Viral Video: ಫೈವ್​ಸ್ಟಾರ್ ಹೋಟೆಲ್​ನ ಟೆರೇಸ್​ನಿಂದ ವ್ಯಕ್ತಿಯ ತಳ್ಳಿದ ಉದ್ಯಮಿ

ಫೈವ್​ಸ್ಟಾರ್​ ಹೋಟೆಲ್​ನ ಟೆರೇಸ್​ನಿಂದ ಉದ್ಯಮಿಯೊಬ್ಬರು ವ್ಯಕ್ತಿಯೊನ್ನು ತಳ್ಳಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕುಡಿದ ಅಮಿಲಿನಲ್ಲಿ ಉದ್ಯಮಿ ಸಂಜಯ್ ಅರೋರಾ ಮಗ ಹಾಗೂ ಸಾರ್ಥಕ್ ಅಗರ್ವಾಲ್​ ಜಗಳವಾಡಿದ್ದಾರೆ ಅದು ಸಂಜಯ್​ವರೆಗೂ ಹೋಗಿದೆ, ಕೋಪದಲ್ಲಿ ಸಂಜಯ್ ಸಾರ್ಥಕ್​ ಕೊರಳಪಟ್ಟಿಹಿಡಿದು ಟೆರೇಸ್​ನಿಂದ ಕೆಳಗೆ ತಳ್ಳಿದ್ದಾರೆ. ಇದೀಗ ಸಾರ್ಥಕ್​ ಸ್ಥಿತಿ ಗಂಭೀರವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Viral Video: ಫೈವ್​ಸ್ಟಾರ್ ಹೋಟೆಲ್​ನ ಟೆರೇಸ್​ನಿಂದ ವ್ಯಕ್ತಿಯ ತಳ್ಳಿದ ಉದ್ಯಮಿ
Follow us
ನಯನಾ ರಾಜೀವ್
|

Updated on:Apr 22, 2024 | 10:02 AM

ಉದ್ಯಮಿ(Businessman) ಯೊಬ್ಬ ವ್ಯಕ್ತಿ ಜತೆ ಜಗಳವಾಡಿ ಬಳಿಕ ಆತನನ್ನು ಫೈವ್​ಸ್ಟಾರ್​ ಹೋಟೆಲ್​ನ ತಾರಸಿಯಿಂದ ಕೆಳಗೆ ತಳ್ಳಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಿ ವೆಡ್ಡಿಂಗ್ ಪಾರ್ಟಿಯಲ್ಲಿ ಮೊದಲು ಉದ್ಯಮಿ ಮಗ ಹಾಗೂ ವ್ಯಕ್ತಿಯೊಬ್ಬರ ನಡುವೆ ಮನಸ್ತಾಪ ಶುರುವಾಗಿತ್ತು. ಕೊನೆಗೆ ಜಗಳ ತಾರಕಕ್ಕೇರಿ ಉದ್ಯಮಿಯ ತಂದೆ ಆ ವ್ಯಕ್ತಿಯನ್ನು ತಾರಸಿಯಿಂದ ಕೆಳಗೆ ತಳ್ಳಿದ್ದಾರೆ.

ಗಾಯಗೊಂಡ ವ್ಯಕ್ತಿಯೂ ಕೂಡ ಉದ್ಯಮಿ ಎಂದು ತಿಳಿದುಬಂದಿದ್ದು ಅವರ ಹೆಸರು ಸಾರ್ಥಕ್​ ಅಗರ್ವಾಲ್​, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಹೋಟೆಲ್​ನ ಟೆರೇಸ್​ನಲ್ಲಿ ಈ ಘಟನೆ ನಡೆದಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ, ಆರೋಪಿ ಸಂಜೀವ್ ಅರೋರಾ ಇಬ್ಬರ ನಡುವೆ ಪ್ರವೇಶಿಸಿ ಕೂಡಲೇ ಅಗರ್ವಾಲ್​ ಕೊರಳುಪಟ್ಟಿಗೆ ಕೈಹಾಕಿ ಅವರನ್ನು ಟೆರೇಸ್​ನಿಂದ ತಳ್ಳಿದ್ದಾರೆ. ಅಲ್ಲಿದ್ದವರು ಎಷ್ಟೇ ಪ್ರಯತ್ನ ಪಟ್ಟರೂ ಸಂಜೀವ್​ ಕೋಪವನ್ನು ಕಡಿಮೆ ಮಾಡಲು ಸಾಧ್ಯವಾಗಲಿಲ್ಲ.

ಆ ಸಮಯದಲ್ಲಿ ಅಗರ್ವಾಲ್​ ಸಂಜೀವ್​ ಅವರ ಕಾಲಿಗೆ ಬೀಳಲು ಪ್ರಯತ್ನಿಸುತ್ತಿದ್ದರೂ ಅವರ ಮಾತನ್ನು ಕೇಳಲು ಸಂಜೀವ್ ಸಿದ್ಧವಿಲ್ಲದಿರುವುದು ಹಾಗೂ ಪದೇ ಪದೇ ಅವರ ಮೇಲೆ ಹಲ್ಲೆ ನಡೆಸುತ್ತಿರುವುದು ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಎನ್‌ಡಿಟಿವಿ ವರದಿಯ ಪ್ರಕಾರ, ಸಾರ್ಥಕ್ ಅಗರವಾಲ್, ರಿದಿಮ್ ಅರೋರಾ ಸೇರಿದಂತೆ ತನ್ನ ಸ್ನೇಹಿತರೊಂದಿಗೆ ಹೋಟೆಲ್‌ನಲ್ಲಿ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ವಾಗ್ವಾದ ನಡೆದಿದೆ. ತರುವಾಯ, ಘಟನಾ ಸ್ಥಳದಲ್ಲಿ ಸಹಾಯಕ್ಕಾಗಿ ರಿದಿಮ್ ತನ್ನ ತಂದೆ, ಜವಳಿ ಉದ್ಯಮಿ ಸಂಜೀವ್ ಅರೋರಾ ಅವರಿಗೆ ಕರೆ ಮಾಡಿದ್ದ.

ಮತ್ತಷ್ಟು ಓದಿ: ಉತ್ತರ ಕನ್ನಡ: ಕಾಳಿ ನದಿಯಲ್ಲಿ ಹುಬ್ಬಳ್ಳಿಯ ಒಂದೇ ಕುಟುಂಬದ ಆರು ಜನರು ಸಾವು

ಬಳಿಕ ಸಂಜೀವ್ ಬಂದ ನಂತರ ಸಾರ್ಥಕ್​ ಅಗರ್ವಾಲ್​ ಸಂಜೀವ್ ಅವರ ಕಾಲಿಗೆ ಕೂಡ ಬೀಳಲು ಸಿದ್ಧರಿದ್ದರು. ಆದರೆ ಸಂಜೀವ್ ಸಾರ್ಥಕ್​ ಕಾಲರ್ ಹಿಡಿದು ಕಪಾಳಮೋಕ್ಷ ಮಾಡಿ ಟೆರೇಸ್​ನಿಂದ ತಳ್ಳಿದ್ದಾರೆ. ಅಷ್ಟೇ ಅಲ್ಲದೆ ಹತ್ತಿರದಲ್ಲೇ ನಿಂತಿದ್ದ ಇನ್ನೊಬ್ಬ ವ್ಯಕ್ತಿಯ ಮೇಲೂ ಕೂಡ ಹಲ್ಲೆ ಮಾಡಿದ್ದಾರೆ.

ವಿಡಿಯೋ

ಟೆರೇಸ್​ನಿಂದ ಸಾರ್ಥಕ್​ ಬಿದ್ದಿದ್ದರೂ ಏನಾಯಿತೆಂಬ ಕನಿಷ್ಠ ಸೌಜನ್ಯವೂ ಅವರಲ್ಲಿ ಇದ್ದಂತೆ ಕಾಣಲಿಲ್ಲ. ಸಂಜಯ್​ಗೆ ಸಾರ್ಥಕ್​ ಅವರ ಜತೆ ಯಾವುದೇ ರೀತಿಯ ಸಂಬಂಧ ಇರಲಿಲ್ಲ, ಕುಡಿದ ಅಮಲಿನಲ್ಲಿ ಇಷ್ಟೆಲ್ಲಾ ನಡೆದಿದೆ ಎನ್ನಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:01 am, Mon, 22 April 24

ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್