ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ (Indira Gandhi)ಯವರು ಬರೆದ ಪತ್ರವೊಂದು ಸೋಷಿಯಲ್ ಮೀಡಿಯಾದಲ್ಲಿ ಇದೀಗ ಸಿಕ್ಕಾಪಟೆ ವೈರಲ್ (Viral Photo)ಆಗುತ್ತಿದೆ. ಸಾಮಾಜಿಕ ಜಲಾತಾಣಗಳಲ್ಲಿ ವೈರಲ್ ಆಗುವ ಎಲ್ಲವನ್ನೂ ನಂಬಲು ಸಾಧ್ಯವಿಲ್ಲವೆಂದರೂ ಈ ಪತ್ರದಲ್ಲಿ ಇಂದಿರಾ ಗಾಂಧಿ ಹೆಸರು ಮತ್ತು ಸಹಿ ಸ್ಪಷ್ಟವಾಗಿರುವುದರಿಂದ ಅದು ಅವರೇ ಬರೆದಿದ್ದು ಎಂಬುದು ದೃಢಪಟ್ಟಿದೆ. ಅಷ್ಟಕ್ಕೂ ಈ ಪತ್ರ ತುಂಬ ಸದ್ದು ಮಾಡಲು ಕಾರಣ ಅದರಲ್ಲಿದ್ದ ಇಂಟರೆಸ್ಟಿಂಗ್ ವಿಚಾರ.
ಅಂದಹಾಗೆ, ಈ ಪತ್ರವನ್ನು ಇಂದಿರಾ ಗಾಂಧಿಯವರು ಬರೆದಿದ್ದು ಉದ್ಯಮಿ ಜೆಆರ್ಡಿ ಟಾಟಾ (Jehangir Ratanji Dadabhoy Tata) ಅವರಿಗೆ. ಅದರಲ್ಲಿ ದಿನಾಂಕ 1973 ಜುಲೈ 5 ಎಂದು ನಮೂದಾಗಿದೆ. ಟಾಟಾ ಅವರು ಇಂದಿರಾ ಗಾಂಧಿಯವರಿಗೆ ಪರ್ಫ್ಯೂಮ್ (ಸುಗಂಧ ದ್ರವ್ಯ) ಉಡುಗೊರೆ ಕೊಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಇಂದಿರಾ ಗಾಂಧಿ ಬರೆದ ಪತ್ರ ಇದು. ‘ನನಗೆ ಈ ಸುಗಂಧ ದ್ರವ್ಯಗಳನ್ನು ನೋಡಿ ತುಂಬ ಥ್ರಿಲ್ ಆಗಿದೆ. ಉಡುಗೊರೆಗಾಗಿ ನಿಮಗೆ ತುಂಬ ಧನ್ಯವಾದಗಳು. ನಿಜ ಹೇಳಬೇಕೆಂದರೆ ನಾನು ಸುಗಂಧ ದ್ರವ್ಯ ಬಳಕೆ ಮಾಡುವುದಿಲ್ಲ. ಫ್ಯಾಶನ್ ಜಗತ್ತಿನ ಬಗ್ಗೆಯೂ ನಾನು ಜಾಸ್ತಿ ತಿಳಿದುಕೊಂಡವಳಲ್ಲ..ಅದರಿಂದ ದೂರವೇ ಇದ್ದೇನೆ. ಆದರೆ ಈ ಸುಗಂಧ ದ್ರವ್ಯಗಳನ್ನು ಬಳಸುವ ಮೂಲಕ ಪ್ರಯೋಗ ಮಾಡುತ್ತೇನೆ. ನಿಮ್ಮನ್ನು ನೋಡಿ ತುಂಬ ಖುಷಿಯಾಯಿತು. ನನಗೆ ವಿರುದ್ಧವಾಗಿ ಅಥವಾ ನನ್ನ ಪರವಾಗಿ ನೀವೇನೆ ಹೇಳುವುದಾದರೂ ಮುಜುಗರ ಪಟ್ಟುಕೊಳ್ಳಬೇಡಿ. ಪತ್ರ ಬರೆಯಿರಿ ಅಥವಾ ಬಂದು ಭೇಟಿಯಾಗಿ’ ಎಂಬುದು ಈ ಪತ್ರದಲ್ಲಿ ಉಲ್ಲೇಖಿತವಾದ ವಿಷಯ. ಹಾಗೇ, ಟಾಟಾ ಮತ್ತು ಅವರ ಪತ್ನಿಗೆ ಶುಭವನ್ನೂ ಕೋರಿದ್ದನ್ನು ಇದರಲ್ಲಿ ನೋಡಬಹುದು.
ಈಗ ಪತ್ರವನ್ನು ಶೇರ್ ಮಾಡಿದವರು ಉದ್ಯಮಿ ಹರ್ಷ ಗೋಯೆಂಕಾ. ಬಲಿಷ್ಠ ಪ್ರಧಾನಿ ಮತ್ತು ಪ್ರಬಲ ಉದ್ಯಮಿಯ ನಡುವಿನ ವೈಯಕ್ತಿಕ ಪತ್ರ ವಿನಿಮಯ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ಪತ್ರ ನೋಡಿದ ನೆಟ್ಟಿಗರು ಇಂದಿರಾ ಗಾಂಧಿಯವರ ಸರಳತೆಯನ್ನು ತುಂಬ ಹೊಗಳುತ್ತಿದ್ದಾರೆ. ಹಳೇ ಕಾಲದಲ್ಲಿ ಸೌಹಾರ್ದತೆ ಹೇಗಿತ್ತು ಎಂಬುದಕ್ಕೆ ಈ ಪತ್ರ ಸಾಕ್ಷಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು, ನಮ್ಮ ಪ್ರೀತಿಪಾತ್ರರೊಂದಿಗೆ ಸಂವಹನ-ಸಂಪರ್ಕ ಹೇಗಿರಬೇಕು ಎಂಬುದನ್ನು ತೋರಿಸುವಂತಿದೆ ಎಂದಿದ್ದಾರೆ.
A very personal letter exchange between a powerful Prime Minister and a giant industrialist. Sheer class ! #Tata pic.twitter.com/RqDKEcSsBf
— Harsh Goenka (@hvgoenka) July 20, 2021
ಇದನ್ನೂ ಓದಿ: BS Yediyurappa: ಕರ್ನಾಟಕದಲ್ಲಿ ಯಡಿಯೂರಪ್ಪ ನಂತರ ಬಿಜೆಪಿ ನಾಯಕ ಇವರೇನಾ? ಇಷ್ಟಕ್ಕೂ ಬಿಎಸ್ವೈ ರಾಜೀನಾಮೆಗೆ ಕಾರಣವೇನು?
Indira Gandhi thanked industrialist JRD Tata through Letter for gifting perfumes