Viral: ಅಮ್ಮಾ ನನ್ಗೆ ಡ್ರೈವರ್‌ ಸೀಟ್‌ ಬೇಕೇ ಬೇಕು ಎಂದು ಅತ್ತ ಬಾಲಕನನ್ನು ತನ್ನ ಬಳಿಯೇ ಕೂರಿಸಿಕೊಂಡ ಬಸ್‌ ಚಾಲಕ

ಚಾಲಕರ ಮಾನವೀಯ ಕಾರ್ಯಗಳಿಗೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ವೈರಲ್‌ ಆಗುತ್ತಲೇ ಇರುತ್ತವೆ. ಇದೀಗ ಇಂತಹದ್ದೇ ವಿಡಿಯೋವೊಂದು ವೈರಲ್‌ ಆಗಿದ್ದು, ಅಮ್ಮ ನನ್ಗೆ ಡ್ರೈವರ್‌ ಸೀಟ್‌ ಬೇಕೇ ಬೇಕು ಎಂದು ಹಟ ಮಾಡಿದ ಬಾಲಕನನ್ನು ತನ್ನ ಸೀಟಿನಲ್ಲಿಯೇ ಕೂರಿಸಿ ಬಸ್‌ ಚಾಲಕರೊಬ್ಬರು ಪುಟ್ಟ ಬಾಲಕನ ಪುಟ್ಟ ಆಸೆಯನ್ನು ಪೂರೈಸಿದ್ದಾರೆ. ಬಸ್‌ ಚಾಲಕನ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಪುಟ್ಟ ಮಕ್ಕಳೇ ಹಾಗೆ ಪ್ರತಿಯೊಂದು ವಿಷಯಕ್ಕೂ ಹಠ ಮಾಡುತ್ತಾರೆ. ಕಣ್ಣಿಗೆ ಕಂಡದ್ದೆಲ್ಲವೂ ಬೇಕೇ ಬೇಕು ಎನ್ನುತ್ತಾರೆ. ಮಕ್ಕಳ ಈ ಹಠಮಾರಿತನವನ್ನು ನಿಭಾಯಿಸುವುದೇ ಪೋಷಕರಿಗೆ ಒಂದು ದೊಡ್ಡ ಸವಾಲು ಅಂತಾನೇ ಹೇಳಬಹುದು. ಇದೀಗ ಇಲ್ಲೊಂದು ಮಗುವಿನ ಹಠಮಾರಿತನಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್‌ ಆಗಿದ್ದು, ತಾಯಿಯೊಂದಿಗೆ ಬಸ್‌ ಹತ್ತಿದ ಮಗುವೊಂದು ನಾನು ಡ್ರೈವರ್‌ ಸೀಟಿನಲ್ಲೇ ಕೂರಬೇಕು ಎಂದು ಹಠ ಮಾಡಿ ಜೋರಾಗಿ ಅತ್ತಿದ್ದು, ಮಗುವಿನ ಅಳುವನ್ನು ನೋಡಲಾರದೆ ಬಸ್‌ ಚಾಲಕ ಮಗುವನ್ನು ತನ್ನ ಸೀಟಿನಲ್ಲಿ ಕೂರಿಸಿ ಆತನ ಆಸೆಯನ್ನು ಪೂರೈಸಿದ್ದಾರೆ.

ಈ ಘಟನೆ ಕೇರಳದ ಚೆಂಗನ್ನೂರಿನಲ್ಲಿ ನಡೆದಿದ್ದು, ನಾನು ಡ್ರೈವರ್‌ ಸೀಟಿನಲ್ಲಿ ಕೂರಬೇಕೆಂದು ಹಠ ಮಾಡಿದ ಬಾಲಕನನ್ನು ತನ್ನ ಸೀಟಿನಲ್ಲಿ ಕೂರಿಸಿ ಖಾಸಗಿ ಬಸ್‌ ಚಾಲಕರೊಬ್ಬರು ಆ ಬಾಲಕನ ಆಸೆಯನ್ನು ಪೂರೈಸಿದ್ದಾರೆ. ಈ ಕುರಿತ ವಿಡಿಯೋವೊಂದನ್ನು UK 4 STAR NS ಹೆಸರಿನ ಯೂಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ವಿಜಯದಶಮಿಯಂದು ಜನಿಸಿದ ಹೆಣ್ಣು ಮಗುವನ್ನು ದೇವಿಯಂತೆ ಅಲಂಕರಿಸಿದ ವೈದ್ಯೆ

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಪುಟ್ಟ ಬಾಲಕನೊಬ್ಬ ತನ್ನ ತಾಯಿಯ ಜೊತೆಯಲ್ಲಿ ಬಸ್‌ ಏರುತ್ತಿರುವ ದೃಶ್ಯವನ್ನು ಕಾಣಬಹುದು. ಹೀಗೆ ಬಸ್‌ ಒಳಗೆ ಬಂದ ಬಾಲಕ ನಾನು ಬೇರೆ ಯಾವುದೇ ಸೀಟ್‌ನಲ್ಲಿ ಕೂರುವುದಿಲ್ಲ ನನ್ಗೆ ಡ್ರೈವರ್‌ ಸೀಟ್‌ ಬೇಕು ಎಂದು ಹಟ ಮಾಡುತ್ತಾನೆ. ಅಷ್ಟೇ ಅಲ್ಲದೇ ಜೋರಾಗಿ ಅಳುತ್ತಾನೆ. ಮಗುವಿನ ಈ ಅಳುವನ್ನು ನೋಡಲಾರದೆ ಆ ಬಸ್ಸಿನ ನಿರ್ವಾಹಕ ಮತ್ತು ಚಾಲಕ ಮಗುವನ್ನು ಡ್ರೈವರ್‌ ಸೀಟ್‌ನಲ್ಲಿ ಕೂರಿಸಿ ಆತನ ಪುಟ್ಟ ಆಸೆಯನ್ನು ಪೂರೈಸುತ್ತಾರೆ. ಈ ಹೃದಯಸ್ಪರ್ಶಿ ವಿಡಿಯೋ ಇದೀಗ ನೆಟ್ಟಿಗರ ಮನ ಗೆದ್ದಿದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:45 pm, Sat, 19 October 24