Video:18 ಅಡಿ ಎತ್ತರದ ಗೋಡೆ ಹಾರಿದ ಭಾರತೀಯ ಶ್ವಾನ, ಇಲ್ಲಿದೆ ನೋಡಿ ವಿಡಿಯೋ

ಬಿಎಸ್‌ಎಫ್ ಇವೆಂಟ್‌ನಲ್ಲಿ ಭಾರತೀಯ ನಾಯಿಯೊಂದು 18 ಅಡಿ ಎತ್ತರದ ಗೋಡೆ ಹಾರಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಭಾರತೀಯ ಶ್ವಾನಗಳು ವಿದೇಶಿ ಶ್ವಾನಗಳಷ್ಟೇ ಸಮರ್ಥವಾಗಿವೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video:18 ಅಡಿ ಎತ್ತರದ ಗೋಡೆ ಹಾರಿದ ಭಾರತೀಯ ಶ್ವಾನ, ಇಲ್ಲಿದೆ ನೋಡಿ ವಿಡಿಯೋ
18 ಅಡಿ ಎತ್ತರದ ಗೋಡೆ ಹಾರಿದ ಭಾರತೀಯ ಶ್ವಾನ
Image Credit source: Instagram

Updated on: Sep 29, 2025 | 12:30 PM

ಸಾಮಾನ್ಯವಾಗಿ ಭದ್ರತಾ ಪಡೆಗಳು (Security forces) ಜರ್ಮನ್ ಶೆಫರ್ಡ್ ಮತ್ತು ಬೆಲ್ಜಿಯನ್ ಮಾಲಿನೋಯಿಸ್‌ನಂತಹ ವಿದೇಶಿ ತಳಿಗಳನ್ನು ಮಾತ್ರ ಬಳಸುತ್ತಿದ್ದವು. ಆದರೆ ಕಳೆದ ಕೆಲವು ವರ್ಷಗಳಿಂದ ಭಾರತೀಯ ತಳಿಗಳಿಗೆ ತರಬೇತಿ ನೀಡಿ ಕೆ9 ಸ್ಕ್ವಾಡ್‌ಗಳಲ್ಲಿ ಸೇರಿಸಿಕೊಳ್ಳಲಾಗಿದೆ. ಬಿಎಸ್‌ಎಫ್‌ ಇವೆಂಟ್‌ನಲ್ಲಿ (BSF Event) ಭಾರತೀಯ ಶ್ವಾನವೊಂದು 18 ಅಡಿ ಎತ್ತರದ ಗೋಡೆ ಹಾರಿ ಎಲ್ಲರನ್ನು ಬೆರಗು ಮೂಡಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋ ನೋಡಿದ ನೆಟ್ಟಿಗರು ಸ್ಥಳೀಯ ಶ್ವಾನಗಳು ಬಲಿಷ್ಠ ಹಾಗೂ ಸಮರ್ಥವಾಗಿದೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ ಎಂದಿದ್ದಾರೆ.

ANI ಹಂಚಿಕೊಂಡಿರುವ ವಿಡಿಯೋದಲ್ಲಿ ಬಿಎಸ್‌ಎಫ್ ಕೆ9 ಶ್ವಾನವು ತನ್ನ ಹ್ಯಾಂಡ್ಲರ್ ಜೊತೆಗೆ ಎತ್ತರದ ಗೋಡೆಯ ಬಳಿ ನಿಂತಿರುವುದನ್ನು ಕಾಣಬಹುದು. ಜಿಗಿಯುವ ಮೊದಲು ಹ್ಯಾಂಡ್ಲರ್ ಶ್ವಾನವನ್ನು ಮೃದುವಾಗಿ ತಟ್ಟಿ ಪ್ರೋತ್ಸಾಹಿಸುತ್ತಾನೆ. ನಾಯಿ ತಕ್ಷಣ ಓಡಲು ಪ್ರಾರಂಭಿಸುತ್ತದೆ, ಕ್ಷಣಾರ್ಧದಲ್ಲಿ 18 ಅಡಿ ಎತ್ತರದ ಗೋಡೆಯ ಮೇಲೆ ಸುಲಭವಾಗಿ ಜಿಗಿದು ಎಲ್ಲರನ್ನು ಬೆರಗು ಮೂಡಿಸಿದೆ. ಅಲ್ಲೇ ಇದ್ದವರು ಸ್ಥಳೀಯ ಶ್ವಾನದ ಸಾಮರ್ಥ್ಯವನ್ನು ಕಂಡು ಬೆರಗಾಗಿದ್ದು, ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ.

ಇದನ್ನೂ ಓದಿ
28 ಗೋಲ್ಡನ್‌ ರಿಟ್ರೈವರ್ ಶ್ವಾನಗಳ ಜತೆ ಬೆಂಗಳೂರಿನ ಮಹಿಳೆಯ ವಾಕಿಂಗ್
ನೀರಿಗೆ ಬೀಳುತ್ತಿದ್ದ ಕಂದಮ್ಮನನ್ನು ರಕ್ಷಿಸಿದ ಶ್ವಾನ
ವೈದ್ಯರ ಹಾಸ್ಟೆಲ್​ ಟಾಯ್ಲೆಟ್​​​ ಕಮೋಡ್​​ನೊಳಗೆ ನಾಗರಹಾವು!
ಕಾಡಿನಿಂದ ನಾಡಿಗೆ ಬಂದ ಕರಡಿಗೆ ಕೂಲ್ ಡ್ರಿಂಕ್ಸ್‌ ಕುಡಿಸಿದ ಯುವಕ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:Video: ಒಂದಲ್ಲ ಎರಡಲ್ಲ 28 ಗೋಲ್ಡನ್‌ ರಿಟ್ರೈವರ್ ಶ್ವಾನಗಳ ಜತೆ ಬೆಂಗಳೂರಿನ ಮಹಿಳೆಯ ವಾಕಿಂಗ್

ಈ ವಿಡಿಯೋ ಎಂಟು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರೊಬ್ಬರು ವಾವ್ಹ್ ಅದ್ಭುತ ಎಂದಿದ್ದಾರೆ. ಭಾರತದಲ್ಲಿ 55 ಕ್ಕೂ ಹೆಚ್ಚು ವಿವಿಧ ಶ್ವಾನ ತಳಿಗಳಿವೆ. ಅವುಗಳಿಗೆ ತರಬೇತಿ ನೀಡಿ ಅವುಗಳ ಸಂರಕ್ಷಿಸಬೇಕು ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ ನಮ್ಮ ಭಾರತೀಯ ತಳಿಗಳೇ ಬೆಸ್ಟ್ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Published On - 12:27 pm, Mon, 29 September 25