ಪ್ರಾಣಿಗಳ (Animals) ಪ್ರಪಂಚ ಎಲ್ಲದಕ್ಕಿಂತ ಭಿನ್ನ. ತಮ್ಮದೇ ಭಾಷೆಯಲ್ಲಿ ಸನ್ನೆಗಳನ್ನು ಮಾಡಿಕೊಂಡು, ಆಟ ತುಂಟಾಟ, ಹೊಡೆದಾಟ ಮಾಡಿಕೊಂಡು ಒಂದೇ ಪ್ರದೇಶದಲ್ಲಿ ಎಲ್ಲ ಜಾತಿಯ ಪ್ರಾಣಿಗಳೂ ಕೂಡ ಹೊಂದಿಕೊಂಡು ಬದುಕುತ್ತವೆ. ಅಲ್ಲಿಗೆ ಮಾನವನ ಎಂಟ್ರಿಯಾದರೆ ಅವುಗಳಿಗೂ ಕಿರಿಕಿರಿ ಉಂಟಾಗುತ್ತದೆ. ಇದೀಗ ಕಾಂಗರೂವೊಂದು (Kangaroo) ನಾಯಿಯನ್ನುರಕ್ಷಿಸಲು ಮುಂದಾಗಿದ್ದ ವ್ಯಕ್ತಿಯೊಬ್ಬನನ್ನು ಕಾಲಿನಲ್ಲಿ ಜಾಡಿಸಿ ಒದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ (Instagram) ನಲ್ಲಿ ಹಂಚಿಕೊಳ್ಳಲಾದ ವಿಡಿಯೋ ನೋಡಿ ನೆಟ್ಟಿಗರು ನಕ್ಕು ನಕ್ಕು ಸುಸ್ತಾಗಿದ್ದಾರೆ.
ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಗಳನ್ನು ಕರೆದುಕೊಂಡು ವಾಕಿಂಗ್ಗೆ ಹೋಗಿರುತ್ತಾನೆ. ಈ ವೇಳೆ ಅಲ್ಲೇ ಇದ್ದ ಕಾಂಗರೂ ನೊಡಿ ಒಂದು ನಾಯಿ ಕೂಗಿದೆ. ಆಗ ಕೋಪಗೊಂಡ ಕಾಂಗರೂ ಅಟ್ಟಿಸಿಕೊಂಡು ಬಂದಿದೆ. ಆಗ ವ್ಯಕ್ತಿ ನಾಯಿಯನ್ನು ರಕ್ಷಿಸಲು ಮುಂದಾಗಿದ್ದಾನೆ. ಈ ವೇಳೆ ಕಾಂಗರೂ ವ್ಯಕ್ತಿಗೆ ಕಾಲಿನಿಂದ ಜಾಡಿಸಿ ಒದ್ದಿದೆ. ಇದರಿಂದ ಆಯತಪ್ಪಿ ವ್ಯಕ್ತಿ ನೆಲಕ್ಕೆ ಬಿದ್ದಿದ್ದಾನೆ. ದೃಶ್ಯದಲ್ಲಿ ಒಂದು ಕಪ್ಪು ಮತ್ತು ಇನ್ನೊಂದು ಪುಟ್ಟ ಬಿಳಿ ನಾಯಿಮರಿಯನ್ನು ಕಾಣಬಹುದು. ವ್ಯಕ್ತಿ ಕಾಂಗರೂವಿನಿಂದ ಒದೆಸಿಕೊಂಡು ನೆಲಕ್ಕೆ ಬಿದ್ದ ವಿಡಿಯೋವನ್ನು ಆತನೊಂದಿಗಿದ್ದ ಕುಟುಂಬ ಸೆರೆಹಿಡಿದಿದೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ.
ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ature27_12 ಎನ್ನುವ ಖಾತೆ ಹಂಚಿಕೊಂಡಿದೆ. ವಿಡಿಯೋಕ್ಕೆ ಕಾಂಗರೂವಿನಿಂದ ನಾಯಿಯನ್ನು ರಕ್ಷಿಸಲು ಹೋದಾಗ ನಡೆದ ಘಟನೆ ಎಂದು ಕ್ಯಾಪ್ಷನ್ ನೀಡಲಾಗಿದೆ. 3 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಈ ವಿಡಿಯೋ ಪಡೆದಿದೆ.
ಇದನ್ನೂ ಓದಿ:
Published On - 3:45 pm, Fri, 25 February 22