ರಸ್ತೆ ಮಧ್ಯೆ ಕುಣಿದು ವಿಡಿಯೋ ಹರಿಬಿಟ್ಟ ಯುವತಿಗೆ ಟ್ರಾಫಿಕ್ ನಿಯಮ ಉಲ್ಲಂಘನೆಗೆ ನೋಟೀಸು ನೀಡಿದ ಪೊಲೀಸರು

| Updated By: shruti hegde

Updated on: Sep 16, 2021 | 10:37 AM

Viral Video: ಟ್ರಾಫಿಕ್ ಸಿಗ್ನಲ್ ಬೀಳಲು ಯುವತಿ ಕಾಯುತ್ತಿರುತ್ತಾಳೆ. ಸಿಗ್ನಲ್ ಬಿದ್ದಿದ್ದೇ ತಡ ರಸ್ತೆ ಮಧ್ಯೆ ಕುಣಿಯಲು ಪ್ರಾರಂಭಿಸಿದ್ದಾಳೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸರಿಗೆ ಮಾಹಿತಿ ಸಿಗುತ್ತಿದ್ದಂತೆ ಟ್ರಾಫಿಕ್​ ಉಲ್ಲಂಘನೆಯಿಂದ ನೋಟೀಸು ನೀಡಿದ್ದಾರೆ.

ರಸ್ತೆ ಮಧ್ಯೆ ಕುಣಿದು ವಿಡಿಯೋ ಹರಿಬಿಟ್ಟ ಯುವತಿಗೆ ಟ್ರಾಫಿಕ್ ನಿಯಮ ಉಲ್ಲಂಘನೆಗೆ ನೋಟೀಸು ನೀಡಿದ ಪೊಲೀಸರು
ರಸ್ತೆ ಮಧ್ಯೆ ಕುಣಿದು ವಿಡಿಯೋ ಹರಿಬಿಟ್ಟ ಯುವತಿ
Follow us on

ಇನ್ಸ್ಟಾಗ್ರಾಂ ಫಾಲೋವರ್ ಶ್ರೇಯಾ ಕುಲ್ರಾ ವಾಹನ ಚಲಿಸುತ್ತಿರುವ ರಸ್ತೆ ಮಧ್ಯದಲ್ಲಿ ನೃತ್ಯ ಮಾಡಿ ವಿಡಿಯೋ ಹರಿಬಿಟ್ಟಿದ್ದಾರೆ. ಮಧ್ಯಪ್ರದೇಶದ ಇಂದೋರ್ ರಸ್ತೆಯಲ್ಲಿ ವಿಡಿಯೋ ಮಾಡಿದ್ದಾರೆ. ಸೋಷಿಯಲ್ ಮೀಡಿಯಾ ಚಾಲೆಂಜ್ ಸ್ವೀಕರಿಸಿದ ಯುವತಿ ರಸ್ತೆ ಮಧ್ಯೆ ಕುಣಿದಿದ್ದಾರೆ. ವಾಹನಗಳು ಅವರ ಹಿಂಬದಿಯಲ್ಲಿ ನಿಂತಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಟ್ರಾಫಿಕ್ ಸಿಗ್ನಲ್ ಬಿದ್ದಾಕ್ಷಣ ರಸ್ತೆಯ ಮಧ್ಯದಲ್ಲಿ ನೃತ್ಯ ಮಾಡುತ್ತಿರುವುದನ್ನು ನೋಡಬಹುದು. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಟ್ರಾಫಿಕ್ ನಿಯಮ ಉಲ್ಲಘಿಸಿದ್ದಕ್ಕಾಗಿ ಪೊಲೀಸರು ನೋಟೀಸು ನೀಡಿರುವ ಮಾಹಿತಿ ತಿಳಿದು ಬಂದಿದೆ.

ಟ್ರಾಫಿಕ್ ಸಿಗ್ನಲ್ ಬೀಳಲು ಯುವತಿ ಕಾಯುತ್ತಿರುತ್ತಾಳೆ. ಸಿಗ್ನಲ್ ಬಿದ್ದಿದ್ದೇ ತಡ ರಸ್ತೆ ಮಧ್ಯೆ ಕುಣಿಯಲು ಪ್ರಾರಂಭಿಸಿದ್ದಾಳೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸರಿಗೆ ಮಾಹಿತಿ ಸಿಗುತ್ತಿದ್ದಂತೆ ಟ್ರಾಫಿಕ್​ ಉಲ್ಲಂಘನೆಯಿಂದ ನೋಟೀಸು ನೀಡಿದ್ದಾರೆ. ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಘಟನೆಯ ಕುರಿತಾಗಿ ನಿರಾಶೆ ವ್ಯಕ್ತಪಡಿಸಿದ್ದು, ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂಬುದು ವರದಿಗಳಿಂದ ತಿಳಿದು ಬಂದಿದೆ.

ಯುವತಿಯ ಉದ್ದೇಶ ಏನೇ ಇರಲಿ. ಆದರೆ ರೂಲ್ಸ್ ಬ್ರೇಕ್ ಮಾಡಿರುವುದು ಅವಳ ತಪ್ಪು. ಮೋಟಾರು ವಾಹನ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ಆಕೆಯ ವಿಡಿಯೋವಿಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಬಳಕೆದಾರರು ಶ್ರೇಯಾ ಅವರ ನೃತ್ಯ ಕೌಶಲ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಬೇಜವಾಬ್ದಾರಿತನ ಎಂದು ಹೇಳಿದ್ದಾರೆ.

ಇದನ್ನೂ ಓದಿ:

Viral Video: ನೀರು ಕಂಡು ಖುಷಿಯಾಗಿ ಆಟವಾಡುತ್ತಾ ಈಜು ಕಲಿತ ನಾಯಿ ಮರಿಗಳ ಕ್ಯೂಟ್ ವಿಡಿಯೋ ವೈರಲ್

Viral Video: ರಸ್ತೆ ಗುಂಡಿ ಮುಚ್ಚಿದ ಬೆಂಗಳೂರಿನ ಟ್ರಾಫಿಕ್ ಪೊಲೀಸ್; ವೈರಲ್ ವಿಡಿಯೋಗೆ ಗೃಹ ಸಚಿವರಿಂದಲೂ ಮೆಚ್ಚುಗೆ

(Instagram follower making dance video on the middle of the road police issues notice for violating rules)