ಸಾರ್ವಜನಿಕ ಸ್ಥಳದಲ್ಲಿ ಪತ್ನಿಯ ಜತೆಗೆ ಜಗಳ ಮಾಡಿಕೊಂಡ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ಅವರ ಪತ್ನಿ ಉಷಾ ವ್ಯಾನ್ಸ್ ಸಾರ್ವಜನಿಕವಾಗಿ ಜಗಳವಾಡಿದ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಟೀಕಿಸಿದಾಗ ಜೆಡಿ ವ್ಯಾನ್ಸ್ ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ. ಉಷಾ ಮದುವೆ ಉಂಗುರ ಧರಿಸದಿರುವುದು, ಜೆಡಿ ವ್ಯಾನ್ಸ್ ಎರಿಕಾ ಕಿರ್ಕ್ ಜೊತೆಗಿನ ಚಿತ್ರ, ಇವೆಲ್ಲವೂ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಊಹಾಪೋಹಗಳಿಗೆ ಕಾರಣವಾಗಿವೆ.

ಸಾರ್ವಜನಿಕ ಸ್ಥಳದಲ್ಲಿ ಪತ್ನಿಯ ಜತೆಗೆ ಜಗಳ ಮಾಡಿಕೊಂಡ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್
ವೈರಲ್​​ ಪೋಸ್ಟ್​

Updated on: Dec 10, 2025 | 3:10 PM

ಗಂಡ-ಹೆಂಡತಿ ಜಗಳ ಸಾಮಾನ್ಯ, ಅದು ಮನೆಯೊಳಗೆ ಇದ್ದರೆ ಒಳ್ಳೆಯದು, ಆದರೆ ದಂಪತಿಗಳು ಬೀದಿಯಲ್ಲಿ ಜಗಳ ಮಾಡಿಕೊಳ್ಳುವುದು ಸರಿಯಲ್ಲ. ಇದು ಸಾಮಾಜಿಕ ವ್ಯವಸ್ಥೆಯ ಮೇಲೆ ದೊಡ್ಡ ಪರಿಣಾಮವನ್ನು ಉಂಟು ಮಾಡಬಹುದು. ಅದರಲ್ಲೂ ಈ ಸೆಲೆಬ್ರಿಟಿಗಳು ಸಾರ್ವಜನಿಕ ಸ್ಥಳಗಳಲ್ಲಿ ಜಗಳ ಮಾಡಿಕೊಂಡರೆ ತುಂಬಾ ಕೆಟ್ಟದಾಗಿರುತ್ತದೆ. ಎಲ್ಲರಿಗೂ ಮಾದರಿಯಾಗಬೇಕಾದ ಅವರು ಜನರ ಮುಂದೆ ಜಗಳ ಮಾಡಿಕೊಳ್ಳುವುದು ಎಷ್ಟು ಸರಿ, ಜತೆಗೆ ಇದು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುವ ಸಾಧ್ಯತೆ ಕೂಡ ಇರುತ್ತದೆ. ಇದೀಗ ಅಮೆರಿಕದ ಉಪಾಧ್ಯಕ್ಷರ ಕಥೆ ಕೂಡ ಅದೇ, ಅಮೆರಿಕದ ಉಪಾಧ್ಯಕ್ಷ ಮತ್ತು ಅವರ ಪತ್ನಿ ಸಾರ್ವಜನಿಕ ಪ್ರದೇಶದಲ್ಲಿ ಜಗಳ ಮಾಡಿಕೊಂಡಿದ್ದಾರೆ. ಉಪಾಧ್ಯಕ್ಷ ಜೆಡಿ ವ್ಯಾನ್ಸ್ (J.D. Vance) ಅವರು ತಮ್ಮ ಪತ್ನಿ ಉಷಾ ವ್ಯಾನ್ಸ್ ಅವರೊಂದಿಗೆ ಹೋಟೆಲ್​​ ಒಂದರಲ್ಲಿ ವಾದಕ್ಕೆ ಇಳಿದಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ವಿಡಿಯೋ ಎಲ್ಲ ಕಡೆ ವೈರಲ್​ ಆಗಿದ್ದು, ಇದಕ್ಕೆ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ಕೂಡ ನೀಡಿದ್ದಾರೆ.

ಈ ವೈರಲ್​ ಆಗಿರುವ ವಿಡಿಯೋದಲ್ಲಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ತಮ್ಮ ಪತ್ನಿ ಉಷಾ ವ್ಯಾನ್ಸ್ ಜೊತೆ ಮಾತಿನ ಚಕಮಕಿ ನಡೆಸುತ್ತಿರುವುದು ಕಂಡುಬಂದಿದೆ. ಜೆಡಿ ವ್ಯಾನ್ಸ್ ಅವರು ಎದುರು ಕುಳಿತಿರುವ ಪತ್ನಿಯನ್ನು ನೋಡಿ ಕೋಪದಲ್ಲಿ ಮಾತನಾಡುವುದನ್ನು ನೋಡಬಹುದು. ಇದೀಗ ಈ ವಿಡಿಯೋ ನೋಡಿ ನೆಟ್ಟಿಗರು ಕಮೆಂಟ್ ಮಾಡಿದ್ದು,  ಇಬ್ಬರ ನಡುವೆ ಏನೋ ಆಗಿರಬೇಕು ಎಂದು ಹೇಳಿದ್ದಾರೆ. ಡಿಸೆಂಬರ್ 9 ರಂದು ವೈರಲ್​ ಆಗಿರುವ ವಿಡಿಯೋದ ಬಗ್ಗೆ ಎಕ್ಸ್​​ನಲ್ಲಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪ್ರತಿಕ್ರಿಯೆ ನೀಡಿದ್ದಾರೆ. “ನಾನು ಸಾರ್ವಜನಿಕವಾಗಿ ನನ್ನ ಹೆಂಡತಿಯೊಂದಿಗೆ ಜೋರಾಗಿ ಜಗಳವಾಡಲು ಹೋದಾಗ ಯಾವಾಗಲೂ ಒಳ ಅಂಗಿ ಧರಿಸುತ್ತೇನೆ” ಎಂದು ತಮಾಷೆಯಾಗಿ ಹೇಳಿದ್ದಾರೆ.

ವೈರಲ್​​​ ಪೋಸ್ಟ್​​ ಇಲ್ಲಿದೆ ನೋಡಿ:

ಜೆಡಿ ವ್ಯಾನ್ಸ್ ಅವರ ಈ ಪ್ರತಿಕ್ರಿಯೆಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಕಮೆಂಟ್ ಬಂದಿದೆ. ಪರಿಸ್ಥಿತಿಯನ್ನು ಅನುಕೂಲಕ್ಕೆ ತಕ್ಕಂತೆ ಹಾಗೂ ಯಾವುದೇ ಹಾನಿಯಾಗದಂತೆ ಬಳಸಿಕೊಳ್ಳಬೇಕು ಎಂಬುದು ಜೆಡಿ ವ್ಯಾನ್ಸ್ ಅವರಿಗೆ ಗೊತ್ತಿದೆ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ. ಇನ್ನು ಅನೇಕ ನೆಟ್ಟಿಗರು, ಜೆಡಿ ವ್ಯಾನ್ಸ್ ಅವರ ಎಕ್ಸ್​​ ಖಾತೆಯನ್ನು ನಿರ್ವಹಿಸುವವರನ್ನು ಟೀಕಿಸಿದ್ದಾರೆ. ಈ ಬಾರಿ ಕ್ರಿಸ್​​ಮಸ್​​​ ಬೋನಾಸ್​​​​ ಹೆಚ್ಚು ಸಿಗಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಉಚಿತ ಊಟ ನೀಡುವ ಭಾರತದ ಏಕೈಕ ರೈಲು ಎಲ್ಲಿದೆ ಗೊತ್ತಾ?

ಅಕ್ಟೋಬರ್‌ನಿಂದ ಇಬ್ಬರ ನಡುವಿನ ಸಂಬಂಧದಲ್ಲಿ ಚಿಕ್ಕದಾಗಿ ಬಿರುಕು ಮೂಡಿದಂತೆ ಕಾಣುತ್ತಿದೆ ಎಂಬ ಊಹಾಪೋಹಗಳು ಕೇಳಿ ಬರುತ್ತಿದೆ. ಅಧ್ಯಕ್ಷ ಜೆಡಿ ವ್ಯಾನ್ಸ್ ದಿವಂಗತ ಚಾರ್ಲಿ ಕಿರ್ಕ್ ಅವರ ಪತ್ನಿ ಎರಿಕಾ ಕಿರ್ಕ್ ಅವರನ್ನು ತಬ್ಬಿಕೊಂಡಿರುವ ಚಿತ್ರ ವೈರಲ್ ಆಗಿತ್ತು. ಅಲ್ಲಿಂದ ಇಬ್ಬರ ನಡುವೆ ಏನೋ ಇದೆ ಎಂಬ ಮಾತುಗಳು ಕೇಳಿ ಬಂತು. ವ್ಯಾನ್ಸ್ ಅವರ ಪತ್ನಿ ಉಷಾ ವ್ಯಾನ್ಸ್ ತಮ್ಮ ಮದುವೆಯ ಉಂಗುರವನ್ನು (ಭಾರತೀಯರಿಗೆ ಮಾಂಗಲ್ಯದಂತೆ, ಅಮೆರಿಕದ ಮಹಿಳೆಯರಿಗೆ ಈ ಉಂಗುರ) ಧರಿಸದೆ ಎರಡು ದೊಡ್ಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇದು ಕೂಡ ಈ ಊಹಾಪೋಹಕ್ಕೆ ಪುಷ್ಟಿ ನೀಡಿದೆ. ಇವರಿಗೆ ಇವಾನ್ ಮತ್ತು ವಿವೇಕ್ ಎಂಬ ಇಬ್ಬರು ಗಂಡು ಮಕ್ಕಳು ಹಾಗೂ ಮಿರಾಬೆಲ್ ಎಂಬ ಮಗಳು ಇದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ