Tomato : ಎರಡು ತಿಂಗಳ ಹಿಂದೆಯಷ್ಟೇ ಒಂದು ಕಿ. ಗ್ರಾಂಗೆ ರೂ. 20 ಇದ್ದ ಟೊಮ್ಯಾಟೋ ಇದೀಗ ರೂ. 150 ದಾಟಿದೆ. ಏರಿದ ಬೆಲೆ ಇಳಿಯದ ಕಾರಣ ಹತಾಶೆಗೊಂಡ ಜನರು ಸಾಮಾಜಿಕ ಜಾಲತಾಣದಲ್ಲಿ (Social Media) ಹೆಚ್ಚು ಸೃಜನಶೀಲರಾಗುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಸಹೋದರನೊಬ್ಬ ಸಹೋದರಿಯ ಹುಟ್ಟುಹಬ್ಬಕ್ಕೆ 4 ಕಿ. ಗ್ರಾಂ ಟೊಮ್ಯಾಟೋ ಉಡುಗೊರೆಯಾಗಿ ಕೊಟ್ಟಿದ್ದಾರೆ. ಈ ಎಲ್ಲದರ ಮಧ್ಯೆ ಹೊಲವೊಂದರಲ್ಲಿ ಟೊಮ್ಯಾಟೋ ಕಳ್ಳತನವಾದ ಪ್ರಕರಣವೂ ಬೆಳಕಿಗೆ ಬಂದಿದೆ. ಈ ಸುದ್ದಿ ನಾಗರಾಜನಿಗೂ (Cobra) ತಲುಪಿತೋ ಏನೋ, ಅವನು ಸ್ವತಃ ಟೊಮ್ಯಾಟೊ ಕಾಯಲು ಪಣ ತೊಟ್ಟು ನಿಂತಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ತಟ್ಟೆಗಳಲ್ಲಿ ತುಂಬಿಟ್ಟಿರುವ ಟೊಮ್ಯಾಟೊಗಳ ಹಿಂದೆ ಕುಳಿತಿರುವ ನಾಗರಾಜ ಹೆಡೆಬಿಚ್ಚಿ ಹಿಸ್ ಹಿಸ್ ಎನ್ನುತ್ತಿದ್ದಾನೆ. ಈ ವಿಡಿಯೋ ಅನ್ನು ಇನ್ಸ್ಟಾಗ್ರಾಂನ ಮಿರ್ಜಾ ಎಂಡಿ ಆರೀಫ್ ಎಂಬ ಖಾತೆದಾರರು ಪೋಸ್ಟ್ ಮಾಡಿದ್ದಾರೆ. ಅನೇಕರು ಈ ವಿಡಿಯೋ ನೋಡಿ ಹಾಸ್ಯದ ಚಟಾಕಿ ಹಾರಿಸುತ್ತಿದ್ದಾರೆ. ಮಾವಿನಕಾಯಿಗಿಂತಲೂ ಟೊಮ್ಯಾಟೋ ತುಟ್ಟಿಯಾಗಿದೆ ಎನ್ನುತ್ತಿದ್ದಾರೆ.
ಇದನ್ನೂ ಓದಿ : Viral Video: ಶಾಂತಿಮಂತ್ರದ ನಂತರವೇ ಊಟಮಾಡುವ ಸನಾತನ ಸಂಸ್ಕಾರದ ಶ್ವಾನ
ನಾಗದೇವರು ನಿಧಿಯನ್ನು ಹೇಗೆ ಕಾಪಾಡುತ್ತಾನೋ ಹಾಗೆ ಇದೀಗ ಬಂಗಾರದಂತಿರುವ ಟೊಮ್ಯಾಟೋವನ್ನು ಕಾಯುತ್ತಿದ್ದಾನೆ ಎಂದು ಒಬ್ಬರು ಹೇಳಿದ್ದಾರೆ. ನಮ್ಮ ಊರಲ್ಲಿ 1 ಕಿ.ಗ್ರಾಂಗೆ ರೂ. 130 ಎಂದಿದ್ದಾರೆ ಮತ್ತೊಬ್ಬರು. ಅಲ್ಲದೆ, ಮಧ್ಯಪ್ರದೇಶದ ಅಶೋಕನಗರದ ಅಂಗಡಿಯೊಂದರಲ್ಲಿ ಮೊಬೈಲ್ ಖರೀದಿಸಿದರೆ 2 ಕಿ. ಗ್ರಾಂ ಟೊಮ್ಯಾಟೋವನ್ನು ಉಚಿತ ಉಡುಗೊರೆಯಂತೆ ಕೊಡಲಾಗುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ : Viral: ಡೆಲಿವರಿ ಏಜೆಂಟರುಗಳಿಗಾಗಿ ರಿಲ್ಯಾಕ್ಸ್ ಸ್ಟೇಷನ್; ನೆಟ್ಟಿಗರ ಹೃದಯಗೆದ್ದ ಯುವಕ
ನಿಮ್ಮೂರಲ್ಲಿ ಟೊಮ್ಯಾಟೋ ಬೆಲೆ ಏನು? ಎಷ್ಟು ದಿನದಿಂದ ನಿಮ್ಮ ಮನೆಗೆ ಟೊಮ್ಯಾಟೋ ತಂದಿಲ್ಲ? ಟೊಮ್ಯಾಟೋ ಇಲ್ಲದ ಅಡುಗೆ ರುಚಿಸುತ್ತಿದೆಯೇ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:27 am, Sat, 15 July 23