ಈ ಪ್ರಕೃತಿಯಲ್ಲಿ ಎಂತೆಂತಹ ಅದ್ಭುತಗಳಿವೆ ಅಲ್ವಾ… ಪ್ರಕೃತಿಯಲ್ಲಿನ ಈ ಕೆಲವೊಂದು ಅಚ್ಚರಿಗಳು ನಂಬಲಾಸಾಧ್ಯವಾಗಿರುತ್ತದೆ. ಮರ ಗಿಡಗಳು ಮಾತ್ರವಲ್ಲದೆ ಇಂತಹ ಅನೇಕ ವಿಶಿಷ್ಟ ಜೀವಿಗಳೂ ಕೂಡಾ ಇವೆ. ಪರಭಕ್ಷಕಗಳಿಂದ ಪ್ರಾಣರಕ್ಷಣೆಗಾಗಿ ತಮ್ಮ ರೂಪವನ್ನು ಬದಲಾಯಿಸುವ ಕೆಲವು ಜೀವಿಗಳಿವೆ. ಅವುಗಳು ತಮ್ಮ ರೂಪವನ್ನು ಎಷ್ಟರ ಮಟ್ಟಿಗೆ ಬದಲಾಯಿಸುತ್ತವೆ ಎಂದರೆ ಇವುಗಳು ನಿಜವಾಗಿಯೂ ಜೀವಂತ ಜೀವಿಯೇ ಅಥವಾ ಇನ್ನಾವುದೋ ನಿರ್ಜೀವ ವಸ್ತುವೇ ಎಂದು ತಿಳಿಯಲು ಸಹ ನಮಗೆ ಕಷ್ಟಸಾಧ್ಯವಾಗಿರುತ್ತದೆ. ಇಂತಹ ವಿಶಿಷ್ಟ ಜೀವಿಗಳ ಕುರಿತ ಕುತೂಹಲಕಾರಿ ವಿಡಿಯೋಗಳನ್ನು ನಾವೆಲ್ಲರೂ ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತೇವೆ. ಇದೀಗ ಅಂತಹದ್ದೇ ಒಂದು ಅಚ್ಚರಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಇಲ್ಲಿ ಥೇಟ್ ಒಣ ಮರದ ಕಡ್ಡಿಯಂತೆ ಕಾಣುವ ಕಡ್ಡಿ ಕೀಟವನ್ನು ಕಾಣಬಹುದು. ಇದು ನಿಜವಾಗಿಯೂ ಕೀಟವೇ ಅಥವಾ ಕಡ್ಡಿಯೇ ಎಂದು ಈ ವಿಡಿಯೋ ನೋಡಿದವರು ಕನ್ಫ್ಯೂಸ್ ಆಗಿದ್ದಾರೆ.
@jungle_pearl ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಯಾವುದೋ ಒಣ ಮರದ ಕಡ್ಡಿಯಂತೆ ಕಾಣುವ ವಿಶೇಷ ಕಡ್ಡಿ ಕೀಟವನ್ನು ಕಾಣಬಹುದು.
ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಮರದ ಕಡ್ಡಿಯೊಂದನ್ನು ಕೈಗೆತ್ತಿಕೊಳ್ಳುವುದನ್ನು ಕಾಣಬಹುದು. ನಂತರ ಅವರು ಇದು ಯಾವುದೋ ಮರದ ಕಡ್ಡಿಯಲ್ಲ, ಬದಲಿಗೆ ಇದು ಕಡ್ಡಿ ಕೀಟ ಎಂದು ಹೇಳುತ್ತಾರೆ. ಬಳಿಕ ಅದರ ದೇಹದ ಭಾಗಗಳ ಬಗ್ಗೆ ವಿವರಿಸಿ, ಈ ಕೀಟವು ಹತ್ತಿರದಲ್ಲಿ ಅಪಾಯವಿದೆ ಎಂದು ತಿಳಿದ ತಕ್ಷಣ ಅದು ತನ್ನ ರೂಪವನ್ನು ನಿರ್ಜೀವ ಕಡ್ಡಿಯಂತೆ ಬದಲಾಯಿಸಿಕೊಳ್ಳುತ್ತದೆ. ಆದರೆ ಇದನ್ನು ಎಲೆಯ ಮೇಲೆ ಬಿಟ್ಟ ತಕ್ಷಣ ಅದರ ನಿಜ ರೂಪಕ್ಕೆ ಮರಳುವುದನ್ನು ನೋಡಿ ಎಂದು ವಿವರಿಸುತ್ತಾರೆ. ಈ ವಿಶಿಷ್ಟ ಜೀವಿಯನ್ನು ಕಂಡು ಹಲವರು ಆಶ್ಚರ್ಯಚಕಿತರಾಗಿದ್ದಾರೆ.
ಇದನ್ನೂ ಓದಿ: ರೆಡಿಮೇಡ್ ಗುಲಾಬ್ ಜಾಮೂನು ತಿನ್ನುವ ಮುನ್ನ ಈ ವಿಡಿಯೋ ಒಮ್ಮೆ ನೋಡಿ
ಈ ವೈರಲ್ ವೀಡಿಯೋ 44 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 2 ಮಿಲಿಯನ್ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಈ ಬಗ್ಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು ʼಇದನ್ನು ನೋಡಿ ನಾನು ಇದು ನಿಜ ಕಡ್ಡಿಯೆಂದು ಭಾವಿಸಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼದೇವರ ಸೃಷ್ಟಿಯೇ ಅತ್ಯದ್ಭುತ ʼ ಎಂಬ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಈ ಕೀಟವನ್ನು ಕಂಡು ಇವೆಲ್ಲಾ ಪ್ರಕೃತಿಯ ಅದ್ಭುತ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ