Viral Video : ಅಯ್ಯೋ, ಬಿದ್ದ ಬಿದ್ದ ಬಿದ್ದೇಬಿಟ್ಟ! ಆಮೇಲೆ?

| Updated By: ಶ್ರೀದೇವಿ ಕಳಸದ

Updated on: Aug 04, 2022 | 4:54 PM

Trending : ಎತ್ತರದ ಜಾಗಗಳಲ್ಲಿ ನಿಂತು ಕೆಲಸ ಮಾಡುವಾಗ ಅಪಾಯದ ಸಾಧ್ಯತೆ ಇದ್ದೇ ಇರುತ್ತದೆ. ಆದ್ದರಿಂದ ಇಂಥ ಕೆಲಸಗಳನ್ನೆಲ್ಲ ಒಬ್ಬರೇ ಇದ್ದಾಗ ಎಂದೂ ಮಾಡದಿರಿ.

Viral Video : ಅಯ್ಯೋ, ಬಿದ್ದ ಬಿದ್ದ ಬಿದ್ದೇಬಿಟ್ಟ! ಆಮೇಲೆ?
ತಮ್ಮ ಬೀಳುತ್ತಿದ್ದಂತೆ ಅಣ್ಣ ಹಿಡಿದುಕೊಂಡುಬಿಟ್ಟ.
Follow us on

Trending : ಕೇರಳದ ಮಲ್ಲಪ್ಪುರಂನ ಯುವಕನೊಬ್ಬ ಮಹಡಿಯಿಂದ ಬಿಳುತ್ತಿದ್ದಾಗ ಆತನ ಅಣ್ಣ ಅವನನ್ನು ಹಿಡಿದುಕೊಂಡಿದ್ದರಿಂದ ಅಪಾಯದಿಂದ ಪಾರಾಗಿದ್ದಾನೆ. ಸದ್ಯ ಯಾವುದೇ ಗಾಯವಾಗಿಲ್ಲ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಈಗ ವೈರಲ್ ಆಗಿದೆ. ಟೆರೇಸ್​ ಸ್ವಚ್ಛಗೊಳಿಸುವ ಕೆಲಸದಲ್ಲಿ ಮಗ್ನನಾಗಿದ್ದಾಗ ಈ ಘಟನೆ ಸಂಭವಿಸಿದೆ. ಪೈಪ್​ನಿಂದ ಟೆರೇಸಿಗೆ ನೀರು ಸಿಂಪಡಿಸುತ್ತಿರುವಾಗ ಅರಿವಿಲ್ಲದೇ ಹಿಂಬದಿಯಲ್ಲಿ ಜಾರಿ ಬಿದ್ದಿದ್ದಾನೆ. ತಕ್ಷಣವೇ ಅವನ ಅಣ್ಣ ಅವನನ್ನು ಹಿಡಿದುಕೊಂಡಿದ್ದಕ್ಕೆ ಜೀವ ಉಳಿದಿದೆ! ಇಬ್ಬರೂ ನೆಲಕ್ಕುರುಳಿದ್ದಾರಷ್ಟೇ. ಹೆಚ್ಚಿನ ನೋವು ಗಾಯಗಳು ಸಂಭವಿಸದೇ ಇರುವುದು ಅದೃಷ್ಟವಲ್ಲದೆ ಇನ್ನೇನು? ನೀವೂ ಹುಷಾರು! ಎತ್ತರದಲ್ಲಿ ನಿಂತು ಇಂಥ ಕೆಲಸಗಳಲ್ಲಿ ತೊಡಗಿಕೊಂಡಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಕೆಳಗೊಬ್ಬರು ಸಹಾಯಕ್ಕೆ ನಿಂತಿರುವುದು ಬಹಳೇ ಮುಖ್ಯ.

Published On - 4:52 pm, Thu, 4 August 22