
ಮದ್ವೆ (marriage) ಆಗದವರು ವಯಸ್ಸಾಯ್ತು ಹುಡುಗಿನೇ ಸಿಗ್ತಿಲ್ಲ ಎಂದು ಚಿಂತೆ ಮಾಡ್ತಾರೆ. ಆದರೆ ಈ ಮದ್ವೆ ಆದ ಈ ಯುವಕರು ಮಾತ್ರ ಯಾಕಾದ್ರೂ ಮದ್ವೆ ಆದೆ, ಸಂಸಾರ ಸಾಗರದಲ್ಲಿ ಈಜಾಡೋದೇ ಕಷ್ಟ, ಈ ನನ್ನ ಹೆಂಡ್ತಿಯನ್ನು ಶಾಂತವಾಗಿಟ್ಟುಕೊಳ್ಳುವುದೇ ಇನ್ನೂ ಕಷ್ಟ ಎಂದು ಗೊಣಗುವುದನ್ನು ನೀವು ನೋಡಿರುತ್ತೀರಿ. ಆದರೆ ಇದೀಗ ಸಿಂಗಲ್ ಹಾಗೂ ಮ್ಯಾರೀಡ್ ನಡುವಿನ ವ್ಯತ್ಯಾಸವನ್ನು ಈ ವಿಡಿಯೋದಲ್ಲಿ ಸುಲಭವಾಗಿ ಗುರುತಿಸಬಹುದು. ಈ ವಿಡಿಯೋ ವೈರಲ್ (viral) ಆಗುತ್ತಿದ್ದಂತೆ ಇದರಲ್ಲಿ ಒಂದು ಜೋಡಿಯನ್ನು ನೋಡಿದ್ರೆ ಮದ್ವೆ ಆಗೋದಕ್ಕಿಂತ ಸಿಂಗಲ್ ಆಗಿರೋದೆ ಬೆಸ್ಟ್ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.
@VishalMalvi ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ‘ಒಂಟಿ ಮತ್ತು ವೈವಾಹಿಕ ಜೀವನ, ಒಂದೇ ಚೌಕಟ್ಟಿನಲ್ಲಿ’ ಎಂದು ಶೀರ್ಷಿಕೆ ಬರೆಯಲಾಗಿದೆ. ಈ ವಿಡಿಯೋದಲ್ಲಿ ಪ್ರವಾಸಕ್ಕೆಂದು ಯುವಕರ ಗುಂಪೊಂದು ತೆರಳಿದೆ. ಇತ್ತ ದಂಪತಿಗಳು ಇದೇ ಸ್ಥಳಕ್ಕೆ ಹೋಗಿದ್ದಾರೆ. ಟ್ರಿಪ್ ಎಂಜಾಯ್ ಮಾಡುತ್ತಿರುವ ಯುವಕ ಗುಂಪೊಂದು ಕ್ಯಾಮೆರಾಗೆ ಪೋಸ್ ನೀಡುತ್ತಾ, ಜಿಗಿಯುತ್ತಾ ಇರುವುದನ್ನು ಕಾಣಬಹುದು. ಇವರ ಪಕ್ಕದಲ್ಲಿ ನಿಂತ ದಂಪತಿಗಳಿಬ್ಬರೂ ಜಗಳವಾಡುತ್ತಿರುವುದನ್ನು ನೀವಿಲ್ಲಿ ನೋಡಬಹುದು.
Single life and Married life in One Frame pic.twitter.com/bCWKJ4JGIP
— Vishal (@VishalMalvi_) July 25, 2025
ಇದನ್ನೂ ಓದಿ: Viral: ಮನೆಯವರ ಬೆಂಬಲವಿಲ್ಲ, ಮಕ್ಕಳನ್ನು ಬೆಳೆಸುವಾಗ ಕೈಯಲ್ಲಿ ಎಷ್ಟು ದುಡ್ಡಿದ್ರೂ ಸಾಲಲ್ಲ ಎಂದ ದಂಪತಿ
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು ಯುವಕರು ಮದ್ವೆ ಆದ ಮೇಲೆ ಖುಷಿಪಡದೇ ಇರುವುದಕ್ಕೆ ಇದೇ ಕಾರಣ ನೋಡಿ ಎಂದಿದ್ದಾರೆ. ಇನ್ನೊಬ್ಬರು, ಸಿಂಗಲ್ ಆಗಿ ಇರುವುದೇ ಒಳ್ಳೆಯದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಮಹಿಳೆಯರಿಂದ ಅಂತರ ಕಾಯ್ದು ಕೊಳ್ಳಿ, ಆಗ ನೀವು ಖುಷಿಯಾಗಿರಲು ಸಾಧ್ಯ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ