Viral : ಮನೋರಂಜನೆಯ ಕೇಂದ್ರಶಕ್ತಿಯಾದ ಸಿನೆಮಾ ಅತ್ಯಂತ ಪ್ರಭಾವಿ ಮಾಧ್ಯಮ. ಮೆಚ್ಚಿನ ನಟನಟಿಯರ ಬಗ್ಗೆ ಆರಾಧನಾಭಾವ ವ್ಯಕ್ತಪಡಿಸುವ ಪರಿ ಬಣ್ಣಿಸಲಸದಳ. ಆದರೆ ಸಿನೆಮಾ ಎನ್ನುವುದು ವಿವಿಧ ಕಲೆಗಳ ಸಂಗಮ. ತೆರೆಯ ಹಿಂದೆ ತೆರೆಯ ಮೇಲೆ ಕಾಣದ ಅನೇಕ ಕೈಗಳ ಕೊಡುಗೆ ಇರುತ್ತದೆ. ಅದರಲ್ಲಿಯೂ ನಮ್ಮ ಭಾರತೀಯ ಸಿನೆಮಾಗಳು ಸಂಗೀತವನ್ನೇ ನೆಚ್ಚಿಕೊಂಡಂಥವು. ಹಾಗಾಗಿ ನಾಯಕನಾಯಕಿಯರಷ್ಟೇ ಪ್ರಾಧಾನ್ಯ ಹಿನ್ನೆಲೆ ಗಾಯಕರಿಗೆ. ಇದೀಗ ಈ ಕೆಳಗಿನ ಚಿತ್ರದಲ್ಲಿ ಹಾರ್ಮೋನಿಯಂ ನುಡಿಸುತ್ತಿರುವ ಈ ಬಾಲಪ್ರತಿಭೆ ಯಾರೆಂದು ಕಂಡುಹಿಡಿಯಬಲ್ಲಿರೇ?
ಹೌದು, ಭಾರತದ ಅನೇಕ ಭಾಷೆಗಳ ಚಿತ್ರಗೀತೆಗಳನ್ನು ತಮ್ಮ ಸುರೀಲಿ ಕಂಠದಿಂದ ಹಾಡಿದ ಶ್ರೇಯಾ ಘೋಷಾಲ್. ನಮ್ಮ ನಡುವಿನ ಅಪರೂಪದ, ಅಪ್ರತಿಮ ಕಲಾವಿದೆ. ಪ್ರತಿಭೆ ಸಾಮಾನ್ಯವಾಗಿ ಎಲ್ಲರಲ್ಲಿಯೂ ಇರುತ್ತದೆ. ಆದರೆ ಅದಕ್ಕೆ ಪೋಷಣೆ ಮತ್ತು ಸತತ ಸಾಧನೆ ಅತ್ಯಗತ್ಯ. ಹಾಗಾಗಿ ಕೆಲವರಷ್ಟೇ ಎತ್ತರಕ್ಕೆ ಏರುತ್ತಾರೆ. ಹನ್ನೆರಡು ವರ್ಷದವಳಿದ್ದಾಗಲೇ ಶ್ರೇಯಾ ಸಾರೆಗಮಪ ರಿಯಾಲಿಟಿ ಷೋದ ಮೂಲಕ ಇಡೀ ಭಾರತದ ಗಮನ ಸೆಳೆದರು.
ಕನ್ನಡದಲ್ಲಿಯೂ ಕೆಲ ಚಿತ್ರಗಳಿಗೆ ಅವರು ಹಾಡಿದ್ಧಾರೆ. ಗಗನವೇ ಬಾಗಿ, ಕನಸಲೂ, ಆಲೋಚನೆ, ಒಂದು ಮಳೆಬಿಲ್ಲು, ಒಮ್ಮೊಮ್ಮೆ ನನ್ನನ್ನು, ನೀನಿರೆ ಸನಿಹ, ಇವನು ಗೆಳೆಯನಲ್ಲ, ಮತ್ತೆ ಮಳೆಯಾಗಿದೆ, ಮಳೆ ನಿಂತು ಹೋದಮೇಲೆ, ಏನೋ ನನ್ನಲ್ಲಿ, ಮಳೆಯಲಿ ಮಿಂದ, ಏನೆಂದು ಹೆಸರಿಡಲಿ, ಪೋಲಿ ಇವನು, ಅರಳುತಿರು, ಸಾಲುತಿಲ್ಲವೆ, ನನ್ನ ಚಂಚಲೆ, ಮಳೆ ಬರುವ ಹಾಗಿದೆ, ಗೆಳೆಯ ಎನ್ನಲೇ, ನೀ ಮೋಹಿಸು ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ.
ಇದನ್ನೂ ಓದಿ : ನಿನ್ನ ಮೇಕೆಯಮ್ಮ ಅಲ್ಲಿದ್ದಾಳೆ ನೋಡು; ಪುಟ್ಟನ ವಿಡಿಯೋ ವೈರಲ್
ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಹೀಗೆ ಭಾರತದ ಅನೇಕ ಭಾಷೆಗಳನ್ನು ಅವರು ಆ ನೆಲದವರೇ ಎನ್ನುವಂತೆ ಸ್ಫುಟವಾಗಿ, ಸುಲಲಿತವಾಗಿ ಹಾಡುವ ರೀತಿ ಇದೆಯಲ್ಲ ಎಂಥವರನ್ನೂ ವಿಸ್ಮಯಗೊಳಿಸುತ್ತದೆ. ನೀವು ಕೂಡ ಶ್ರೇಯಾ ಅವರ ಅಭಿಮಾನಿಯಲ್ಲವೆ? ಹೇಳಿ, ಶ್ರೇಯಾ ಹಾಡಿರುವ ಯಾವ ಗೀತೆಗಳು ನಿಮಗಿಷ್ಟ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:50 pm, Wed, 17 May 23