ಜೆಆರ್​ಡಿ ಟಾಟಾ ಸಹಾಯದಿಂದ ವಿದ್ಯಾಭ್ಯಾಸ ಪಡೆದ ಆ ಯುವಕ ಮುಂದೆ ಭಾರತದ ರಾಷ್ಟ್ರಪತಿ ಆದ ಅದ್ಭುತ ಸಂಗತಿ ಇಲ್ಲಿದೆ

| Updated By: ಆಯೇಷಾ ಬಾನು

Updated on: May 11, 2021 | 9:07 AM

ಪತ್ರಕ್ಕೆ ಸ್ಪಂದಿಸಿದ ಟಾಟಾ ಅವರು ₹16,000ದಷ್ಟು ವಿದ್ಯಾರ್ಥಿ ವೇತನದ ಜೊತೆಗೆ ₹1,000 ರೂಪಾಯಿಯಷ್ಟು ಸಾಲವನ್ನೂ ನೀಡಿದ್ದರು. ಈ ಯುವಕ ಬೇರೆ ಯಾರೂ ಅಲ್ಲ. ಭಾರತ ಕಂಡ ಶ್ರೇಷ್ಠ ರಾಷ್ಟ್ರಪತಿ ಕೆ.ಆರ್​ ನಾರಾಯಣ್​.

ಜೆಆರ್​ಡಿ ಟಾಟಾ ಸಹಾಯದಿಂದ ವಿದ್ಯಾಭ್ಯಾಸ ಪಡೆದ ಆ ಯುವಕ ಮುಂದೆ ಭಾರತದ ರಾಷ್ಟ್ರಪತಿ ಆದ ಅದ್ಭುತ ಸಂಗತಿ ಇಲ್ಲಿದೆ
Follow us on

ಜೆಆರ್​ಡಿ ಟಾಟಾ ಅವರ ಸಮಾಜದ ಮೇಲಿರುವ ಕಳಕಳಿ ಮತ್ತು ಸಹಾನುಭೂತಿಯನ್ನು ಅವರ ಟಾಟಾ ಸಮೂಹದ ಪಾಲಕರಾದ ಹರೀಶ್​ ಭಟ್​ ಹಂಚಿಕೊಂಡ ಒಂದು ಕಥೆಯ ಮೂಲಕ ತಿಳಿಯಬಹುದು. ಹರೀಶ್ ಭಟ್ ಹಂಚಿಕೊಂಡಿರುವ ಪೋಸ್ಟ್​ನಲ್ಲಿ ಜೆಆರ್​ಡಿ ಟಾಟಾ ಅವರ ಸಹಾಯ ಮನೋಭಾವ ಹೇಗಿತ್ತು, ವಿದ್ಯಾಭ್ಯಾಸಕ್ಕಾಗಿ ಅವರು ಒಬ್ಬ ಯುವಕನಿಗೆ ಹೇಗೆ ಸಹಾಯ ಮಾಡಿದ್ದರು ಎಂಬ ಬಗ್ಗೆ ಮಾಹಿತಿ ಇದೆ. ಮೇಲಾಗಿ, ಅದೇ ಯುವಕ ನಂತರ ಭಾರತ ದೇಶದ ರಾಷ್ಟ್ರಪತಿಯಾದ ಸ್ಪೂರ್ತಿದಾಯಕ ಕಥೆ ಕೂಡಾ ಇದ್ದು ಅದು ನಿಮ್ಮನ್ನು ಬೆರಗುಗೊಳಿಸುತ್ತದೆ.

ಹರೀಶ್​ ಭಟ್​ ಹೇಳಿದಂತೆ, ಜಹಂಗೀರ್​ ರತಂಜೀ ದಾದಾ ಸಾಹೇಬ್​ ಟಾಟಾ (ಜೆಆರ್​ಡಿ ಟಾಟಾ) ಅವರಿಗೆ ಒಂದು ಪತ್ರ ತಲುಪಿತ್ತು. ಆ ಪತ್ರದಲ್ಲಿ, 1940ರ ದಶಕದಲ್ಲಿ ತನ್ನ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡ್​ಗೆ ಹೋಗಲು ಬಯಸಿದ್ದ ಯುವಕನೋರ್ವ ತನ್ನ ಮನದಿಂಗಿತವನ್ನು ವ್ಯಕ್ತಪಡಿಸಿದ್ದರು. ಆ ಯುವಕ ತಿರುವಾಂಕನೂರ್ ವಿಶ್ವವಿದ್ಯಾಲಯದಲ್ಲಿ ಎಂ.ಎ ಪಡೆದಿದ್ದು, ಪ್ರಥಮ ಸ್ಥಾನವನ್ನು ಪಡೆದಿದ್ದರು. ತಮ್ಮ ಸಮುದಾಯದಲ್ಲಿ ಎದುರಾದ ಅಡೆತಡೆಗಳನ್ನು ಮೀರಿಸಿ ವಿದ್ಯಾಭ್ಯಾಸದಲ್ಲಿ ಮುನ್ನುಗ್ಗಿರುತ್ತಾರೆ. ಆದರೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಹಣದ ಖರ್ಚನ್ನು ಕೋರಿಕೊಂಡು ಜೆಆರ್​ಡಿ ಟಾಟಾರಿಗೆ ಪತ್ರ ಬರೆದಿರುತ್ತಾರೆ.

ಈ ಪತ್ರಕ್ಕೆ ಸ್ಪಂದಿಸಿದ ಟಾಟಾ ಅವರು ₹16,000ದಷ್ಟು ವಿದ್ಯಾರ್ಥಿ ವೇತನದ ಜೊತೆಗೆ ₹1,000 ರೂಪಾಯಿಯಷ್ಟು ಸಾಲವನ್ನೂ ನೀಡಿದ್ದರು ಎನ್ನುವುದು ಗಮನಾರ್ಹ ಸಂಗತಿ. ವಿಶೇಷವೆಂದರೆ ಅದೇ ಯುವಕ ಮುಂದೊಂದು ದಿನ ಇಡೀ ಭಾರತ ಗುರುತಿಸುವಂತಹ ವ್ಯಕ್ತಿಯಾಗಿ ಬೆಳೆಯುತ್ತಾರೆ. ಈ ಯುವಕ ಬೇರೆ ಯಾರೂ ಅಲ್ಲ. ಭಾರತ ಕಂಡ ಶ್ರೇಷ್ಠ ರಾಷ್ಟ್ರಪತಿ ಕೆ.ಆರ್​ ನಾರಾಯಣ್​. ಆಗ ಟಾಟಾ ಅವರಿಗೆ, ಆ ಯುವಕ ಮುಂದೊಂದು ದಿನ ಭಾರತದ ಭವಿಷ್ಯದ ರಾಷ್ಟ್ರಪತಿಯಾಗುತ್ತಾರೆಂದು ತಿಳಿದಿರಲಿಲ್ಲ.

ಮೇ 9ರಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್​​ 6,000 ಪ್ರತಿಕ್ರಿಯೆಯನ್ನು ಹಾಗೂ ಹಲವಾರು ಲೈಕ್ಸ್​ಗಳನ್ನು ಪಡೆದಿದೆ. ಮತ್ತು ನೆಟ್ಟಿಗರಿಂದ ಪ್ರಶಂಸೆಗೆ ಪಾತ್ರವಾಗಿದೆ. ಟಾಟಾ ಸಮೂಹ ಸಂಸ್ಥೆ ದೇಶದ ಅಭಿವೃದ್ಧಿಗೆ ಅಥವಾ ದೇಶದ ಉನ್ನತಿಗಾಗಿ ಹೇಗೆ ಪಾತ್ರವಹಿಸಿದೆ ಎಂದು ನೆಟ್ಟಿಗರು ಕಾಮೆಂಟ್​ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಕೇವಲ ಮಾತೊಂದೇ ಅಲ್ಲದೇ ಟಾಟಾ ಸಮೂಹವು ಯಾವಾಗಲೂ ಸಮಯಕ್ಕಿಂತ ಮುಂಚೆಯೇ ಇರುತ್ತದೆ, ಸಮಾಜ ಮತ್ತು ನಮ್ಮ ದೇಶಕ್ಕಾಗಿ ಮುಖ್ಯಪಾತ್ರವಹಿಸುತ್ತಾರೆ ಎಂದು ನೆಟ್ಟಿಗರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Tata passenger vehicles: ಟಾಟಾ ಮೋಟಾರ್ಸ್ ಪ್ರಯಾಣಿಕರ ವಾಹನಗಳ ಬೆಲೆ ಮೇ 8ರಿಂದ ಏರಿಕೆ