Viral Video: ಅದು ವಿದ್ವಾನ್​ ಬಾತುಕೋಳಿಯವರ ಬೀಟ್​ಬಾಕ್ಸ್​​; ಎಡಿಟಿಂಗ್​ ವೇಳೆ ಗೊತ್ತಾದ ಸತ್ಯ

|

Updated on: Sep 05, 2023 | 1:37 PM

Vasudhaiva Kutumbakam: ಹೀಗೊಂದು ಬಾತುಕೋಳಿ ರೆಕಾರ್ಡಿಂಗ್​ನಲ್ಲಿ ವೃತ್ತಿಪರ ಕಲಾವಿದರಂತೆ ಪಾಲ್ಗೊಂಡಿತ್ತು ಎನ್ನುವುದು ಸಂಗೀತ ಕಲಾವಿದ ಕುಲದೀಪ್ ಎಂ ಪೈ ಅವರಿಗೆ ಎಡಿಟಿಂಗ್​​ನ ವೇಳೆ ತಿಳಿದುಬಂದಿದೆ. ತಾವು ಮಾಡುತ್ತಿದ್ದ ಪ್ರಾಜೆಕ್ಟ್​ನ ಉದ್ದೇಶವು ಬಾತುಕೋಳಿಯ ಆಕಸ್ಮಿಕ ಪ್ರವೇಶ ಮತ್ತದರ ಪ್ರಸ್ತುತಿಯಿಂದ ತನ್ನಿಂತಾನೇ ಈಡೇರಿದೆ ಎಂದು ಅವರು ಸಂತಸ ವ್ಯಕ್ತಪಡಿದ್ದಾರೆ. ನೋಡಿ ವಿಡಿಯೋ.

Viral Video: ಅದು ವಿದ್ವಾನ್​ ಬಾತುಕೋಳಿಯವರ ಬೀಟ್​ಬಾಕ್ಸ್​​; ಎಡಿಟಿಂಗ್​ ವೇಳೆ ಗೊತ್ತಾದ ಸತ್ಯ
ಸಂಗೀತ ಕಲಾವಿದ ಕುಲದೀಪ ಎಂ ಪೈ ತನ್ನ ಶಿಷ್ಯರೊಂದಿಗೆ ವಸುದೈವ ಕುಟುಂಬಕಂ ರೆಕಾರ್ಡಿಂಗ್​ನಲ್ಲಿ
Follow us on

Music : ಚೆನ್ನೈನಲ್ಲಿ ವಾಸವಾಗಿರುವ ವಿದ್ವಾನ್ ಕುಲದೀಪ ಎಂ. ಪೈ (Kuldeep M Pai) ಅನೇಕ ಪ್ರತಿಭಾವಂತ ಮಕ್ಕಳನ್ನು ಜಗತ್ತಿಗೆ ಪರಿಚಯಿಸಿದ ಸಂಗೀತ ಕಲಾವಿದ. ಸೂರ್ಯಾಗಾಯತ್ರಿ, ರಾಹುಲ್ ವೆಲ್ಲಾಲ್, ಉತ್ತರಾ ಉಣ್ಣಿಕೃಷ್ಣನ್​ ಮುಂತಾದವರು ಸಾಮಾಜಿಕ ಜಾಲತಾಣಗಳಲ್ಲಿ ಹಾಡಿದ ಭಕ್ತಿಗೀತೆಗಳಿಂದಲೇ ಅನೇಕ ಮಕ್ಕಳ ಬೆಳಗಾಗುವುದು. ಆ ಬಾಲಕಲಾವಿದರೆಲ್ಲ ಇಂದು ಹದಿಹರೆಯಕ್ಕೆ ಕಾಲಿಟ್ಟಿದ್ದು ಭಕ್ತಿ ಮತ್ತು ನಾದಮಾಧುರ್ಯವನ್ನು ಅನವರತ ಹರಿಸುತ್ತಲೇ ಇದ್ದಾರೆ. ಕುಲದೀಪ ಇತ್ತೀಚೆಗೆ ರಾಹುಲ್​ ವೆಲ್ಲಾಲ್​ ಮತ್ತು ರಘುವೀರ್ ಮಣಿಕಂಡಮ್​ ಜೊತೆಗೂಡಿ ‘ವಸುದೈವ ಕುಟುಂಬಕಂ’ ಎಂಬ ಪ್ರಾಜೆಕ್ಟ್​ನಲ್ಲಿ ತೊಡಗಿಕೊಂಡಿದ್ದರು. ಇದರ ರೆಕಾರ್ಡಿಂಗ್​ ವೇಳೆ ವಿಶೇಷ ಕಲಾವಿದರೊಬ್ಬರು ಬೀಟ್​ಬಾಕ್ಸ್ (Beatboxing)​ ಪ್ರಸ್ತುಪಡಿಸಿ ಹೋಗಿರುವುದು ಎಡಿಟಿಂಗ್ ವೇಳೆ ಬೆಳಕಿಗೆ ಬಂದಿದೆ!

ಇದನ್ನೂ ಓದಿ : Viral Video: ಶಿವಲಿಂಗದ ಮೇಲೆ ಅರ್ಘ್ಯದಿಂದ ಕೈ ತೊಳೆದುಕೊಂಡ ಉತ್ತರಪ್ರದೇಶದ ಸಚಿವ; ಪ್ರತಿಪಕ್ಷಗಳಿಂದ ಟೀಕೆ

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ವಸುದೈವ ಕುಟುಂಬಕಂ’ ಹಾಡಿನ ರೆಕಾರ್ಡಿಂಗ್ ನಡೆಸುತ್ತಿದ್ದೆವು. ಆಗ ನಮ್ಮ ಅನುಮತಿ ಇಲ್ಲದೇ ಒಬ್ಬರು ಆ ಜಾಗವನ್ನು ಪ್ರವೇಶಿಸಿದ್ದರು. ಅಲ್ಲಲ್ಲ, ಅವರ ಜಾಗವನ್ನು ನಾವು ಪ್ರವೇಶಿಸಿದ್ದೆವು ಎನ್ನುವುದೇ ಸರಿ. ನಾವು ಹಾಡುವಾಗ ಅವರು ಕ್ವ್ಯಾಕ್​ ಕ್ವ್ಯಾಕ್​ ಎಂದು ತಾಳಕ್ಕೆ ತಕ್ಕಂತೆ ತಾಳವಾದ್ಯ ಪ್ರಸ್ತುಪಡಿಸಿ ಹೋಗಿದ್ದಾರೆ. ಆದರೆ ಈ ವಿಡಿಯೋ ಅನ್ನು ಎಡಿಟ್ ಮಾಡುವಾಗ ಅವರ ಧ್ವನಿ ಅಡಕವಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಬಾತುಕೋಳಿಯ (Duck) ವಿಡಿಯೋ ನಮಗೆ ಸಿಕ್ಕಿಲ್ಲ. ಈ ಆಕಸ್ಮಿಕ ಕೂಡ ಎಷ್ಟೊಂದು ಅರ್ಥಗರ್ಭಿತವಾಗಿದೆಯಲ್ಲ? ಇಡೀ ಜಗತ್ತೇ ಒಂದು ಕುಟುಂಬ ಎನ್ನಿಸಿಕೊಳ್ಳುವುದು ಹೀಗೇ ಅಲ್ಲವೆ? ‘ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಹೇಳಿದ್ದಾರೆ ಕುಲದೀಪ.

ವಿದ್ವಾನ್​ ಬಾತುಕೋಳಿ ಪ್ರಸಂಗದ ಬಗ್ಗೆ ಕುಲದೀಪ

ರೆಕಾರ್ಡಿಂಗ್​ ವೇಳೆ ಇವರ ಹಾಡನ್ನು ಕೇಳಿಕೊಂಡು ಅಲ್ಲಿಯೇ ಓಡಾಡಿಕೊಂಡಿದ್ದ ವಿದ್ವಾನ್ ಬಾತುಕೋಳಿಯವರು, ‘ಜಗದೇವ ಕುಟುಂಬಕಂ ವಸುದೈವ ಕುಟುಂಬಕಂ’ ಎಂಬ ಪಲ್ಲವಿ ಮುಗಿದು ಚರಣ ಶುರುವಾಗುವ ಹೊತ್ತಿಗೆ ಕ್ವ್ಯಾಕ್​ ಕ್ವ್ಯಾಕ್​ ಎಂದು ಬೀಟ್​ಬಾಕ್ಸ್​ ಸಾಥಿ ಕೊಟ್ಟಿದ್ದಾರೆ. ಆ ಶ್ರುತಿ ಲಯ ಎಷ್ಟು ಪಕ್ಕಾಗಿದೆ ಎಂದರೆ ಅದೊಂದು ಬಾತುಕೋಳಿಯ ಕೂಗು ಎಂದು ಹೇಳದ ಹೊರತು ಯಾರ ಅರಿವಿಗೂ ಬಾರದಷ್ಟು. ಹೆಚ್ಚೂ ಕಡಿಮೆ ಮೋರ್ಚಿಂಗ್​ ವಾದ್ಯದ ಸಾಮ್ಯತೆ ಇದಕ್ಕೆ ಒದಗಿದೆ.

ಬಾತುಕೋಳಿಯ ಬೀಟ್​ಬಾಕ್ಸ್​ನೊಂದಿಗೆ ವಸುದೈವ ಕುಟುಂಬಕಂ ಹಾಡನ್ನು ಕೇಳಿ

ಸಕಲ ಜೀವರಾಶಿಗಳು ಪ್ರಕೃತಿಯ ಮೂಲಕ ಕಲೆಯೊಳಗೆ ಏಕತೆಯನ್ನು ಸಾಧಿಸುವುದೆಂದರೆ ಇದೇ ಏನೋ ಎನ್ನಿಸುತ್ತದೆ. ನೆಟ್ಟಿಗರನೇಕರು ಈ ವಿಡಿಯೋ ನೋಡಿ ವಿಸ್ಮಯಗೊಂಡಿದ್ದಾರೆ. ಪ್ರ್ಯಾಕ್ಟೀಸ್​ ವೇಳೆಯ ವಿಡಿಯೋಗಳನ್ನ ಹೆಚ್ಚೆಚ್ಚು ಅಪ್ಲೋಡ್ ಮಾಡಿ. ಮಕ್ಕಳು ಮತ್ತು ಯುವಪ್ರತಿಭೆಗಳಿಗೆ ಒತ್ತಾಸೆಯಾಗಿ ನಿಂತ ನಿಮಗೆ ಸಾವಿರದ ಶರಣು ನಿಮಗೆ ಒಳ್ಳೆಯದಾಗಲಿ. ನಿಜವಾದ ವಸುದೈವ ಕುಟುಂಬವನ್ನು ಕಟ್ಟುವ ಶಕ್ತಿ ಸಂಗೀತದ ಮೂಲಕ ನಿಮಗೆ ಒದಗಲಿ ಎಂದು ಅವರು ಹಾರೈಸಿದ್ದಾರೆ.

ಈ ವಿಡಿಯೋಗಳನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 1:32 pm, Tue, 5 September 23