ಈಶಾ ಫೌಂಡೇಶನ್ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತೇ ಇದೆ. ಇಲ್ಲಿ ಗೋಶಾಲೆಯನ್ನು ಕೂಡಾ ನಡೆಸಲಾಗುತ್ತದೆ. ಈ ಗೋಶಾಲೆಯಲ್ಲಿ 630ಕ್ಕೂ ಹೆಚ್ಚು ಸ್ಥಳೀಯ ತಳಿಯ ಹಸುಗಳು ಮತ್ತು ಗೂಳಿಗಳಿವೆ. ಅವುಗಳಲ್ಲಿ ಭೋಲಾ ಹೆಸರಿನ ವಿಶೇಷ ಗೂಳಿಯೂ ಒಂದು. ಈ ಬಲಾಢ್ಯ ಗೂಳಿಯನ್ನು ನೋಡಲು ಕೂಡಾ ಹಲವಾರು ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದೀಗ ಈ ಗೂಳಿಗೆ ಸಂಬಂಧಿಸಿದ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್ ಆಗಿದ್ದು, ಯುವತಿಯೊಬ್ಬಳ ಭಜನೆ ಹಾಡನ್ನು ಕೇಳಿ ಈ ಬಲಾಢ್ಯ ಗೂಳಿ ಭಾವುಕವಾಗಿ ಕಣ್ಣೀರು ಸುರಿಸಿದೆ. ಈ ದೃಶ್ಯ ನೆಟ್ಟಿಗರ ಮನಗೆದ್ದಿದೆ.
ತುಂಬಾನೇ ಆಕ್ರಮಣಕಾರಿ ಸ್ವಭಾವನ್ನು ಹೊಂದಿದ್ದ ಈ ಬಲಾಢ್ಯ ಗೂಳಿಯನ್ನು ಗೋಶಾಲೆಗೆ ತಂದು ಬಿಟ್ಟ ಬಳಿಕ ಸದ್ಗುರುಗಳ ಆರೈಕೆಯಲ್ಲಿ ಇದು ಶಾಂತಿ ಮತ್ತು ತಾಳ್ಮೆಯನ್ನು ಕಲಿಯಿತು. ನಂತರ ಸದ್ಗುರು ಈ ಗೂಳಿಗೆ ʼಭೋಲಾʼ ಎಂಬ ನಾಮಕರಣವನ್ನು ಮಾಡುತ್ತಾರೆ. ಹೀಗೆ ಗೋಶಾಲೆಗೆ ಬಂದ ಭೋಲಾ ನಂತರದಲ್ಲಿ ಎಲ್ಲರೊಂದಿಗೂ ದಯೆ ಮತ್ತು ತಾಳ್ಮೆಯಿಂದ ವರ್ತಿಸಲು ಪ್ರಾರಂಭಿಸಿತು. ಈ ಭೋಲಾನನ್ನು ನೋಡಲೆಂದೇ ಸಾವಿರಾರು ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದೀಗ ʼಭೋಲಾʼ ಗೂಳಿಯ ಮೃದು ಮನಸ್ಸಿಗೆ ಸಂಬಂಧಿಸಿದ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗುತ್ತಿದೆ.
this_is_last_time_sg ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಯುವತಿಯೊಬ್ಬಳ ಭಜನೆ ಹಾಡನ್ನು ಕೇಳುತ್ತಾ ಮಂತ್ರಮುಗ್ಧವಾಗಿ ನಿಂತ ಭೋಲಾ ಕೊನೆಯಲ್ಲಿ ಭಾವುಕವಾಗಿ ಕಣ್ಣೀರು ಸುರಿಸಿರುವ ಹೃಯಯಸ್ಪರ್ಶಿ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಅಯ್ಯೋ ದೇವ್ರೇ…. 69 ವರ್ಷದ ವರನ ಮುಖವನ್ನು ಕಂಡು ಕುಂತಲ್ಲೇ ಮೂರ್ಛೆ ಹೋದ ವಧು
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 3.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಿಜವಾಗಿಯೂ ಈ ದೃಶ್ಯ ಹೃದಯಸ್ಪರ್ಶಿಯಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅದರ ಕಣ್ಣುಗಳು ತೀರಾ ಕೆಂಪಾಗಿವೆ. ಬಹುಶಃ ಕಣ್ಣಿನ ಸೋಂಕಿನಿಂದ ನೀರು ಬಂದಿರಬಹುದುʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ