ಸಾಮಾಜಿಕ ಜಾಲತಾಣದಲ್ಲಿ ಈ ಒಂದು ಸುದ್ದಿ ಭಾರೀ ವೈರಲ್ ಆಗುತ್ತಿದೆ. ಒಬ್ಬ ಅಧಿಕಾರಿ ತನಗೆ ನೀಡಿದ ಕರ್ತವ್ಯವನ್ನು ಎಷ್ಟು ಜವಾಬ್ದಾರಿಯಿಂದ ಮಾಡಬೇಕು ಎಂಬುದನ್ನು ಈ ಮಹಿಳಾ ಅಧಿಕಾರಿಯಿಂದ ಕಲಿಯಬೇಕು. ಹೌದು ಇಲ್ಲೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಅಧಿಕಾರಿಯ ಕಾರ್ಯಕ್ಕೆ ಜನರು ಕೂಡ ಫಿದಾ ಆಗಿದ್ದಾರೆ. ದೇಶದಲ್ಲಿ ಲೋಕಸಭೆ ಚುನಾವಣೆ ಹಾಗೂ ವಿಧಾನಸಭೆ ಪ್ರಾರಂಭವಾಗಿದೆ. ಮೊದಲ ಹಂತದ ಚುನಾವಣೆ ಮುಕ್ತಾಯವಾಗಿದೆ. ಈ ಸಮಯದಲ್ಲಿ ಕರ್ತವ್ಯ ನಿರತರಾಗಿದ್ದ ಉತ್ತರ ಪ್ರದೇಶದ ಸಹರಾನ್‌ಪುರದ ಪೋಲಿಂಗ್ ಏಜೆಂಟ್ ಇಶಾ ಅರೋರಾ ತನ್ನ ಕೆಲಸದಲ್ಲಿ ದಕ್ಷತೆಯನ್ನು ಮೆರೆದಿದ್ದಾರೆ.
ಇಶಾ ಅರೋರಾ ಅವರನ್ನು ಗಂಗೋಹ್ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆಯ ಮೇಲ್ವಿಚಾರಕರಾಗಿ ನಿಯೋಜಿಸಲಾಗಿತ್ತು. ಕರ್ತವ್ಯ ಮತ್ತು ಸಮಯಪಾಲನೆಯಲ್ಲಿ ಅವರ ಸಮರ್ಪಣೆಯಿಂದ ಮತದಾರರ ಗಮನ ಸೆಳೆದದ್ದು, ಇದೀಗ ಈ ವಿಚಾರಕ್ಕೆ ಸಂಬಂಧಿದಂತೆ ವಿಡಿಯೋವೊಂದು ವೈರಲ್ ಆಗಿದೆ. ಇಶಾ ಅರೋರಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗಿಯಾಗಿದ್ದು, ಗಂಗೋಹ್ ವಿಧಾನಸಭಾ ಕ್ಷೇತ್ರದ ಮಹಾಂಗಿ ಗ್ರಾಮದಲ್ಲಿ ಚುನಾವಣಾ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಇದನ್ನೂ ಓದಿ: ಮಹಿಳಾ ರಿಪೋರ್ಟರ್ಗೆ ಬಲವಂತವಾಗಿ ಹಿಜಾಬ್ ಹಾಕಿದ ಮುಸ್ಲಿಂ ಯುವಕ, ಆಕೆಯ ಪ್ರತ್ಯುತ್ತರಕ್ಕೆ ನೆಟ್ಟಿಗರು ಫಿದಾ
लोगों को भाया सहारनपुर की पोलिंग अधिकारी ईशा अरोड़ा का अंदाज
सोशल मीडिया पर हुईं वायरल#ishaarora #Saharanpur #Elections2024 pic.twitter.com/22zErEnH7N
— Abhishek Pathak (@abhishekpatha01) April 19, 2024
ಎಕ್ಸ್ನಲ್ಲಿ ಈ ಬಗ್ಗೆ ಎರಡು ವಿಡಿಯೋ ವೈಲರ್ ಆಗಿದೆ. ಸಹರಾನ್‌ಪುರದ ಮತಗಟ್ಟೆ ಅಧಿಕಾರಿ ಇಶಾ ಅರೋರಾ ಅವರ ಕೆಲಸದ ಶೈಲಿ ಎಲ್ಲರ ಮನಸ್ಸು ಗೆದ್ದಿದೆ ಎಂದು ಬರೆದುಕೊಂಡಿದ್ದಾರೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಇಶಾ ಅವರು, ಈ ವಿಡಿಯೋವನ್ನು ನೋಡಲು ಸಮಯ ಸಿಕ್ಕಿಲ್ಲ, ಇದು ಚುನಾವಣಾ ಸಮಯ ಮತ್ತು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬರುವುದು ನನ್ನ ಕರ್ತವ್ಯ. ನನ್ನ ಸಮಯಪ್ರಜ್ಞೆ ಮತ್ತು ಕರ್ತವ್ಯ ಭಕ್ತಿಯಿಂದ ಈ ವಿಡಿಯೋ ವೈರಲ್ ಆಗಿದೆ ಎಂದು ಅವರು ಎಎನ್ಐಗೆ ಹೇಳಿದ್ದಾರೆ. ಇನ್ನು ಈ ವಿಡಿಯೋವನ್ನು ನೋಡಿ ಅನೇಕ ಶ್ಲಾಘಿಸಿದ್ದಾರೆ
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ