Video: ನಾನು ಹೊರಡುವ ಸಮಯ ಬಂತು; ಭಾರತದಿಂದ ಮರಳುವಾಗ ಭಾವುಕರಾದ ವಿದೇಶಿ ಮಹಿಳೆ
ವಿದೇಶದಿಂದ ಭಾರತಕ್ಕೆ ಸುತ್ತಾಡಲೆಂದು ಬರುವ ವಿದೇಶಿಗರು ಇಲ್ಲಿನ ಜನರು ನೀಡುವ ಪ್ರೀತಿಗೆ ಕಳೆದೇ ಹೋಗುತ್ತಾರೆ. ಆದರೆ ಇಲ್ಲಿಂದ ತಮ್ಮ ಹುಟ್ಟೂರಿಗೆ ಮರಳುವಾಗ ಭಾವುಕರಾಗುತ್ತಾರೆ. ಹೌದು, ಭಾರತದಲ್ಲಿ ಐದೂವರೆ ತಿಂಗಳ ಕಾಲ ಉಳಿದು ಅಮೆರಿಕಕ್ಕೆ ಮರಳುವಾಗ ವ್ಲಾಗರ್ ಒಬ್ಬರು ಮಾಡಿದ ಭಾವನಾತ್ಮಕ ವಿದಾಯದ ಪೋಸ್ಟ್ ಸದ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಭಾರತದ ಅಂದ್ರೆ ವಿದೇಶಿಗರಿಗೆ (foreigner) ಸೆಳೆತ. ಹೀಗಾಗಿ ಇಷ್ಟ ಪಟ್ಟು ಭಾರತಕ್ಕೆ ಭೇಟಿ ನೀಡುವ ವಿದೇಶಿಗರು ಇಲ್ಲಿನ ಪ್ರವಾಸಿ ತಾಣಗಳ ಸೌಂದರ್ಯ ಸವಿಯುತ್ತಾರೆ. ಇಲ್ಲಿನ ವಾತಾವರಣ, ಇಲ್ಲಿನ ಜೀವನಶೈಲಿಗೆ ಹೊಂದಿಕೊಂಡು ಜನರೊಂದಿಗೆ ಬೆರೆತು ಭಾರತದಲ್ಲಿಯೇ ಉಳಿಯುತ್ತಾರೆ. ಇನ್ನು ಕೆಲವರು ತಮ್ಮ ದೇಶಕ್ಕೆ ಮರಳುವಾಗ ಭಾವುಕರಾಗುತ್ತಾರೆ. ಅಮೆರಿಕನ್ ಮಹಿಳೆಗೂ (American women) ಇದೇ ಸಂದರ್ಭ ಎದುರಾಗಿದೆ. ಯುಕೆ ಟ್ರಾವೆಲ್ ವ್ಲಾಗರ್ ಭಾರತದ ಪ್ರವಾಸ ಮುಗಿಸಿ ತಮ್ಮ ದೇಶಕ್ಕೆ ಮರಳುವಾಗ ಭಾವನಾತ್ಮಕ ವಿದಾಯ ಹೇಳಿದ್ದಾರೆ. ಭಾರತ ಹಾಗೂ ಇಲ್ಲಿನ ಸುಂದರ ನೆನಪುಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ದೇಶವು ತುಂಬಾ ವಿಶೇಷವೆನಿಸಿತು ಎಂದು ಹೇಳಿದ್ದಾರೆ. ಈ ಕುರಿತಾದ ಪೋಸ್ಟ್ ಸದ್ಯ ವೈರಲ್ ಆಗಿದೆ.
@sociallywanderful ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಯುಕೆ ಟ್ರಾವೆಲ್ ವ್ಲಾಗರ್ ಐದೂವರೆ ತಿಂಗಳು ಭಾರತದಲ್ಲಿ ಸುತ್ತಾಡಿದ ಪ್ರವಾಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ಈ ದೇಶದಲ್ಲಿ ಐದೂವರೆ ತಿಂಗಳ ನಂತರ ಇಂದು ಭಾರತದಲ್ಲಿ ನನ್ನ ಕೊನೆಯ ದಿನ. ನಾನು ನನ್ನ ಪ್ರವಾಸದ ಕೊನೆಯ ಫೋಟೋ ತೆಗೆದುಕೊಳ್ಳುತ್ತಿದ್ದೆ. ನನ್ನ ಕೂದಲಿನಲ್ಲಿ ಗಾಳಿ ಬೀಸುತ್ತಿತ್ತು, ಎಲ್ಲಾ ನೆನಪುಗಳು ಪ್ರವಾಹದಂತೆ ಬಂದವು. ಈ ಸ್ಥಳವು ನಿಮ್ಮೊಂದಿಗೆ ಎಷ್ಟು ಉಳಿಯಬಹುದು ಎಂದು ಜನರಿಗೆ ಹೇಳುವುದು ಕಷ್ಟ. ಈ ವರ್ಷದ ಆರಂಭದಲ್ಲಿ, ಭಾರತ ಹೇಗಿರುತ್ತದೆ ಎಂಬುದರ ಬಗ್ಗೆ ನನಗೆ ಯಾವುದೇ ನಿರೀಕ್ಷೆಗಳಿರಲಿಲ್ಲ. ಮುಂದಿನ ಎರಡು ತಿಂಗಳುಗಳು ಏನನ್ನು ನೀಡಬಹುದೆಂದು ನಾನು ನಂಬಲಾಗದಷ್ಟು ಉತ್ಸುಕನಾಗಿದ್ದೆ ಎಂದು ಹೇಳಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
View this post on Instagram
ನಾನು ಜೀವನಪರ್ಯಂತ ಸ್ನೇಹಿತರನ್ನು ಮಾಡಿಕೊಂಡಿದ್ದೇನೆ. ಈ ನೆನಪುಗಳು ನಾನು ನನ್ನ ಮೊಮ್ಮಕ್ಕಳಿಗೆ ನಾನು ರವಾನಿಸುವ ಕಥೆಗಳು. ಹೆಚ್ಚಿನ ಸಮಯವು ಒಂದು ಪ್ರಮುಖ ಘಟನೆಯಾಗಿದ್ದಾಗ ನನ್ನ ‘ಉನ್ನತ ಕ್ಷಣಗಳನ್ನು’ ಸಂಕ್ಷಿಪ್ತವಾಗಿ ಹೇಳುವುದು ಕಷ್ಟ. ಆದರೆ ಅದನ್ನು ಏಕೆ ವಿಶೇಷವಾಗಿಸಿತು ಎಂಬುದನ್ನು ನಾನು ನಿಖರವಾಗಿ ಹೇಳಬಹುದು. ಭಾರತ ಹಾಗೂ ನಾನು ದಾರಿಯುದ್ದಕ್ಕೂ ಭೇಟಿಯಾದ ಎಲ್ಲರಿಗೂ ಧನ್ಯವಾದಗಳು. ನಾವು ಮತ್ತೆ ಎಲ್ಲರನ್ನೂ ಭೇಟಿಯಾಗುವೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಪೌರಕಾರ್ಮಿಕರ ಜತೆ ಸೇರಿ ಬೆಂಗಳೂರಿನ ಬೀದಿಗಳನ್ನು ಸ್ವಚ್ಛಗೊಳಿಸಿದ ವಿದೇಶಿಗ
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಮತ್ತೆ ಭಾರತಕ್ಕೆ ಮರಳಿ ಬನ್ನಿ ಎಂದಿದ್ದಾರೆ. ಇನ್ನೊಬ್ಬರು, ನೀವು ಭಾರತದ ವೈವಿಧ್ಯತೆಯನ್ನು ಸೆರೆಹಿಡಿದ ರೀತಿ ಸಂಪೂರ್ಣವಾಗಿ ಇಷ್ಟವಾಯಿತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇಂತಹ ಸ್ಥಳದೊಂದಿಗೆ ಸಂಪರ್ಕ ಸಾಧಿಸುವುದು ತುಂಬಾ ವಿಶೇಷ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




