AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವ್ರು ಅದೃಷ್ಟ ದೇವತೆ ಕಣ್ರೋ;  RCB ಸೋಲಿಗೆ ಅಶ್ವಿನಿ ಕಾರಣ ಎಂದು ನಿಂದಿಸಿದವರಿಗೆ ಇದು ಸರಿಯಾದ ಉತ್ತರ 

ಕೆಲ ವಾರಗಳ ಹಿಂದೆ  ಗಜಪಡೆ  ಎಂಬ ಹೆಸರಿನ ಟ್ವಿಟರ್‌ ಖಾತೆಯಲ್ಲಿ “ಶುಭಕಾರ್ಯಕ್ಕೆ ಮುತ್ತೈದೆಯರನ್ನು ಕರಿಬೇಕು, ಗಂಡ ಸತ್ತವರನ್ನಲ್ಲ” ಎಂದು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಒಂದನ್ನು ಹಂಚಿಕೊಂಡು RCB ಯ ಸತತ ಸೋಲುಗಳಿಗೆ ಅಶ್ವಿನಿ ಕಾರಣ ಎಂದು ಹೇಳಿದ್ದರು, ಇದೀಗ RCB ಅದ್ಧೂರಿಯಾಗಿ ಪ್ಲೇ-ಆಫ್‌ ಪ್ರವೇಶ ಪಡೆದಿದ್ದು, ಒಂದು ಹೆಣ್ಣಿನ ಬಗ್ಗೆ ಕೊಂಕು ಮಾತನಾಡಿದವರಿಗೆ ಸರಿಯಾಗಿ ಉತ್ತರ ಸಿಕ್ಕಂತಾಗಿದೆ.

ಅವ್ರು ಅದೃಷ್ಟ ದೇವತೆ ಕಣ್ರೋ;  RCB ಸೋಲಿಗೆ ಅಶ್ವಿನಿ ಕಾರಣ ಎಂದು ನಿಂದಿಸಿದವರಿಗೆ ಇದು ಸರಿಯಾದ ಉತ್ತರ 
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: May 20, 2024 | 9:44 AM

Share

ಶನಿವಾರ CSK ವಿರುದ್ಧದ ಪಂದ್ಯದಲ್ಲಿ ಗೆದ್ದು ಬೀಗಿದ RCB ತಂಡವು ಅದ್ಧೂರಿಯಾಗಿ  ಪ್ಲೇ-ಆಫ್‌ಗೆ ಎಂಟ್ರಿ ಕೊಟ್ಟಿದ್ದು, ಒಂದೆಡೆ ಈ ಸಲ ಕಪ್‌ ನಮ್ದೆ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಇನ್ನೊಂದೆಡೆ ನೆಟ್ಟಿಗರು RCB ಪ್ಲೇ-ಆಫ್‌ಗೆ ಹೋಗೋಕೆ ಕಾರಣನೇ ನಮ್ಮ ಅದೃಷ್ಟ ದೇವತೆ ಅಶ್ವಿನಿ ಅಕ್ಕ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ. ಅಂದು ರಾಯಲ್‌ ಚಾಲೆಂಜರ್ಸ್‌ ತಂಡ ಸತತ ಸೋಲು ಕಂಡಾಗ, ಇದಕ್ಕೆಲ್ಲಾ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ RCB ಜೆರ್ಸಿ ಅನ್‌ಬಾಕ್ಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇ ಕಾರಣ ಎಂದು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿದ್ದರು. ಇದೀಗ RCB ಅದ್ಧೂರಿಯಾಗಿ ಪ್ಲೇ-ಆಫ್‌ ಪ್ರವೇಶ ಪಡೆದಿದ್ದು, ಹೆಣ್ಣಿನ ಬಗ್ಗೆ ಕೊಂಕು ಮಾತನಾಡಿದವರಿಗೆ ಸರಿಯಾಗಿ ಉತ್ತರ ಸಿಕ್ಕಂತಾಗಿದೆ.

ತ್ರಿವೇಣಿ ಗೌಡ ಎಂಬವರು ಈ ಕುರಿತ ಪೋಸ್ಟ್‌ ಒಂದನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಮೂರ್ಖರೇ ನೋಡಿ… ನಮ್ಮ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರ ಕಾಲ್ಗುಣವನ್ನು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್‌ ಪೋಸ್ಟ್‌ ಅಲ್ಲಿ ಅದ್ಧೂರಿಯಾಗಿ ಪ್ಲೇ-ಆಫ್‌ ಪ್ರವೇಶ ಮಾಡಿದ ನಮ್ಮ RCB! ಇದಕ್ಕೆಲ್ಲಾ ನಮ್ಮ ಅದೃಷ್ಟ ದೇವತೆ ಅಶ್ವಿನಿ ಮೇಡಂ ಕಾರಣ ಎಂಬ ಬರಹಗಳನ್ನು ಬರೆದಿರುವುದನ್ನು ಕಾಣಬಹುದು.

ಇದನ್ನೂ ಓದಿ: 90 ರ ದಶಕದ ಹಾಡಿಗೆ ಅಜ್ಜಿಯ ಭರ್ಜರಿ ಸ್ಟೆಪ್ಸ್; ವಿಡಿಯೋ ಇಲ್ಲಿದೆ ನೋಡಿ

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ಒಂದು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್‌ 1.1 ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಂದು ಹೆಣ್ಣಿನ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿದವರಿಗೆ ಸರಿಯಾಗಿ ಉತ್ತರ ಸಿಕ್ಕಂತಾಗಿದೆ ಎಂದು ನೆಟ್ಟಿಗರು ಕಾಮೆಂಟ್ಸ್‌ ಮಾಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಸೇತುವೆ ಇಕ್ಕೆಲಗಳಲ್ಲಿ ರಸ್ತೆ ಸಂಚಾರ ಬಂದ್, ಶಾಲಾ ಮಕ್ಕಳಿಗೆ ಸಮಸ್ಯೆ
ಸೇತುವೆ ಇಕ್ಕೆಲಗಳಲ್ಲಿ ರಸ್ತೆ ಸಂಚಾರ ಬಂದ್, ಶಾಲಾ ಮಕ್ಕಳಿಗೆ ಸಮಸ್ಯೆ
Assembly Session Live: ವಿಧಾನಸಭೆ ಅಧಿವೇಶನ ಪ್ರಾರಂಭ, ನೇರಪ್ರಸಾರ
Assembly Session Live: ವಿಧಾನಸಭೆ ಅಧಿವೇಶನ ಪ್ರಾರಂಭ, ನೇರಪ್ರಸಾರ
ಗೇಮಿಂಗ್​ ಆ್ಯಪ್​ಗಳಿಗೆ ಹಣ ವರ್ಗಾವಣೆ? ಕೈ​ ಶಾಸಕನ ಮನೆ ಮೇಲೆ ಇಡಿ ದಾಳಿ
ಗೇಮಿಂಗ್​ ಆ್ಯಪ್​ಗಳಿಗೆ ಹಣ ವರ್ಗಾವಣೆ? ಕೈ​ ಶಾಸಕನ ಮನೆ ಮೇಲೆ ಇಡಿ ದಾಳಿ
Video: ಮಹಿಳೆಯನ್ನು ಅಟ್ಟಿಸಿಕೊಂಡು ಬಂದು ದಾಳಿ ನಡೆಸಿದ ಸಾಕು ನಾಯಿಗಳು
Video: ಮಹಿಳೆಯನ್ನು ಅಟ್ಟಿಸಿಕೊಂಡು ಬಂದು ದಾಳಿ ನಡೆಸಿದ ಸಾಕು ನಾಯಿಗಳು
Daily Devotional: ಕವಡೆ ಇಟ್ಟುಕೊಳ್ಳುವುದರಿಂದ ಏನೇನು ಲಾಭ ತಿಳಿಯಿರಿ
Daily Devotional: ಕವಡೆ ಇಟ್ಟುಕೊಳ್ಳುವುದರಿಂದ ಏನೇನು ಲಾಭ ತಿಳಿಯಿರಿ
horoscope: ಡಾ. ಬಸವರಾಜ ಗುರೂಜಿಯವರಿಂದ ಇಂದಿನ ರಾಶಿ ಭವಿಷ್ಯ ತಿಳಿಯಿರಿ
horoscope: ಡಾ. ಬಸವರಾಜ ಗುರೂಜಿಯವರಿಂದ ಇಂದಿನ ರಾಶಿ ಭವಿಷ್ಯ ತಿಳಿಯಿರಿ
ವೀರಶೈವ-ಲಿಂಗಾಯತ ಅಧ್ಯಯನ ಪೀಠಕ್ಕಾಗಿ ಕಣ್ಣಿರಿಟ್ಟ ಸ್ವಾಮೀಜಿ
ವೀರಶೈವ-ಲಿಂಗಾಯತ ಅಧ್ಯಯನ ಪೀಠಕ್ಕಾಗಿ ಕಣ್ಣಿರಿಟ್ಟ ಸ್ವಾಮೀಜಿ
ಸುಧಾರಾಣಿಗೆ ‘ಹಾಲುಂಡ ತವರು’ ಚಿತ್ರದಲ್ಲಿ ಅವಕಾಶ ಮಿಸ್ ಆಗಿದ್ದು ಹೇಗೆ?
ಸುಧಾರಾಣಿಗೆ ‘ಹಾಲುಂಡ ತವರು’ ಚಿತ್ರದಲ್ಲಿ ಅವಕಾಶ ಮಿಸ್ ಆಗಿದ್ದು ಹೇಗೆ?
‘ಪವಿತ್ರಾ ಗೌಡ ಶ್ರೀಮಂತೆ ಅಲ್ಲ, ತುಂಬ ಕಷ್ಟ ಇದೆ’: ಲಾಯರ್ ಅಚ್ಚರಿಯ ಹೇಳಿಕೆ
‘ಪವಿತ್ರಾ ಗೌಡ ಶ್ರೀಮಂತೆ ಅಲ್ಲ, ತುಂಬ ಕಷ್ಟ ಇದೆ’: ಲಾಯರ್ ಅಚ್ಚರಿಯ ಹೇಳಿಕೆ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ಸಚಿವ ಎಸ್. ಜೈಶಂಕರ್
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ಸಚಿವ ಎಸ್. ಜೈಶಂಕರ್