
ಇಡೀ ಜಗತ್ತು ಅಮೆರಿಕ, ಇರಾನ್, ಇಸ್ರೇಲ್ ಯುದ್ಧ ಬಗ್ಗೆ ಚಿಂತೆ ಮಾಡುತ್ತಿದ್ದಾರೆ. ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ಗೆ ಬೇರೆಯೇ ಚಿಂತೆ ಇದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್ಗಳು ವೈರಲ್ ಆಗುತ್ತಿದೆ. ಕಿಮ್ ಜಾಂಗ್ ಉನ್ ಸರ್ವಾಧಿಕಾರಿ, ತುಂಬಾ ಕಟ್ಟುನಿಟ್ಟಿನ ನಿಮಯಗಳನ್ನು ಮಾಡುವ ಅಧ್ಯಕ್ಷ ಎಂದು ಹೇಳಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅವರಿಗೆ ಯುದ್ಧ ಮಾಡುವ ಮೂಡು ಬಂದಿದೆ. ಅದು ಅಮೆರಿಕ, ಇರಾನ್, ಇಸ್ರೇಲ್ ಸಂಘರ್ಷ ನೋಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲಿಗರು ಹೇಳುತ್ತಿದ್ದಾರೆಎ. ಈ ಬಗ್ಗೆ ಸೋಶಿಯಲ್ ಮೀಡಿಯಾಲ್ಲಿ ಸಖತ್ ಮೀಮ್ಸ್ಘಲು ವೈರಲ್ ಆಗುತ್ತಿದೆ. ಅಣ್ವಸ್ತ್ರ ಮತ್ತು ಕ್ಷಿಪಣಿ ಪರೀಕ್ಷೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಕಿಮ್, ಈ ಮಹಾಯುದ್ಧದಂತಹ ಪರಿಸ್ಥಿತಿಯಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದ ಕಾರಣ ನೆಟ್ಟಿಗರು ಅವರನ್ನು “ನೋ ಇನ್ವಿಟೇಶನ್” (ಆಹ್ವಾನವಿಲ್ಲದ ಅತಿಥಿ) ಎಂದು ಕಿಚಾಯಿಸುತ್ತಿದ್ದಾರೆ.
ಯುದ್ಧದ ಮಾಡುವ ಆಸಕ್ತಿ ಇದ್ದರು, ಅತ್ಯಾಧುನಿಕ ಕ್ಷಿಪಣಿಗಳು ಇದೆ. ಅದ್ರೂ ಯಾರೂ ಈ ಯುದ್ಧಕ್ಕೆ ಕರೆಯುತ್ತಿಲ್ಲವಲ್ಲ ಎಂದು ಕಿಮ್ ಬೇಸರಗೊಂಡಿದ್ದಾರೆ ಎಂಬಂತೆ ಬಿಂಬಿಸುವ ಮೀಮ್ಗಳು ಹರಿದಾಡುತ್ತಿವೆ. ದೂರದರ್ಶಕದ (Binoculars) ಮೂಲಕ ಕಿಮ್ ಯುದ್ಧವನ್ನು ನೋಡುತ್ತಿರುವ ಫೋಟೋಗಳಿಗೆ “ಸಾರ್, ನಮ್ಮ ಕಡೆಗೆ ಇನ್ನೂ ಯಾವುದೇ ಕ್ಷಿಪಣಿ ಬರುತ್ತಿಲ್ಲ” ಎಂಬಂತಹ ಹಾಸ್ಯಭರಿತ ಕ್ಯಾಪ್ಷನ್ಗಳನ್ನು ನೀಡಲಾಗುತ್ತಿದೆ. ಇನ್ನು ಕೆಲವರು ಟ್ರಂಪ್ ಹಾಗೂ ಕಿಮ್ ಜಾಂಗ್ ಉನ್ ತಮಾಷೆಯ ಮೀಮ್ಸ್ಗಳನ್ನು ಹಂಚಿಕೊಂಡಿದ್ದಾರೆ. ಸರ್ ನನಗೂ ಒಂದು ಅವಕಾಶ ನೀಡಿ ಎಂದು ಹೇಳುವ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಜಿಮ್ಗೆ ಲವ್ ಇರುವವರು ಹೋಗಬಾರದು, ಇದು ಸಿಂಗಲ್ಸ್ಗೆ ಮಾತ್ರ : ಬ್ರೋ ಕೋಡ್’ ಸಂಸ್ಕೃತಿ ವೈರಲ್
ಇತ್ತೀಚಿನ ‘ಆಪರೇಷನ್ ಎಪಿಕ್ ಫ್ಯೂರಿ’ ಅಡಿಯಲ್ಲಿ ಇರಾನ್ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯಾದ ನಂತರ ಸಂಘರ್ಷ ತಾರಕಕ್ಕೇರಿದೆ. ಇಂತಹ ದೊಡ್ಡ ಮಟ್ಟದ ಜಾಗತಿಕ ವಿದ್ಯಮಾನದಲ್ಲಿ ಕಿಮ್ ಅಪ್ರಸ್ತುತವಾಗಿರುವುದು ಮೀಮ್ ಕ್ರಿಯೇಟರ್ಗಳಿಗೆ ಆಹಾರವಾಗಿದೆ. ಫೆಬ್ರವರಿ 28, 2026 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದವು. ಈ ದಾಳಿಯಲ್ಲಿ ಇರಾನ್ನ ಪರಮಾಣು ಕೇಂದ್ರಗಳು ಮತ್ತು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಲಾಗಿತ್ತು. ಇರಾನ್ ಸಹ ಪ್ರತಿ ದಾಳಿ ನಡೆಸಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ