ಮಕ್ಕಳು ಹಾಡು ಹೇಳುತ್ತಿದ್ದರೆ ಕೇಳುವುದೇ ಮನಸ್ಸಿಗೆ ಹಿತವೆನಿಸುತ್ತದೆ. ಅದೆಷ್ಟೇ ಕಷ್ಟದ ಹಾಡಾಗಿರಲಿ ತಮಗೆ ಇಷ್ಟವಾದ ಹಾಡನ್ನು ಸರಳವಾಗಿ ಕಲಿತುಬಿಡುತ್ತಾರೆ. ಇಲ್ಲೋರ್ವ ಬಾಲಕ, ಅರಿಜಿತ್ ಸಿಂಗ್ ಅವರ ಹೋ… ಮುಜೇ ಚೋಡ್ಕರ್ ಜೋ ತುಮ್ ಜಾವೋಗೇ.. ಹಾಡನ್ನು ಸುಮಧುರವಾಗಿ ಹಾಡಿದ್ದಾನೆ. ವಿಡಿಯೋ ನೋಡಿದ ನೆಟ್ಟಿಗರು ಬಾಲಕನ ಧ್ವನಿಗೆ ಫಿದಾ ಆಗಿದ್ದು, ಪ್ರತಿಭೆಗಳಿಗೆ ಯಾವುದೇ ಕೊರತೆ ಇಲ್ಲ ಎಂದು ಬಾಲಕನನ್ನು ಶ್ಲಾಘಿಸಿದ್ದಾರೆ.
ಕಾರ್ ಡ್ರೈವರ್ ಮೊದಲಿಗೆ ಬಾಲಕನೊಂದಿಗೆ ಮಾತನಾಡುವುದುನ್ನು ನೀವು ವಿಡಿಯೋದಲ್ಲಿ ನೋಡಬಹುದು. ಒಂದು ಹಾಡನ್ನು ಹೇಳುವುದಾಗಿ ಡ್ರೈವರ್ ಬಾಲಕನಲ್ಲಿ ಕೇಳಿಕೊಳ್ಳುತ್ತಾನೆ. ಕಾರಿನ ಒಳಗೆ ಕೂತು ಬಾಲಕ ಅರಿಜಿತ್ ಸಿಂಗ್ ಅವರ ಹಾಡನ್ನು ಹೇಳಲು ಪ್ರಾರಂಭಿಸುತ್ತಾನೆ. ಜನಪ್ರಿಯತೆ ಪಡೆದ ಹೋ…ಮುಜೇ ಚೋಡ್ಕರ್ ಜೋ ತುಮ್ ಜಾವೋಗೇ ಹಾಡನ್ನು ಸುಮಧುರವಾಗಿ ಹಾಡುತ್ತಾನೆ.
ಜೂನ್ 4ನೇ ತಾರೀಕಿನಂದು ಬಾಲಕ ಹೇಳಿದ ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಫೇಸ್ಬುಕ್ ಹಾಗೂ ಟ್ವಿಟರ್ ಪುಟಗಳಲ್ಲಿಯೂ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು ಮಿಲಿಯನ್ಗಿಂತಲೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಮಕ್ಕಳ ಹಾಡು ಹೇಳುವ ವಿಡಿಯೋ ನೆಟ್ಟಿಗರಿಗೆ ಬಲು ಇಷ್ಟವಾಗಿದೆ. ‘ತನ್ನ ಸುಮಧುರ ಕಂಠದಿಂದ ಸುಂದರವಾಗಿ ಬಾಲಕ ಹಾಡಿದ್ದಾನೆ’ ಎಂದು ಇನ್ನೋರ್ವರು ಹೇಳಿದ್ದಾರೆ. ನಮ್ಮ ಸುತ್ತಮುತ್ತಲೇ ಅದೆಷ್ಟೋ ಪ್ರತಿಭೆಗಳಿವೆ. ಪ್ರಯತ್ನ ಪಟ್ಟರೆ ಮುಂದೊಂದು ದಿನ ಈ ಬಾಲಕ ಸಾಧನೆ ಮಾಡಬಹುದು ಎಂಬ ಅನಿಸಿಕೆ ಹಂಚಿಕೊಂಡಿದ್ದಾರೆ.
ರಾತ್ರಿಯಿಂದ ಬೆಳಗಾಗುವದರೊಳಗೆ ಅದೆಷ್ಟೋ ವಿಡಿಯೋಗಳು ವೈರಲ್ ಆಗಿರುತ್ತವೆ. ನಮ್ಮ ಸುತ್ತಮುತ್ತಲೇ ಅಡಗಿರುವ ಅದೆಷ್ಟೋ ಜನರು ಬೆಳಗಾಗುವುದರೊಳಗೆ ಜನಪ್ರಿಯತೆ ಪಡೆದಿರುತ್ತಾರೆ. ಹೊಸ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿದೆ ಸಾಮಾಜಿಕ ಜಾಲತಾಣ.
ಇದನ್ನೂ ಓದಿ:
ಹಿಂದಿ ಹಾಡಿಗೆ ಸ್ಟೆಪ್ ಹಾಕಿದ ಭಜರಂಗಿ ಭಾಯಿಜಾನ್ ಸಿನಿಮಾದ ಹರ್ಷಾಲಿ ಮಲ್ಹೋತ್ರಾ; ವಿಡಿಯೋ ವೈರಲ್
Viral Video: ನ್ಯೂಸ್ ಓದುವಾಗ ಶಾರ್ಟ್ಸ್ ಧರಿಸಿ ಕುಳಿತ ನ್ಯೂಸ್ ಆ್ಯಂಕರ್! ವಿಡಿಯೋ ವೈರಲ್
Published On - 3:59 pm, Tue, 8 June 21