Viral Video: ನಾದಿನಿ ಜತೆ ನೃತ್ಯ ಮಾಡಲು ನಾಚುತ್ತಿದ್ದಾರೆ ಬಾವ! ಕೊನೆಗೂ ಬಾಲಿವುಡ್​ ಸಾಂಗ್​ಗೆ ಸ್ಟೆಪ್​ ಹಾಕಿಯೇ ಬಿಟ್ರು

ನಾದಿನಿ ಸೈಲಿಶ್​ ಆಗಿ ಸಿಮೆಂಟ್​​ ಬಣ್ಣದ ಸೀರೆಯನ್ನುಟ್ಟು ಬಾವನ ಜತೆಗೆ ಡಾನ್ಸ್​ ಮಾಡುತ್ತಿದ್ದಾಳೆ. ಆದರೆ ಬಾವನಿಗೆ ನಾದಿನಿ ಜತೆ ಡಾನ್ಸ್​ ಮಾಡಲು ಕೊಂಚ ನಾಚಿಯಾಗುತ್ತಿದೆ. ಈ ನೃತ್ಯದ ವಿಡಿಯೋ ಜನರನ್ನು ನಗುವಿನ ಅಲೆಯಲ್ಲಿ ತೇಲಿಸಿಬಿಟ್ಟಿದೆ.

Viral Video: ನಾದಿನಿ ಜತೆ ನೃತ್ಯ ಮಾಡಲು ನಾಚುತ್ತಿದ್ದಾರೆ ಬಾವ! ಕೊನೆಗೂ ಬಾಲಿವುಡ್​ ಸಾಂಗ್​ಗೆ ಸ್ಟೆಪ್​ ಹಾಕಿಯೇ ಬಿಟ್ರು
ಬಾವ-ನಾದಿನಿ ನೃತ್ಯ
Updated By: shruti hegde

Updated on: Jul 12, 2021 | 3:27 PM

ಸಾಮಾಜಿಕ ಜಾಲತಾಣದಲ್ಲಿ ಯುವತಿಯರು ನೃತ್ಯ ಮಾಡುತ್ತಿರುವ ಅದೆಷ್ಟೋ ವಿಡಿಯೋಗಳು ಹರಿದಾಡುತ್ತಿರುತ್ತವೆ. ಕೆಲವು ವಿಡಿಯೋಗಳು ನೆಟ್ಟಿಗರನ್ನು ನಗುವಿನ ಅಲೆಯಲ್ಲಿ ತೇಲಿಸುತ್ತವೆ. ಹಾಗಾಗಿಯೇ ಇಂತಹ ವಿಡಿಯೋಗಳನ್ನು ಜನರು ನೋಡುವುದು ಹೆಚ್ಚು. ಇದೀಗ ಅಂಥಹುದೇ ಒಂದು ನೃತ್ಯದ ವಿಡಿಯೋ ವೈರಲ್ ಆಗಿದೆ. ನಾದಿನಿಯ ಜತೆ ನೃತ್ಯ ಮಾಡಲು ನಾಚಿಕೆ ಮಾಡಿಕೊಳ್ಳುತ್ತಿರುವ ಬಾವನನ್ನು ನೋಡಿ ನೆಟ್ಟಿಗರು ತಮಾಷೆ ಮಾಡಿದ್ದಾರೆ.

ಮದುವೆಯ ಸಮಯದಲ್ಲಿ ಅಕ್ಕನ ಗಂಡ ಬಾವನಿಗೆ ಕಾಲೆಳೆಯುತ್ತಾ, ಕೀಟಲೆ ಮಾಡುತ್ತಾ ನಾದಿನಿಯರು ವಿವಾಹ ಮಹೋತ್ಸವವನ್ನು ಆಚರಿಸುತ್ತಾರೆ. ಇದೀಗ ವೈರಲ್ ಆದ ವಿಡಿಯೋದಲ್ಲಿಯೂ ಸಹ ಹಮ್​ ಆಪ್ಕೆ ಹೈ ಕೋನ್​ ಚಿತ್ರದ ಹಾಡಿಗೆ ನಾದಿನ ಬಾವನ ಜತೆ ನೃತ್ಯ ಮಾಡುತ್ತಿದ್ದಾಳೆ.

ನಾದಿನಿ ಸೈಲಿಶ್​ ಆಗಿ ಸಿಮೆಂಟ್​​ ಬಣ್ಣದ ಸೀರೆಯನ್ನುಟ್ಟು ಬಾವನ ಜತೆಗೆ ಡಾನ್ಸ್​ ಮಾಡುತ್ತಿದ್ದಾಳೆ. ಈ ನೃತ್ಯದ ವಿಡಿಯೋ ಜನರನ್ನು ನಗುವಿನ ಅಲೆಯಲ್ಲಿ ತೇಲಿಸಿಬಿಟ್ಟಿದೆ. ವಿಡಿಯೋದಲ್ಲಿ ಗಮನಿಸುವಂತೆ ಜನಪ್ರಿಯವಾದ ಬಾಲಿವುಡ್​ ಗೀತೆಗೆ ಇಬ್ಬರು ನೃತ್ಯ ಮಾಡುತ್ತಿದ್ದಾರೆ. ನಾದಿನಿ ಜತೆಗೆ ನೃತ್ಯ ಮಾಡಲು ಬಾವ ಕೊಂಚ ನಾಚಿಕೆ ಪಡುತ್ತಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು ‘ಮೇರೆ ಪ್ಯಾರ್​ ಜೀಜೂ’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನಾದಿನಿಯ ಸಕತ್​ ಡಾನ್ಸ್​ಗೆ ನೆಟ್ಟಿಗರು ಮರುಳಾಗಿದ್ದಾರೆ. ಇನ್ನು ಕೆಲವರು ನಗುವ ಇಮೋಜಿ ಕಳುಹಿಸುವ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಾದಿನಿ ಜತೆ ನೃತ್ಯ ಮಾಡಲು ನಾಚುತ್ತಿರುವ ಬಾವವನ್ನು ನೋಡಿದ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ವಿಡಿಯೋ 26,000ಕ್ಕೂ ಹೆಚ್ಚು ಲೈಕ್ಸ್​ಗಳನ್ನು ಗಳಿಸಿಕೊಂಡಿದೆ. ವಿಡಿಯೋ ಎಲ್ಲರನ್ನು ನಗುವಿನ ಅಲೆಯಲ್ಲಿ ತೇಲಿಸಿದೆ. ಈ ಹಿಂದೆಯೂ ಸಹ ಈ ಖಾತೆಯಿಂದ ಅನೇಕ ವಿಡಿಯೋಗಳನ್ನು ಹರಿಬಿಡಲಾಗಿದೆ.

ಇದನ್ನೂ ಓದಿ:

Jahnavi Kapoor Hot Dance : ನಟಿ ಜಾನ್ವಿ ಕಪೂರ್ ಹಾಟ್ ನೃತ್ಯ ಕಂಡ ಅವರ ಅಭಿಮಾನಿಗಳು ಫಿದಾ…!

Viral video: ಜನ-ಮನಗೆದ್ದ ರಾಧೆ ಚಿತ್ರದ ಹಾಡಿಗೆ ನೃತ್ಯ ಮಾಡಿದ ವೈದ್ಯರು; ‘ರಿಯಲ್​ ಹಿರೋ’ ಎಂದು ಶ್ಲಾಘಿಸಿದ ನೆಟ್ಟಿಗರು