ಹಿಂದಿ ಹಾಡಿಗೆ ಸ್ಟೆಪ್​ ಹಾಕಿದ ಭಜರಂಗಿ ಭಾಯಿಜಾನ್​ ಸಿನಿಮಾದ ಹರ್ಷಾಲಿ ಮಲ್ಹೋತ್ರಾ; ವಿಡಿಯೋ ವೈರಲ್

ಹಿಂದಿ ಹಾಡಿಗೆ ಸ್ಟೆಪ್​ ಹಾಕಿದ ಭಜರಂಗಿ ಭಾಯಿಜಾನ್​ ಸಿನಿಮಾದ ಹರ್ಷಾಲಿ ಮಲ್ಹೋತ್ರಾ; ವಿಡಿಯೋ ವೈರಲ್
ಹರ್ಷಾಲಿ ಮಲ್ಹೋತ್ರಾ

ನೀಲಿ ಬಣ್ಣದ ಅನಾರ್ಕಲಿ ತೊಟ್ಟು ಹರ್ಷಾಲಿ ಹಿಂದಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಸಿಂಪಲ್​ ಹಾಡಿಗೆ ಅವರು ಹೆಜ್ಜೆ ಹಾಕಿದ್ದು, ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸದ್ಯ,  ಈ ವಿಡಿಯೋಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Rajesh Duggumane

|

Dec 20, 2021 | 3:08 PM

ಭಜರಂಗಿ ಭಾಯಿಜಾನ್​ ಸಿನಿಮಾದಲ್ಲಿ ಹರ್ಷಾಲಿ ಮಲ್ಹೋತ್ರಾ ನಟಿಸಿದ್ದರು. ಈ ಸಿನಿಮಾ ಅವರ ಖ್ಯಾತಿಯನ್ನು ಹೆಚ್ಚಿಸಿತ್ತು. ಈ ಸಿನಿಮಾ ತೆರೆಕಂಡ ನಂತರದಲ್ಲಿ ಅವರ ಅಭಿಮಾನಿ ಬಳಗ ದೊಡ್ಡದಾಗಿದೆ. ಹೀಗಾಗಿ, ಅವರು ಸದಾ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್​ ಆಗಿರುತ್ತಾರೆ. ಈಗ ಅವರು ಹೊಸ ವಿಡಿಯೋ ಒಂದನ್ನು ಮಾಡಿ ಹಾಕಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್​ ಆಗಿದೆ.

ನೀಲಿ ಬಣ್ಣದ ಅನಾರ್ಕಲಿ ತೊಟ್ಟು ಹರ್ಷಾಲಿ ಹಿಂದಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಸಿಂಪಲ್​ ಹಾಡಿಗೆ ಅವರು ಹೆಜ್ಜೆ ಹಾಕಿದ್ದು, ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸದ್ಯ,  ಈ ವಿಡಿಯೋಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಜರಂಗಿ ಭಾಯಿಜಾನ್​ ಸಿನಿಮಾದಲ್ಲಿ ಹರ್ಷಾಲಿ ಮುನ್ನಿ ಆಗಿ ಕಾಣಿಸಿಕೊಂಡಿದ್ದರು. ಈ ಹೆಸರಿನ ಮೂಲಕವೇ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದರು. ‘ಮುನ್ನಿ ಉತ್ತಮವಾಗಿ ಡಾನ್ಸ್​ ಕೂಡ ಮಾಡುತ್ತಾರೆ ಎಂದು ಕೆಲವರು ಕಮೆಂಟ್ ಬಾಕ್ಸ್​ನಲ್ಲಿ ಬರೆದಿದ್ದಾರೆ. ಇನ್ನೂ ಕೆಲವರು, ಅತ್ಯುತ್ತಮ ಡಾನ್ಸ್​ ಪರ್ಫಾರ್ಮೆನ್ಸ್​ ಎಂದು ಹೊಗಳಿದ್ದಾರೆ.

ಇತ್ತೀಚೆಗಷ್ಟೇ ಹರ್ಷಾಲಿ 13 ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಇದರ ಫೋಟೋ ಹಾಗೂ ವಿಡಿಯೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದಾದ ನಂತರ ಅವರು ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಪೋಸ್ಟ್​ ಮಾಡಿ ಎಲ್ಲರಿಗೂ ಧನ್ಯವಾದ ತಿಳಿಸಿದ್ದರು.

ಭಜರಂಗಿ ಭಾಯಿಜಾನ್​ 2015ರ ಜುಲೈ ತಿಂಗಳಲ್ಲಿ ತೆರೆಗೆ ಬಂದಿತ್ತು. ಹರ್ಷಾಲಿ ಪಾಕಿಸ್ತಾನದ ಹುಡುಗಿ ಆಗಿ ಕಾಣಿಸಿಕೊಂಡಿದ್ದರು. ಕುಟುಂಬದಿಂದ ಬೇರೆ ಆಗುವ ಮುನ್ನಿ, ಭಾರತದಲ್ಲಿ ಸಿಕ್ಕಿ ಬೀಳುತ್ತಾಳೆ. ಆಗ ಅವಳಿಗೆ ಪವನ್​ ಕುಮಾರ್ ಚತುರ್ವೇದಿ  (ಸಲ್ಮಾನ್​ ಖಾನ್​) ಪರಿಚಯ ಆಗುತ್ತದೆ. ನಂತರ ಆಕೆಯನ್ನು ಭಜರಂಗಿ ಹೇಗೆ ಪಾಕಿಸ್ತಾನಕ್ಕೆ ತಲುಪಿಸುತ್ತಾರೆ ಎನ್ನುವುದೇ ಸಿನಿಮಾ ಕಥೆ. 90 ಕೋಟಿ ವೆಚ್ಛದಲ್ಲಿ ಸಿದ್ಧವಾದ ಈ ಸಿನಿಮಾ ದೊಡ್ಡಮಟ್ಟದಲ್ಲಿ ಕಮಾಯಿ ಮಾಡಿತ್ತು.

ಇದನ್ನೂ ಓದಿ: ಸಲ್ಮಾನ್​ ಖಾನ್​ ಕೆರಿಯರ್​ ನಾಶ ಮಾಡಿ ಬೀದಿಗೆ ತರುತ್ತೇನೆ; ಪ್ರತಿಜ್ಞೆ ಮಾಡಿದ ಕಮಾಲ್ ಖಾನ್​

Follow us on

Related Stories

Most Read Stories

Click on your DTH Provider to Add TV9 Kannada