ಉಚಿತ ಊಟ ನೀಡುವ ಭಾರತದ ಏಕೈಕ ರೈಲು ಎಲ್ಲಿದೆ ಗೊತ್ತಾ?
ಭಾರತೀಯ ರೈಲ್ವೆಯಲ್ಲಿ ಉಚಿತ ಊಟ ನೀಡುವ ಏಕೈಕ ರೈಲು ಸಚ್ಖಂಡ್ ಎಕ್ಸ್‌ಪ್ರೆಸ್. ಅಮೃತಸರದಿಂದ ನಾಂದೇಡ್‌ವರೆಗೆ ಸಂಚರಿಸುವ ಈ ರೈಲು, ಕಳೆದ ಮೂರು ದಶಕಗಳಿಂದ ಪ್ರಯಾಣಿಕರಿಗೆ ಸಸ್ಯಾಹಾರಿ ಊಟ, ಉಪಹಾರವನ್ನು ಉಚಿತವಾಗಿ ನೀಡುತ್ತಿದೆ. ಇದು ಭಾರತೀಯ ರೈಲ್ವೆ ಇತಿಹಾಸದಲ್ಲಿ ಒಂದು ವಿಶಿಷ್ಟ ಸೇವೆ. ಪ್ರತಿದಿನ ಸುಮಾರು 2,000 ಪ್ರಯಾಣಿಕರಿಗೆ ಈ ಉಚಿತ ಊಟದ ಸೌಲಭ್ಯ ಲಭ್ಯವಿದೆ.

ವಿಶ್ವದ ಅತಿದೊಡ್ಡ ರೈಲ್ವೆ ಜಾಲಗಳಲ್ಲಿ ಭಾರತದ ರೈಲ್ವೆ (Indian Railways) ಕೂಡ ಒಂದು. ದಿನಕ್ಕೆ ಸುಮಾರು 13,000 ಪ್ಯಾಸೆಂಜರ್ ರೈಲುಗಳನ್ನು ನಿರ್ವಹಿಸುತ್ತದೆ, ದೇಶಾದ್ಯಂತ ಪ್ರತಿದಿನ ಲಕ್ಷಾಂತರ ಪ್ರಯಾಣಿಕರನ್ನು ಕರೆದೊಯ್ಯುತ್ತದೆ. ಇದರ ಜತೆಗೆ ರೈಲಿನಲ್ಲಿ ವಿಶೇಷ ಸೌಕರ್ಯಗಳು ಇರುತ್ತದೆ. ಊಟ, ತಿಂಡಿ, ಚಾಹ ಎಲ್ಲವನ್ನು ನೀಡುತ್ತದೆ. ಸ್ನೇಹಿತರ ಜತೆಗೆ ಅಥವಾ ಕುಟುಂಬ ಜತೆಗೆ ದೂರದ ಊರಿಗೆ ಹೋಗುವಾಗ ರೈಲುಗಳೇ ಬೆಸ್ಟ್. ಭಾರತದ ರೈಲ್ವೆಯಲ್ಲಿ ಊಟ ವ್ಯವಸ್ಥೆ ಇರುತ್ತದೆ, ಅದಕ್ಕೆ ಹಣ ನೀಡಬೇಕು, ಆದರೆ ಇಲ್ಲೊಂದು ರೈಲಿನಲ್ಲಿ ಉಚಿತ ಊಟ ಇರುತ್ತದೆ. ಇದೊಂದು ಭಾರತದಲ್ಲಿರುವ ವಿಶೇಷ ರೈಲ್ವೆಯಾಗಿದೆ. ಬೆಳಿಗ್ಗಿನ ಉಪಹಾರ, ಮಧ್ಯಾಹ್ನದ ಊಟ ಎಲ್ಲವೂ ಉಚಿತ , ಇದು ಭಾರತೀಯ ರೈಲ್ವೆ ಇತಿಹಾಸದಲ್ಲಿ ಮೊದಲು.
ಪ್ರಯಾಣದುದ್ದಕ್ಕೂ ಪ್ರಯಾಣಿಕರಿಗೆ ಉಚಿತ ಆಹಾರವನ್ನು ಪೂರೈಸುವ ಒಂದು ವಿಶೇಷ ರೈಲು. ಸುಮಾರು ಮೂರು ದಶಕಗಳಿಂದ ಈ ಸೌಕರ್ಯವನ್ನು ನೀಡುತ್ತ ಬಂದಿದೆ. ಈ ರೈಲಿನ ಹೆಸರು ಸಚ್ಖಂಡ್ ಎಕ್ಸ್‌ಪ್ರೆಸ್ (12715), ಪ್ರಯಾಣಿಕರಿಗೆ ಪ್ರಯಾಣದುದ್ದಕ್ಕೂ ಬಿಸಿ ಊಟವನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತಿದೆ. ಸಚ್ಖಂಡ್ ಎಕ್ಸ್‌ಪ್ರೆಸ್ ತನ್ನ 2,081 ಕಿಮೀ ಪ್ರಯಾಣದುದ್ದಕ್ಕೂ ಪ್ರಯಾಣಿಕರಿಗೆ ಉಚಿತ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ನೀಡುತ್ತದೆ. ಕೆಲವು ವರದಿಗಳ ಪ್ರಕಾರ, ಸಚ್ಖಂಡ್ ಎಕ್ಸ್‌ಪ್ರೆಸ್‌ನಲ್ಲಿ ಉಚಿತ ಆಹಾರವನ್ನು ಕಳೆದ ಮೂರು ದಶಕಗಳಿಂದ ನೀಡಲಾಗುತ್ತಿದೆ. ಯಾವುದೇ ರೀತಿಯ ಗಡಿಬಿಡಿ ಇಲ್ಲದೆ ಪ್ರಯಾಣಿಕರು ಊಟ ಮಾಡಬಹುದು. ಪ್ರಯಾಣಿಕರು ಊಟ ಮುಗಿಸುವರೆಗೆ ರೈಲು ಚಲಿಸದೇ ಪ್ರಯಾಣಿಕರಿಗಾಗಿ ಕಾಯುತ್ತದೆ. ಇಲ್ಲಿ ಪ್ರಯಾಣಿಕರೇ ಸ್ವತಃ ಮನೆಯಿಂದ ಪಾತ್ರೆಗಳನ್ನು ತರುತ್ತಾರೆ. ಕಧಿ-ಚಾವಲ್, ದಾಲ್ ಮತ್ತು ಸಬ್ಜಿಯಂತಹ ಸಸ್ಯಾಹಾರಿ ಊಟಗಳನ್ನು ನೀಡಲಾಗುತ್ತದೆ.
ಇದನ್ನೂ ಓದಿ: ಇದು ಭಾರತದ ಅತ್ಯಂತ ನಿಧಾನವಾಗಿ ಚಲಿಸುವ ರೈಲು: ಸೈಕಲ್‌ಗಿಂತ ನಿಧಾನವಾಗಿ ಓಡುವ ಟ್ರೈನ್ ಎಲ್ಲಿದೆ ಗೊತ್ತಾ?
ಸಚ್ಖಂಡ್ ಎಕ್ಸ್‌ಪ್ರೆಸ್ ಅಮೃತಸರ ಮತ್ತು ನಾಂದೇಡ್ ನಡುವೆ ಚಲಿಸುತ್ತದೆ. ಒಟ್ಟು 2,081 ಕಿ.ಮೀ ದೂರವನ್ನು ಕ್ರಮಿಸುತ್ತದೆ. ಜತೆಗೆ ಎರಡು ಪ್ರಮುಖ ಸಿಖ್ ಧಾರ್ಮಿಕ ತಾಣಗಳಾದ ಅಮೃತಸರದ ಶ್ರೀ ಹರ್ಮಂದಿರ್ ಸಾಹಿಬ್ ಮತ್ತು ನಾಂದೇಡ್‌ನ ಶ್ರೀ ಹಜೂರ್ ಸಾಹಿಬ್ ಅನ್ನು ಸಂಪರ್ಕಿಸುತ್ತದೆ. ಸಚ್ಖಂಡ್ ಎಕ್ಸ್‌ಪ್ರೆಸ್ 2,000 ಕಿ.ಮೀ. ಉದ್ದದ ಪ್ರಯಾಣದಲ್ಲಿ 39 ನಿಲ್ದಾಣಗಳಲ್ಲಿ ನಿಲ್ಲುತ್ತದೆ ಮತ್ತು ಈ ಆರು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಉಚಿತ ಊಟವನ್ನು ನೀಡಲಾಗುತ್ತದೆ. ಪ್ರತಿದಿನ ಅಂದಾಜು 2,000 ಪ್ರಯಾಣಿಕರಿಗೆ ಊಟ ನೀಡುತ್ತದೆ. 1995ರಲ್ಲಿ ಈ ಉಚಿತ ಊಟ ಯೋಜನೆಯನ್ನು ಪ್ರಾರಂಭಿಸಲಾಗಿತ್ತು.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




