಕ ಮಂಡಲ ಹಾವನ್ನು, ನಾಗರ ಹಾವು  ನುಂಗಲು ಪ್ರಾರಂಭಿಸಿದೆ. 

Viral Video: ಕೊಳಕು ಮಂಡಲ ಹಾವನ್ನು ನುಂಗಿದ ನಾಗರ ಹಾವು
ಕೊಳಕು ಮಂಡಲ ಹಾವನ್ನು ನುಂಗುತ್ತಿರುವ ನಾಗರ ಹಾವು
Image Credit source: Times Now
Updated By: ವಿವೇಕ ಬಿರಾದಾರ

Updated on: Jun 21, 2022 | 12:35 PM

ಸಾಮಾನ್ಯವಾಗಿ ಹಾವು ಇಲಿಯನ್ನು (Rat) ನುಂಗೊದನ್ನ ನೋಡಿದ್ದೀವಿ ಹಾಗೇ ಕೆಲವೊಂದು ಸಾರಿ ಹೆಬ್ಬಾವು ಮತ್ತು ಆನೆಕೊಂಡದಂತಹ ಹಾವುಗಳು ದೈತ್ಯ ಪ್ರಾಣಿಗಳನ್ನು ನುಂಗಿದ್ದನ್ನು ನೋಡಿದ್ದೇವೆ. ಆದರೆ ಇತ್ತೀಚಿಗೆ ವೈರಲ್​​ ಆದ ವಿಡಿಯೋದಲ್ಲಿ ನಾಗರ ಹಾವು, ಕೊಳ ಮಂಡಲ ಹಾವನ್ನು ನುಂಗುತ್ತಿದೆ. ವಡೋದಾರದ (Vadodara) ಕಲಾಲಿ (Kalali) ಎಂಬ ನಗರದ ಮಧು ಫಾರ್ಮ್‌ನಲ್ಲಿ ನಾಗರ ಹಾವು (Snake) ಮತ್ತು ಕೊಳಕು ಮಂಡಲ (Russell’s viper) ಹಾವು ಪತ್ತೆಯಾಗಿವೆ. 6 ಅಡಿ ಉದ್ದದ ನಾಗರ ಹಾವು ಮತ್ತು ಕೊಳಕ ಮಂಡಲ ಹಾವಿನ ಮಧ್ಯೆ ಕಾದಾಟ ಶುರುವಾಗಿದ್ದು, ಕೊನೆಗೆ ಕೊಳಕು ಮಂಡಲ ಹಾವನ್ನು, ನಾಗರ ಹಾವು  ನುಂಗಲು ಪ್ರಾರಂಭಿಸಿದೆ.

ಇದನ್ನು ಕಂಡ ಫಾರ್ಮ ಮಾಲಿಕರು ವನ್ಯಜೀವಿ SOS ತಂಡವನ್ನು ಕರೆಸಿದ್ದಾರೆ. ಅವರು ಸ್ಥಳಕ್ಕೆ ಧಾವಿಸಿ ಹಾವನ್ನು ಹಿಡಿದು ಸುರಕ್ಷಿತವಾಗಿ, ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ. ನಾಗರ ಹಾವು, ಕೊಳಕ ಮಂಡಲವನ್ನು ನುಂಗುತ್ತಿರುವ ದೃಶ್ಯವನ್ನು ಸೆರೆ ಹಿಡಿದಿದ್ದು,  ವನ್ಯಜೀವಿ SOS ತಂಡ, ವನ್ಯಜೀವಿಗಳನ್ನು ರಕ್ಷಿಸುವ ತಂಡ ಮತ್ತು ಚಾರಿಟಿ ತಂಡ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ನಾಗರ ಹಾವು ಬಹಳ ನಿಧಾನವಾಗಿ ಹಾವನ್ನು ತಿನ್ನುತ್ತಿರುವುದು ಕಂಡು ಬಂದಿದೆ. ಅದು ಮೊದಲು ತಲೆಯನ್ನು ನುಂಗಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ.

ನಾಗರಹಾವು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ ಮತ್ತು ಭೂತಾನ್‌ನಲ್ಲಿ ಕಂಡು ಬರುತ್ತದೆ. ಈ ಹಾವು ಇದನ್ನು ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯಿದೆ (1972) ಅಡಿಯಲ್ಲಿ ರಕ್ಷಿಸಲಾಗಿದೆ. ಈ ನಾಗರ ಹಾವು ಆರೂವರೆ ಅಡಿ ಉದ್ದದವರೆಗೆ ಬೆಳೆಯಬಹುದು ಮತ್ತು ಉಭಯಚರಗಳು, ಸಣ್ಣ ಹಾವುಗಳು, ಹಲ್ಲಿಗಳು ಮತ್ತು ವಯಸ್ಕ ಸಸ್ತನಿಗಳನ್ನು ಬೇಟೆಯಾಡುತ್ತದೆ.

 

ಇದನ್ನು ಓದಿ: ಕಾಂಬೋಡಿಯಾದ ಮೀನುಗಾರರ ಬಲೆಗೆ ಬಿದ್ದ ವಿಶ್ವದ ಅತ್ಯಂತ ದೊಡ್ಡ ಮೀನು, ಫೋಟೋ ವೈರಲ್​​

ಕೊಳಕ ಮಂಡಲ ವಿಷಕಾರಿ ಹಾವು ಮತ್ತು ಭಾರತದ ನಾಲ್ಕು ದೊಡ್ಡ ಹಾವುಗಳಲ್ಲಿ ಒಂದಾಗಿದೆ. ಕೊಳಕ ಮಂಡಲ ಗರಿಷ್ಟ 1.5 ಮೀ (5 ಅಡಿ) ವರೆಗೆ ಬೆಳೆಯುತ್ತದೆ. ಈ ಹಾವು  ಕಪ್ಪು ಮತ್ತು ಮತ್ತೆ ಬಿಳಿ ಬಣ್ಣದಲ್ಲಿ ಮೂರು ಸಾಲುಗಳ ಕೆಂಪು-ಕಂದು ಬಣ್ಣದ ಚುಕ್ಕೆಗಳಿಂದ ಗುರುತಿಸಲಾಗಿದೆ.

ಇದನ್ನು ಓದಿ: ಹೆರಿಗೆ ವೇಳೆ ಶಿಶುವಿನ ತಲೆ ಕತ್ತರಿಸಿ ಮಹಿಳೆಯ ಗರ್ಭದಲ್ಲೇ ಬಿಟ್ಟ ಆಸ್ಪತ್ರೆ ಸಿಬ್ಬಂದಿ!

ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ    ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ