Viral Video: “ಲೋ ಸತೀಸಾ ವಿಸ್ಯ ಗೊತ್ತಾಯ್ತಾ” RCB ಗೆದ್ದ ಖುಷಿಯಲ್ಲಿ ಮೊಟ್ರೋದಲ್ಲಿ ಅಭಿಮಾನಿಗಳ ಗುಸು ಗುಸು ಮಾತು 

| Updated By: ಅಕ್ಷಯ್​ ಪಲ್ಲಮಜಲು​​

Updated on: May 20, 2024 | 3:07 PM

ತವರಿನಲ್ಲಿ CSK ವಿರುದ್ಧದ ಪಂದ್ಯದಲ್ಲಿ ಗೆದ್ದು RCB ರಾಯಲ್‌ ಆಗಿ ಪ್ಲೇ-ಆಫ್‌ ಎಂಟ್ರಿ ಕೊಟ್ಟಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಇದೇ ಖುಷಿಯಲ್ಲಿ RCB ಅಭಿಮಾನಿಗಳಿಬ್ಬರು ಲೋ ಸತೀಸಾ ವಿಸ್ಯ ಗೊತ್ತಾಯ್ತಾ ಎನ್ನುತ್ತಾ ಮೆಟ್ರೋದಲ್ಲಿ ಕುಳಿತು ಕಿರಾತಕ ಸಿನೆಮಾದಲ್ಲಿ ಬರುವ ಡೈಲಾಡ್‌ ಸ್ಟೈಲ್‌ ಅಲ್ಲಿ ಮಾತಕತೆ ನಡೆಸಿದ್ದಾರೆ. ಈ ಫನ್ನಿ ಮಾತುಕತೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 

Viral Video: ಲೋ ಸತೀಸಾ ವಿಸ್ಯ ಗೊತ್ತಾಯ್ತಾ RCB ಗೆದ್ದ ಖುಷಿಯಲ್ಲಿ ಮೊಟ್ರೋದಲ್ಲಿ ಅಭಿಮಾನಿಗಳ ಗುಸು ಗುಸು ಮಾತು 
Follow us on

ಶನಿವಾರ ನಮ್ಮ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಲ್‌ ಹೈವೋಲ್ಟೇಜ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 27 ರನ್‌ಗಳಿಂದ ಗೆದ್ದು ಬೀಗುವ ಮೂಲಕ RCB ರಾಯಲ್‌ ಆಗಿ ಪ್ಲೇ-ಆಫ್‌ಗೆ ಎಂಟ್ರಿ ಕೊಟ್ಟಿದೆ. RCB ತಂಡ ಗೆಲ್ಲುತ್ತಿದ್ದಂತೆ ಅಭಿಮಾನಿಗಳ ಸಂತಸ ಮುಗಿಲು ಮುಟ್ಟಿದ್ದು, ಮಧ್ಯರಾತ್ರಿಯಲ್ಲಿಯೇ ಅಭಿಮಾನಿಗಳು RCB ಗೆಲುವನ್ನು ಸಂಭ್ರಮಿಸಿದ್ದಾರೆ. ಇದೀಗ ಅಭಿಮಾನಿಗಳಿಬ್ಬರು ಆರ್‌ಸಿಬಿಯ ಗೆಲುವನ್ನು ವಿಭಿನ್ನವಾಗಿ ಸಂಭ್ರಮಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ʼಲೋ ಸತೀಸಾ ವಿಸ್ಯ ಗೊತ್ತಾಯ್ತಾʼ ಎನ್ನುತ್ತಾ ಕಿರಾತಕ ಸಿನಿಮಾ ಡೈಲಾಗ್ಸ್‌ ಶೈಲಿಯಲ್ಲಿ ಮಾತುಕತೆ ನಡೆಸಿದ್ದಾರೆ.

ಈ ಕುರಿತ ವಿಡಿಯೋವನ್ನು @rsy_stan ಎಂಬ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಯಶ್‌ ಸರ್‌ ಅವರ ಕಿರಾತಕ ಸಿನಿಮಾ ಸಂಭಾಷಣೆಯನ್ನು RCB vs CSK ಪಂದ್ಯದ ನಂತರ ಮರುಸೃಷ್ಟಿಸಲಾಯಿತು” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ವಿಡಿಯೋದಲ್ಲಿ RCB ಅಭಿಮಾನಿಗಳಿಬ್ಬರು ಕಿರಾತಕ ಸಿನೆಮಾದಲ್ಲಿನ ಡೈಲಾಗ್ಸ್‌ ಶೈಲಿಯಲ್ಲಿ ಮಾತುಕತೆ ನಡೆಸುತ್ತಿರುವ ದೃಶ್ಯವನ್ನು ಕಾಣಬಹುದು.  ಮೆಟ್ರೋದಲ್ಲಿ ಇತ್ತ ಕಡೆ ಕುಳಿತಿದ್ದ ಯುವಕನೊಬ್ಬ ಕಿರಾತಕ ಸಿನಿಮಾ ಸ್ಟೈಲ್‌ ಅಲ್ಲಿ ಲೋ ಸತೀಸಾ… ವಿಸ್ಯ  ಗೊತ್ತಾಯ್ತಾ ಎಂದು ಜೋರಾಗಿ ತನ್ನ ಫ್ರೆಂಡ್‌ ಬಳಿ ಕೂಗಿ ಹೇಳುತ್ತಾನೆ. ಅತ್ತ ಕಡೆ ಕುಳಿತಿದ್ದ ಈತನ ಸ್ನೇಹಿತ ಏನ್ಲಾ ಅದು ಎಂದು ಕೇಳುತ್ತಾನೆ. ಅದಕ್ಕೆ ಆ ಯುವಕ ನಮ್ಮ ಆರ್‌ಸಿಬಿಯವ್ರು ಕೆಎಸ್‌ಕೆ ತಂಡದವ್ರಿಗೆ  ನಾಯಿಗ್‌ ಹೊಡ್ದಂಗೆ ಹೊಡ್ದವ್ರೇ ಅಂತ ಹೇಳ್ತಾನೆ. ಅದಕ್ಕೆ ಆತನ ಸ್ನೇಹಿತ ಹೌದೇನ್ಲಾ ಎಂದು ಸಂಭಾಷಣೆ ನಡೆಸುವುದನ್ನು ಕಾಣಬಹುದು.

ಇದನ್ನೂ ಓದಿ: ಅವ್ರು ಅದೃಷ್ಟ ದೇವತೆ ಕಣ್ರೋ;  RCB ಸೋಲಿಗೆ ಅಶ್ವಿನಿ ಕಾರಣ ಎಂದು ನಿಂದಿಸಿದವರಿಗೆ ಇದು ಸರಿಯಾದ ಉತ್ತರ 

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 71 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಯುವಕರ ತರ್ಲೆ ಮಾತುಕತೆಯನ್ನು ಕೇಳಿ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ