Viral Video: ಕಬಾಬ್ ಕದ್ದು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಪಾಕಿಸ್ತಾನಿ ಯುವತಿ; ಮುಂದೇನಾಯ್ತು ನೋಡಿ

ಚಿನ್ನ, ಮೊಬೈಲ್ ಇತ್ಯಾದಿ ಬೆಲೆಬಾಳುವ ವಸ್ತುಗಳನ್ನು ಕದಿಯುವ ಖತರ್ನಾಕ್ ಕಳ್ಳರಿದ್ದಾರೆ. ಆದರೆ ಇಲ್ಲೊಬ್ಬಳು ಪಾಕಿಸ್ತಾನಿ ಯುವತಿ ಅಂಗಡಿಯೊಂದರಲ್ಲಿ ಕಬಾಬ್ ಕದ್ದಿದ್ದಾಳೆ. ಹೀಗೆ ಕಬಾಬ್ ಕದ್ದು ಆಕೆ ಇನ್ನೊಂದು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಆಕೆಯನ್ನು ಅಂಗಡಿ ಮಾಲೀಕರು ಅಂಗಡಿಯೊಳಗೆ ಕೂಡಿ ಹಾಕಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Viral Video: ಕಬಾಬ್ ಕದ್ದು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಪಾಕಿಸ್ತಾನಿ ಯುವತಿ; ಮುಂದೇನಾಯ್ತು ನೋಡಿ
Follow us
ಮಾಲಾಶ್ರೀ ಅಂಚನ್​
| Updated By: ನಯನಾ ರಾಜೀವ್

Updated on: Apr 21, 2024 | 1:55 PM

ಸಾಮಾನ್ಯವಾಗಿ ಈ ಕಳ್ಳ ಖದೀಮರು ಮೊಬೈಲ್, ಪರ್ಸ್, ಚಿನ್ನಾಭರಣ ಇತ್ಯಾದಿ ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಾರೆ. ಇಂತಹ ಹಲವಾರು ಕಳ್ಳತನ ನಡೆದ ಸುದ್ದಿಗಳ ಬಗ್ಗೆ ನೀವು ಕೂಡಾ ಕೇಳಿರುತ್ತೀರಿ ಅಲ್ವಾ. ಆದರೆ ಇಲ್ಲೊಬ್ಬಳು ಪಾಕಿಸ್ತಾನಿ ಮಾತ್ರ ಯುವತಿ ಅಂಗಡಿಯೊಂದರಲ್ಲಿ ಕಬಾಬ್ ಕದ್ದು ಸಿಕ್ಕಿಬಿದ್ದಿದ್ದಾಳೆ. ಈ ಕುರಿತ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಈ ಘಟನೆ ಲಂಡನ್ ಅಲ್ಲಿ ನಡೆದಿದ್ದು, ಇಲ್ಲಿನ ಅಂಗಡಿಯೊಂದಕ್ಕೆ ಸ್ಟೈಲ್ ಆಗಿ ಬಟ್ಟೆ ತೊಟ್ಟು ನುಗ್ಗಿದ ಯುವತಿಯೊಬ್ಬಳು ಕಬಾಬ್ ಕದ್ದು ಬಳಿಕ ಅಲ್ಲಿಂದ ಸೀದಾ ಇನ್ನೊಂದು ಅಂಗಡಿಗೆ ನುಗ್ಗಿದ್ದಾಳೆ. ಇದರಿಂದ ಅನುಮಾನಗೊಂಡ ಅಂಗಡಿ ಮಾಲೀಕರು ಆಕೆಯನ್ನು ಅಂಗಡಿಯೊಳಗೆ ಕೂಡಿ ಹಾಕಿ ಆಕೆಗೆ ತಕ್ಕ ಶಾಸ್ತಿ ಮಾಡಿದ್ದಾರೆ. ಈ ಘಟನೆಗೆ ಸಂಬಂಧಪಟ್ಟ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಈ ವಿಡಿಯೋವನ್ನು @gharkekalesh ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಲಂಡನ್ ನಲ್ಲಿ ಪಾಕಿಸ್ತಾನಿ ಮೂಲದ ಹುಡುಗಿಯೊಬ್ಬಳು ಅಂಗಡಿಯಿಂದ ಕಬಾಬ್ ಕದ್ದು ಸಿಕ್ಕಿಬಿದ್ದಿದ್ದಾಳೆ. ಆಕೆ ಇನ್ನೊಂದು ಅಂಗಡಿ ಪ್ರವೇಶಿಸಿದಾಗ, ಅಂಗಡಿ ಮಾಲೀಕರು ಆಕೆಯನ್ನು ಕೂಡಿ ಹಾಕಿದ್ದಾರೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವಿಡಿಯೋ

ವೈರಲ್ ವಿಡಿಯೋದಲ್ಲಿ ಲಂಡನ್ ನಲ್ಲಿ ಪಾಕಿಸ್ತಾನ ಮೂಲದ ಯುವತಿಯೊಬ್ಬಳು ಅಂಗಡಿಯೊದರಿಂದ ಕಬಾಬ್ ಕದ್ದು ಓಡಿ ಹೋಗಿ ಇನ್ನೊಂದು ಅಂಗಡಿಯನ್ನು ಪ್ರವೇಶಿಸುತ್ತಾಳೆ. ಆಕೆಯ ನಡೆಯನ್ನು ಕಂಡು ಅನುಮಾನಗೊಂಡ ಅಂಗಡಿ ಮಾಲೀಕರು ಆಕೆಯನ್ನು ಅಂಗಡಿಯಲ್ಲಿಯೇ ಕೂಡಿ ಹಾಕಿದ್ದಾರೆ. ನಂತರ ಆಕೆ ಬಾಗಿಲು ತೆರೆಯುವಂತೆ ಹೈ ಡ್ರಾಮವನ್ನೇ ಸೃಷ್ಟಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಮತ್ತಷ್ಟು ಓದಿ: Viral News: ಶ್ರೀಕೃಷ್ಣನ ಮೂರ್ತಿಯನ್ನೇ ಮದುವೆಯಾದ 23ರ ಯುವತಿ

ಏಪ್ರಿಲ್ 14 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು “ಅಯ್ಯಯ್ಯೋ ಈಗ ಪಾಕಿಸ್ತಾನದವರು ಕಬಾಬ್ ಕೂಡಾ ಕದಿಯಲು ಶುರು ಮಾಡಿದ್ದಾರಾ” ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಕಳ್ಳತನ ಅವರ ರಕ್ತದಲ್ಲಿಯೇ ಇದೆʼ ಎಂದು ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ