ಮನುಷ್ಯರನ್ನು ನೀರಿಗಿಳಿಯುವಂತೆ ಮಾಡಲು ಸಾವಿನ ನಾಟಕವಾಡುವ ಖತರ್ನಾಕ್‌ ಮೊಸಳೆಗಳು; ವಿಡಿಯೋ ವೈರಲ್‌

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 09, 2025 | 5:36 PM

ಪ್ರಕೃತಿಯಲ್ಲಿ ನಡೆಯುವ ಕೆಲವೊಂದು ವಿಚಿತ್ರ ಘಟನೆಗಳನ್ನು ನೋಡಿದಾಗ ಈ ಭೂಮಿ ಹಿಂಗೂ ನಡೆಯುತ್ತಾ ಎಂದು ನಾವು ಆಶ್ಚರ್ಯಪಡುತ್ತೇವೆ. ಇದೀಗ ಅಂತಹದ್ದೇ ಅಚ್ಚರಿಯ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹೌದು ಇಲ್ಲೊಂದು ಊರಿನಲ್ಲಿ ಮೊಸಳೆಗಳು ಮನುಷ್ಯರನ್ನು ಬೇಟೆಯಾಡಲು ನೀರಿನಲ್ಲಿ ಮುಳುಗಿದಂತೆ ನಾಟಕವಾಡುತ್ತದೆಯಂತೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಮನುಷ್ಯರನ್ನು ನೀರಿಗಿಳಿಯುವಂತೆ ಮಾಡಲು ಸಾವಿನ ನಾಟಕವಾಡುವ ಖತರ್ನಾಕ್‌ ಮೊಸಳೆಗಳು; ವಿಡಿಯೋ ವೈರಲ್‌
ವೈರಲ್ ವಿಡಿಯೋ
Follow us on

ಕಾಡಿನಲ್ಲಿರುವ ಹುಲಿ, ಸಿಂಹ, ಚಿರತೆಗಳಂತೆ ನೀರಿನಲ್ಲಿ ವಾಸವಿರುವ ಮೊಸಳೆಗಳು ಕೂಡಾ ತುಂಬಾನೇ ಡೇಂಜರಸ್‌ ಪ್ರಾಣಿಗಳು. ತನ್ನ ಬಳಿ ಬರುವಂತಹ ಎಂತಹದ್ದೇ ಬಲಿಷ್ಠ ಪ್ರಾಣಿಯನ್ನಾದರೂ ಬೇಟೆಯಾಡುವಂತಹ ಶಕ್ತಿ ಇದಕ್ಕಿದೆ. ಇವುಗಳು ಸಾಮಾನ್ಯವಾಗಿ ಇವುಗಳು ಹೊಂಚು ಹಾಕಿ ನದಿ ಬಳಿ ನೀರು ಕುಡಿಯಲು ಬರುವ ಪ್ರಾಣಿಗಳು ಅಥವಾ ಮನುಷ್ಯರ ಮೇಲೆ ಅಟ್ಯಾಕ್‌ ಮಾಡುತ್ತವೆ. ಆದರೆ ಇಲ್ಲೊಂದು ದೇಶದಲ್ಲಿ ಬುದ್ಧಿವಂತ ಮೊಸಳೆಗಳು ಯಾರೋ ನೀರಿನಲ್ಲಿ ಮುಳುಗಿ ಒದ್ದಾಡುವಂತೆ ನಾಟಕ ಮಾಡಿ, ಮನುಷ್ಯರನ್ನು ತನ್ನತ್ತ ಬರುವಂತೆ ಮಾಡಿ ಅವರುಗಳನ್ನು ಬೇಟೆಯಾಡುತ್ತಿವೆಯಂತೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಇಂಡೋನೇಷ್ಯಾದಲ್ಲಿ ನಡೆದ ಘಟನೆ ಇದಾಗಿದ್ದು, ಇಲ್ಲಿನ ಉಪು ನೀರಿನಲ್ಲಿ ವಾಸಿಸುವಂತಹ ಮೊಸಳೆಗಳು ಮನುಷ್ಯರನ್ನು ಬೇಟೆಯಾಡಲು ಖತರ್ನಾಕ್‌ ತಂತ್ರವನ್ನು ಅಳವಡಿಸಿಕೊಂಡಿದೆ. ಅದೇನೆಂದರೆ ನೀರಿನಲ್ಲಿ ಯಾರೋ ಮನುಷ್ಯರೇ ಮುಳುಗಿ ಪ್ರಾಣ ರಕ್ಷಣೆಗಾಗಿ ಸಹಾಯ ಕೇಳುವಂತೆ ನಾಟಕವಾಡುತ್ತವೆ. ಹೀಗೆ ಇದ್ಯಾರೋ ಮನುಷ್ಯರೇ ಇರಬೇಕೆಂದು ಯಾರಾದರೂ ನೀರಿಗೆ ಹಾರಿದರೆ ಅವರ ಮೇಲೆ ಮೊಸಳೆಗಳು ಕ್ಷಣಾರ್ಧದಲ್ಲಿ ಅಟ್ಯಾಕ್‌ ಮಾಡುತ್ತವೆ.

ಈ ಕುರಿತ ವಿಡಿಯೋವನ್ನು DailyLoud ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಮನುಷ್ಯರು ನಿಂತಿರುವುದನ್ನು ಕಂಡು ಮೊಸಳೆಯೊಂದು ಯಾರೋ ನೀರಿನಲ್ಲಿ ಮುಳುಗಿ ಪ್ರಾಣ ರಕ್ಷಣೆಗಾಗಿ ಸಹಾಯ ಕೇಳುವಂತೆ ನಾಟಕವಾಡುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಮೈಸೂರಿನ ಇನ್ಫೋಸಿಸ್‌ ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ ಕೊಡಲು ಚಿರತೆಯಿಂದ ಮಾತ್ರ ಸಾಧ್ಯ; ವೈರಲ್ ಆಗ್ತಿದೆ ಮೀಮ್ಸ್‌

ಜನವರಿ 8 ರಂದು ಹಂಚಿಕೊಳ್ಳಲಾದ ಈ ವಿಡಿಯೋ 16.2 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ನಿಜವೇ?ʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಎಂಥಾ ಖತರ್ನಾಕ್‌ ಐಡಿಯಾವಿದುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ