ಮೈನಸ್ 30 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 65 ಪುಷ್ ಅಪ್ಸ್ ಮಾಡಿದ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್; ಇಲ್ಲಿದೆ ವಿಡಿಯೋ

| Updated By: preethi shettigar

Updated on: Feb 23, 2022 | 9:49 AM

ಕಮಾಂಡೆಂಟ್ ರತನ್ ಸಿಂಗ್ ಸೋನಾಲ್ ಅವರು ಲಡಾಖ್‌ನಲ್ಲಿ ಮೈನಸ್​ 30 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ, 17,500 ಅಡಿ ಎತ್ತರದಲ್ಲಿ ಒಂದೇ ಬಾರಿಗೆ 65 ಪುಷ್ ಅಪ್ಸ್​ಗಳನ್ನು ಪೂರ್ಣಗೊಳಿಸಿದ್ದಾರೆ.

ಮೈನಸ್ 30 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 65 ಪುಷ್ ಅಪ್ಸ್ ಮಾಡಿದ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್; ಇಲ್ಲಿದೆ ವಿಡಿಯೋ
ರತನ್ ಸಿಂಗ್ ಸೋನಾಲ್
Follow us on

ಲಡಾಖ್‌: 55 ವರ್ಷ ವಯಸ್ಸಿನ ಇಂಡೋ-ಟಿಬೆಟಿಯನ್​ ಬಾರ್ಡರ್​ ಪೊಲೀಸ್​(ITBP) ಕಮಾಂಡೆಂಟ್ ರತನ್ ಸಿಂಗ್ ಸೋನಾಲ್(Ratan Singh Sonal ) ಅವರು ಲಡಾಖ್‌ನಲ್ಲಿ ಮೈನಸ್​ 30 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ, 17,500 ಅಡಿ ಎತ್ತರದಲ್ಲಿ ಒಂದೇ ಬಾರಿಗೆ 65 ಪುಷ್ ಅಪ್ಸ್​ಗಳನ್ನು(push-ups) ಪೂರ್ಣಗೊಳಿಸಿದ್ದಾರೆ. ಕೆಳಗಡೆ ಭೂಮಿಯ ಮೇಲೆ ವ್ಯಾಯಾಮ, ಯೋಗ ಮಾಡೋದೋ ದುಸ್ತರ, ಕಷ್ಟ. ಹಾಗಿರುವಾಗ ಹಿಮಾಲಯದ ಮೇಲೆ ಅದೂ ಮೈನಸ್ ​30 ಡಿಗ್ರಿ ತಂಪುಮಾನದಲ್ಲಿ, ಉಸಿರಾಡುದಕ್ಕೂ ಗಾಳಿ ಸಿಗದಂತಹ ಪ್ರದೇಶದಲ್ಲಿ ಹೀಗೆ ಪುಷ್​ ಅಪ್ಸ್​ ಮಾಡೋದು ಅಸಾಮಾನ್ಯವೇ ಸರಿ.

ಕಮಾಂಡೆಂಟ್ ರತನ್ ಸಿಂಗ್ ಸೋನಾಲ್ ನೇತೃತ್ವದ 6 ಜನರ ತಂಡವೊಂದು ಲಡಾಖ್‌ನಲ್ಲಿರುವ 20,177 ಅಡಿ ಎತ್ತರದ ಶಿಖರವನ್ನು ಏರಿತು. ಡಿವೈ ಕಮಾಂಡೆಂಟ್ ಅನೂಪ್ ನೇಗಿ ಗುಂಪಿನ ಉಪನಾಯಕರಾಗಿದ್ದರು. ಈ ಇಂಡೋ-ಟಿಬೆಟಿಯನ್​ ಬಾರ್ಡರ್​ ಪೊಲೀಸ್ ತಂಡವು ಯಾವುದೇ ವಿಶೇಷ ಪರ್ವತಾರೋಹಣ ಅಥವಾ ಪರ್ವತ ಚಾರಣದ ಉಪಕರಣಗಳು ಮತ್ತು ಇನ್ನಿತರ ವ್ಯವಸ್ಥೆಯನ್ನು ಬಳಸಲಿಲ್ಲ ಎಂಬುವುದು ವಿಶೇಷ.

ಇಂಡೋ-ಟಿಬೆಟಿಯನ್ ಬಾರ್ಡರ್​ನ ಪೊಲೀಸ್​ ಕೇಂದ್ರೀಯ ಪಡೆ ಫೆಬ್ರವರಿ 20 ರಂದು ಲಡಾಖ್‌ನ ಮೌಂಟ್ ಕರ್ಜೋಕ್ ಕಂಗ್ರಿಯನ್ನು ಏರಿದ್ದಾರೆ. ಫೆಬ್ರವರಿ 20 ರಂದು ಕನಿಷ್ಠ ತಾಪಮಾನವು ಮೈನಸ್​ 30 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಇದು ಇಂಡೋ-ಟಿಬೆಟಿಯನ್ ಬಾರ್ಡರ್​ ಪೊಲೀಸ್​ ಕೇಂದ್ರೀಯ ಪಡೆಯ ಕರ್ಝೋಕ್ ಕಂಗ್ರಿ ಪರ್ವತದ ಮೊದಲ ಆರೋಹಣವಾಗಿದೆ.

ಇದನ್ನೂ ಓದಿ:

Viral Video: ಕಚ್ಚಾ ಬಾದಮ್ ಹಾಡಿಗೆ ನೃತ್ಯ ಮಾಡಿದ ‘ದಿ ಗ್ರೇಟ್ ಖಲಿ’; ವೈರಲ್​ ವಿಡಿಯೋ ಕಂಡು ನೆಟ್ಟಿಗರು ಹೇಳಿದ್ದೇನು ಗೊತ್ತಾ?

Viral Video: ರಸ್ತೆ ಬದಿ ನಿಂತಿದ್ದ ಬೀದಿ ನಾಯಿಗೆ ಒದೆಯಲು ಹೋದವನಿಗೆ ಏನಾಯ್ತು ಗೊತ್ತಾ?; ವಿಡಿಯೋ ವೈರಲ್

Published On - 9:39 am, Wed, 23 February 22