ಸತತ 27 ಪ್ರಕರಣಗಳನ್ನು ಗೆದ್ದ ನಕಲಿ ವಕೀಲ, ಇಲ್ಲಿದೆ ಕುತೂಹಲಕಾರಿ ಮಾಹಿತಿ

ಈಗಿನ ಕಾಲದಲ್ಲಿ ಕೆಲವರು ತಮ್ಮ ಬುದ್ಧಿವಂತಿಕೆಯಿಂದಲೇ ಎಲ್ಲರನ್ನು ಯಾಮಾರಿಸಿ ಬಿಡುತ್ತಾರೆ. ಅದರಲ್ಲಿ ಯಾವುದೇ ವೈದ್ಯಕೀಯ ಪದವಿ ಪಡೆದುಕೊಳ್ಳದೇ ಕ್ಲಿನಿಕ್ ಓಪನ್ ಮಾಡಿ ಜನಸಾಮಾನ್ಯರನ್ನು ಯಾಮಾರಿಸಿ ಹಣ ಮಾಡುವವರನ್ನು ನೋಡಿರಬಹುದು. ಆದ್ರೆ ಇಲ್ಲೊಬ್ಬ ವ್ಯಕ್ತಿಯೂ ನಕಲಿ ವಕೀಲನಾಗಿದ್ದು ಬರೋಬ್ಬರಿ 27 ಪ್ರಕರಣಗಳನ್ನು ಗೆದ್ದಿದ್ದು, ಇದನ್ನು ಕೇಳಿದ ನಿಮಗೆ ಅಚ್ಚರಿ ಎನಿಸಬಹುದು, ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಸತತ 27 ಪ್ರಕರಣಗಳನ್ನು ಗೆದ್ದ ನಕಲಿ ವಕೀಲ, ಇಲ್ಲಿದೆ ಕುತೂಹಲಕಾರಿ ಮಾಹಿತಿ
ಬ್ರಿಯನ್ ಮೆಂಡ
Image Credit source: Instagram

Updated on: May 06, 2025 | 10:19 AM

ಕೀನ್ಯಾ, ಮೇ 6: ಕಾಲ (time) ತುಂಬಾನೇ ಕೆಟ್ಟು ಹೋಗಿದೆ. ಯಾವುದು ನಕಲಿ ಯಾವುದು ಅಸಲಿ ಎಂದು ಗುರುತಿಸುವುದೇ ಕಷ್ಟವಾಗಿದೆ. ಸಾಮಾನ್ಯವಾಗಿ ನಾವೆಲ್ಲರೂ ವೈದ್ಯರೆಂದು ಹೇಳಿಕೊಂಡು ಜನಸಾಮಾನ್ಯರೆಂದು ಯಾಮಾರಿಸುವ ಬಗೆಗಿನ ಸುದ್ದಿ ಗಳನ್ನು ಆಗಾಗ ಕೇಳುತ್ತಿರುತ್ತೇವೆ. ಆದರೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಕಲಿ ವಕೀಲರ ಹಾವಳಿ ಹೆಚ್ಚಾಗಿದೆ. ಕಾನೂನು ವ್ಯವಸ್ಥೆ ಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಇಲ್ಲೊಬ್ಬ ವ್ಯಕ್ತಿಯೂ ನಕಲಿ ವಕೀಲ (fake lawyer) ಎಂದು ಯಾಮಾರಿಸಿದ್ದು ಮಾತ್ರವಲ್ಲ ಈತನು ತನ್ನ ಬುದ್ಧಿವಂತಿಕೆಯಿಂದ ಎಲ್ಲಾ ಕೇಸ್ ಗಳನ್ನು ಗೆದಿದ್ದಾನೆ. ಈತನ ಹೆಸರು ಬ್ರಿಯನ್ ಮೆಂಡ ಆಗಿದ್ದು, ಈ ಘಟನೆಯೂ ಕೀನ್ಯಾ (kenya) ದಲ್ಲಿ ನಡೆದಿದೆ.

ಈಗಿನ ಕಾಲದಲ್ಲಿ ವಕೀಲ ವೃತ್ತಿ ಸೇರಲು ಬೇಕಾದ ಪದವಿ ಪಡೆದುಕೊಂಡಿದ್ದರೂ ಕೇಸ್ ಗಳನ್ನು ಗೆಲ್ಲಲು ಅಷ್ಟೇ ಬುದ್ಧಿವಂತಿಕೆ ಬೇಕಾಗುತ್ತದೆ. ಇಂತಹ ಕಾಲಘಟ್ಟದಲ್ಲಿ  ಬ್ರಿಯನ್ ಮೆಂಡ ಹೆಸರಿನ ನಕಲಿ ವಕೀಲನೊಬ್ಬನು ಒಂದಲ್ಲ, ಎರಡಲ್ಲ ಬರೋಬ್ಬರಿ 27 ಪ್ರಕರಣಗಳನ್ನು ಗೆದ್ದು, ವಕೀಲ ವೃತ್ತಿಯಲ್ಲಿರುವವರಿಗೂ ಅಚ್ಚರಿ ಮೂಡುವಂತೆ ಮಾಡಿದ್ದಾನೆ.

ಇದನ್ನೂ ಓದಿ
ಮದುವೆಯ ಅರಿಶಿನ ಶಾಸ್ತ್ರದ ವೇಳೆ ನೃತ್ಯ ಮಾಡುವಾಗ ಹೃದಯಾಘಾತದಿಂದ ವಧು ಸಾವು
ಐಸ್ ಕ್ರೀಂ ಮೇಲೆ ಗರಿಗರಿಯಾದ ಆಲೂಗಡ್ಡೆ ಫ್ರೈಸ್
ಡ್ರೀಮ್ 11 ನಲ್ಲಿ 39 ರೂ ಹೂಡಿಕೆ,ಯುವಕನಿಗೆ ಬಂತು ನೋಡಿ ನಾಲ್ಕು ಕೋಟಿ
ಕುದುರೆ ಮೇಲೇರಿ ಮದುವೆ ಮಂಟಪಕ್ಕೆ ಬಂದ ವರನಿಗೆ ಮಳೆಯಿಂದ ಸ್ವಾಗತ

ವೈರಲ್ ವಿಡಿಯೋ ಇಲ್ಲಿದೆ ನೋಡಿ :

ಇದನ್ನೂ ಓದಿ : ಮದುವೆಯ ಅರಿಶಿನ ಶಾಸ್ತ್ರದ ವೇಳೆ ನೃತ್ಯ ಮಾಡುವಾಗ ಹೃದಯಾಘಾತದಿಂದ ವಧು ಸಾವು

ಹೌದು ಈ ನಕಲಿ ವಕೀಲನು 27 ನೇ ಪ್ರಕರಣವನ್ನು ವಾದಿಸಿ ಗೆದಿದ್ದು ವಕೀಲ ವೃತ್ತಿಯಲ್ಲಿರುವವವರೂ ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾನೆ. ಯಾವುದೇ ಕಾನೂನು ಪದವಿ ಪಡೆಯದಿದ್ದರೂ ಕೂಡ ತನ್ನ ಚಾಣಚಕ್ಯತೆ ಹಾಗೂ ಬುದ್ಧಿವಂತಿಕೆಯಿಂದ ಒಟ್ಟಾರೆ 27 ಪ್ರಕರಣಗಳನ್ನು ವಾದಿಸಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾನೆ.

 

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ