Viral : ರೀಲ್ಸ್ ಹುಚ್ಚಿಗೆ ಮರದ ತುತ್ತ ತುದಿಯಲ್ಲಿ ನಿಂತು ಡಾನ್ಸ್ ಮಾಡಿದ ಮಹಿಳೆ, ವಿಡಿಯೋ ವೈರಲ್

ಇತ್ತೀಚೆಗಿನ ದಿನಗಳಲ್ಲಿ ರೀಲ್ಸ್‌ ಹುಚ್ಚಿನಿಂದ ಯುವಕ ಯುವತಿಯರು ಪ್ರಾಣಕ್ಕೆ ಕುತ್ತು ತರುವಂತಹ ಸಾಹಸಗಳನ್ನು ಮಾಡುತ್ತಿದ್ದು, ಇಂತಹ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಮರದ ತುತ್ತತುದಿಯಲ್ಲಿ ನಿಂತು ಡಾನ್ಸ್ ಮಾಡಿದ್ದಾರೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಬಳಕೆದಾರರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

Viral : ರೀಲ್ಸ್ ಹುಚ್ಚಿಗೆ ಮರದ ತುತ್ತ ತುದಿಯಲ್ಲಿ ನಿಂತು ಡಾನ್ಸ್ ಮಾಡಿದ ಮಹಿಳೆ, ವಿಡಿಯೋ ವೈರಲ್
ವೈರಲ್ ವಿಡಿಯೋ
Image Credit source: Instagram

Updated on: Apr 28, 2025 | 10:55 AM

ಇತ್ತೀಚಿನ ದಿನಗಳಲ್ಲಿ ಎಲ್ಲೆಂದರಲ್ಲಿ ರೀಲ್ಸ್ (reels) ಮಾಡೋದು ಕಾಮನ್ ಆಗಿ ಬಿಟ್ಟಿದೆ. ಲೈಕ್ಸ್ ಹಾಗೂ ವೀವ್ಸ್ ಗಾಗಿ ಈಗಿನ ಯುವ ಸಮುದಾಯವು ಏನು ಬೇಕಾದರೂ ಸಿದ್ಧವಿದ್ದಾರೆ. ಈ ರೀಲ್ಸ್ ಹೆಸರಲ್ಲಿ ಯುವ ಸಮುದಾಯ ಮಾಡ್ತಿರೋ ಹುಚ್ಚಾಟಗಳಿಗೆ ಕೊನೆಯೇ ಇಲ್ಲ. ಕೆಲವರಂತೂ ಹೆಚ್ಚೆಚ್ಚು ಲೈಕ್ಸ್ ಹಾಗೂ ವೀವ್ಸ್ ಗಿಟ್ಟಿಸಿಕೊಳ್ಳಲು ತಮ್ಮ ಪ್ರಾಣವನ್ನೇ ಪಣಕಿಡುವುದನ್ನು ಕಾಣಬಹುದು. ಸದ್ಯಕ್ಕೆ ವೈರಲ್ ಆಗಿರುವ ವಿಡಿಯೋದಲ್ಲಿ ಕಾಶ್ಮೀರಿ ಮಹಿಳೆ (kashmiri women) ಯೊಬ್ಬರು ಮರದ ತುತ್ತ ತುದಿಯಲ್ಲಿ ನಿಂತು ಬ್ಯಾಲೆನ್ಸ್ ಮಾಡಿಕೊಂಡು ಸ್ಟೆಪ್ ಹಾಕಿದ್ದು, ಇದನ್ನು ನೋಡಿದ ನೆಟ್ಟಿಗರು ಬಾಯಿಯ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

ಉಷಾ ನಾಗವಂಶಿ ಎಂಬ ಮಹಿಳೆಯೂ ushanagavamshi31 ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಮರದ ತುತ್ತ ತುದಿಯಲ್ಲಿ ನಿಂತು ಸ್ಟೆಪ್ ಹಾಕುತ್ತಿರುವುದನ್ನು ನೋಡಬಹುದು. ಮರದ ಮೇಲೆ ನಿಂತಿರುವ ಈ ಮಹಿಳೆಯ ಹಿಂಭಾಗದಲ್ಲಿ ಕಡಿದಾದ ಇಳಿಜಾರು ಪ್ರದೇಶವನ್ನು ಕಾಣಬಹುದು. ಆದರೆ ಈ ಮಹಿಳೆಯೂ ಬ್ಯಾಲೆನ್ಸ್ ಮಾಡಿಕೊಂಡು ಝಲ್ಲಾ ವಲ್ಲಾಹ್ ಎಂಬ ಬಾಲಿವುಡ್ ಜನಪ್ರಿಯ ಹಾಡಿಗೆ ಸ್ಟೆಪ್ ಹಾಕಿದ್ದಾಳೆ. ಸ್ವಲ್ಪ ಎಚ್ಚರ ತಪ್ಪಿದ್ದರೂ ಈಕೆ ಪ್ರಪಾತಕ್ಕೆ ಬೀಳುವುದರಲ್ಲಿ ಅನುಮಾನವಿಲ್ಲ. ಆದರೆ ಈ ಮಹಿಳೆಯ ಮುಖದಲ್ಲಿ ಯಾವುದೇ ಭಯವಾಗಲಿ ಕಾಣುತ್ತಿಲ್ಲ, ಬದಲಾಗಿ ಮರದ ಮೇಲೆ ಬ್ಯಾಲೆನ್ಸ್ ಮಾಡಿಕೊಂಡು ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿದ್ದಾಳೆ.

ಇದನ್ನೂ ಓದಿ
ದನದ ಕೊಟ್ಟಿಗೆಯಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ
ಪೈಲಟ್ ಮೊಮ್ಮಗನ ಜೊತೆಯಲ್ಲಿ ಅಜ್ಜನ ಮೊದಲ ವಿಮಾನ ಪ್ರಯಾಣ, ವಿಡಿಯೋ ವೈರಲ್
ಶಸ್ತ್ರಚಿಕಿತ್ಸೆಯ ಸಾಧನ ಬಳಸಿ ಹರಿದ ಚಪ್ಪಲಿ ಹೊಲಿದ ವೈದ್ಯಕೀಯ ವಿದ್ಯಾರ್ಥಿ
ಇದು ಬಾಯಲ್ಲಿ ನೀರೂರಿಸುವ ಫ್ರೂಟ್ ಐಸ್ ಗೋಲಾ

ಇದನ್ನೂ ಓದಿ : Viral Video: ದನದ ಕೊಟ್ಟಿಗೆಯಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಈ ವಿಡಿಯೋ ಈಗಾಗಲೇ 23 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ನೆಟ್ಟಿಗರು ಈ ಮಹಿಳೆಯ ಸಾಹಸಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ‘ರೀಲ್ಸ್ ಹುಚ್ಚಿಗೆ ಈ ರೀತಿಯ ಅಪಾಯಕಾರಿ ಸಾಹಸವನ್ನು ಮಾಡಬೇಡಿ’ ಎಂದಿದ್ದಾರೆ. ಇನ್ನೊಬ್ಬರು, ‘ಇದು ಮತ್ತೊಂದು ಐಫೆಲ್ ಟವರ್’ ಎಂದು ಬರೆದಿದ್ದಾರೆ. ಮತ್ತೊರ್ವ ಬಳಕೆದಾರರು, ‘ಈ ವಿಡಿಯೋವನ್ನು ನೋಡಿದಾಗ ಎದೆಬಡಿತ ಹೆಚ್ಚಾಗುತ್ತದೆ, ಸ್ವಲ್ಪ ಬ್ಯಾಲೆನ್ಸ್ ತಪ್ಪಿದರೂ ಪ್ರಪಾತಕ್ಕೆ ಬೀಳುವುದು ಗ್ಯಾರಂಟಿ’ ಎಂದಿದ್ದಾರೆ. ಇನ್ನು ಕೆಲವರು ಈ ಮಹಿಳೆಯ ಧೈರ್ಯವನ್ನು ಶ್ಲಾಘಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ