ಟ್ರೈನ್‌ನಲ್ಲಿ ಸೀಟಿಗಾಗಿ ಸಹ ಪ್ರಯಾಣಿಕರ ಮೇಲೆ ಪೆಪ್ಪರ್‌ ಸ್ಪ್ರೇ ಸಿಂಪಡಿಸಿದ ಮಹಿಳೆ ‌

ಬಸ್ಸಿನಲ್ಲಿ, ಲೋಕಲ್‌ ಟ್ರೈನ್‌ನಲ್ಲಿ ಸೀಟಿಗಾಗಿ ಜಗಳಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ವಿಶೇಷವಾಗಿ ಮಹಿಳಾಮಣಿಗಳು ತುಸು ಹೆಚ್ಚೇ ಸೀಟಿಗಾಗಿ ಜಗಳವಾಡುತ್ತಾರೆ. ಇಂತಹ ಸಾಕಷ್ಟು ಘಟನೆಗಳನ್ನು ನೀವು ಸಹ ನೋಡಿರಬಹುದಲ್ವಾ. ಅದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ಲೋಕಲ್‌ ಟ್ರೈನ್‌ನಲ್ಲಿ ಓರ್ವ ಸೀಟಿಗಾಗಿ ಸಹ ಪ್ರಯಾಣಿಕರ ಮೇಲೆ ಪೆಪ್ಪರ್‌ ಸ್ಪ್ರೇ ಸಿಂಪಡಿಸಿದ್ದಾಳೆ. ಈ ಕೃತ್ಯಕ್ಕೆ ಕೋಪಗೊಂಡ ಇತರೆ ಪ್ರಯಾಣಿಕರು ಆಕೆಗೆ ಬೆಂಡೆತ್ತಿದ್ದಾರೆ. ಈ ದೃಶ್ಯ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಟ್ರೈನ್‌ನಲ್ಲಿ ಸೀಟಿಗಾಗಿ ಸಹ ಪ್ರಯಾಣಿಕರ ಮೇಲೆ ಪೆಪ್ಪರ್‌ ಸ್ಪ್ರೇ ಸಿಂಪಡಿಸಿದ ಮಹಿಳೆ ‌
Viral Video (1)
Image Credit source: Social Media

Updated on: Oct 11, 2025 | 1:32 PM

ಕೋಲ್ಕತ್ತಾ, ಅಕ್ಟೋಬರ್‌ 11: ಬಸ್‌, ಟ್ರೈನ್‌ನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರೂ ನನಗೆ ಸೀಟ್‌ (seats)  ಸಿಕ್ರೆ ಸಾಕಪ್ಪಾ ಎಂದುಕೊಳ್ಳುತ್ತಾರೆ. ಆದ್ರೆ ಕೆಲವೊಮ್ಮೆ ರಶ್‌ ಇರುವ ಕಾರಣ ಕೂರಲು ಸೀಟ್‌ ಕೂಡ ಸಿಗುವುದಿಲ್ಲ. ಇದೇ ಸೀಟ್‌ ವಿಚಾರವಾಗಿ ಪ್ರಯಾಣಿಕರು ರಂಪ ರಾಮಾಯಣವನ್ನೇ ಮಾಡಿಬಿಡುತ್ತಾರೆ. ಸಾಮಾನ್ಯವಾಗಿ ಸೀಟಿಗಾಗಿ ಪ್ರಯಾಣಿಕರ ನಡುವೆ ಮಾತಿನ ಚಕಮಕಿ ನಡೆಯುತ್ತವೆ. ಇಲ್ಲವೇ ಈ ಸೀಟ್‌ ನನ್ನದು ಎಂದು ಟವೆಲ್‌ ಇಟ್ಟು ಸೀಟ್‌ ಬುಕ್‌ ಮಾಡಿಬಿಡುತ್ತಾರೆ. ಆದ್ರೆ ಕೋಲ್ಕತ್ತಾದಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಲೋಕಲ್‌ ಟ್ರೈನ್‌ನಲ್ಲಿ ಓರ್ವ ಮಹಿಳೆ ಸೀಟಿಗಾಗಿ ಸಹ ಪ್ರಯಾಣಿಕರ ಮೇಲೆ ಪೆಪ್ಪರ್‌ ಸ್ಪ್ರೇ ಸಿಂಪಡಿಸಿದ್ದಾಳೆ. ಈ ಘಟನೆಯ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಸೀಟಿಗಾಗಿ ಪ್ರಯಾಣಿಕರ ಮೇಲೆ ಪೆಪ್ಪರ್‌ ಸ್ಪ್ರೇ ಸಿಂಪಡಿಸಿದ ಮಹಿಳೆ:

ಈ ಘಟನೆ ಕೋಲ್ಕತ್ತಾದಲ್ಲಿ ನಡೆದಿದ್ದು, ಇಲ್ಲಿನ ಲೋಕಲ್‌ ಟ್ರೈನ್‌ನಲ್ಲಿ ಓರ್ವ ಮಹಿಳೆ ಸೀಟಿಗಾಗಿ ಸಹ ಪ್ರಯಾಣಿಕರ ಮೇಲೆ ಪೆಪ್ಪರ್‌ ಸ್ಪ್ರೇ ಸಿಂಪಡಿಸಿದ್ದಾಳೆ. ಇದರಿಂದ ಕೋಪಗೊಂಡ ಇತರೆ ಪ್ರಯಾಣಿಕರು ಆಕೆಯನ್ನು ಬೆಂಡೆತ್ತಿದ್ದಾರೆ.

ಇದನ್ನೂ ಓದಿ
ರಾತ್ರಿ ನನ್ನ ಹೆಂಡತಿ ಹಾವಾಗಿ ಬದಲಾಗುತ್ತಾಳೆ; ವಿಚಿತ್ರ ದೂರು ನೀಡಿದ ಗಂಡ!
ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಥಳಿಸಿ ನಗದು ದೋಚಿದ ಖದೀಮರು
ಟಿಸಿಯ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಿದ ಮಹಿಳೆ
ರೈಲಿನ ಶೌಚಾಲಯದಲ್ಲಿ 6 ಗಂಟೆಗಳ ಕಾಲ ಲಾಕ್ ಆದ ಪ್ರಯಾಣಿಕ

ಅಮೃತ ಝಿಲಿಕ್‌ amrita_jhilik ಎಂಬವರು ಈ ಕುರಿತ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ ಮತ್ತು “ಈ ಹಸಿರು ಕುರ್ತಿ ಧರಿಸಿದ ಮಹಿಳೆ ಸೀಲ್ಡಾ ನಿಲ್ದಾಣದಲ್ಲಿ ಟ್ರೈನ್‌ ಹತ್ತಿ ಸೀಟಿನಲ್ಲಿ ಕುಳಿತಿದ್ದ ಹುಡುಗಿಯೊಂದಿಗೆ ಜಗಳವಾಗಿ ಆಕೆಗೆ ಪೆಪ್ಪರ್‌ ಸ್ಪ್ರೇ ಸಿಂಪಡಿಸಲು ಯತ್ನಿಸಿದ್ದಾಳೆ. ಆಕೆ ಪೆಪ್ಪರ್‌ ಸ್ಪ್ರೇ ತೆಗೆಯುತ್ತಿದ್ದಂತೆ ಆಕೆಯನ್ನು ಮಹಿಳೆಯೊಬ್ಬರು ತಡೆಯಲು ಪ್ರಯತ್ನಿಸಿದಾಗ ಕೋಪಗೊಂಡ ಆಕೆ ಬೋಗಿಯ ತುಂಬೆಲ್ಲಾ ಸ್ಪ್ರೇ ಸಿಂಪಡಿಸಿದಳು. ಈಕೆಯ ಕೃತ್ಯಕ್ಕೆ ನಮಗೆಲ್ಲಾ ಕೆಮ್ಮು ಬಂದಿದ್ದು ಮಾತ್ರವಲ್ಲದೆ ಇಬ್ಬರು ಮಕ್ಕಳು ಅಸ್ವಸ್ಥರಾಗಿದ್ದಾರೆ. ಕೊನೆಗೆ ಆಕೆಯನ್ನು ಬೆಂಡೆತ್ತಿ ರೈಲ್ವೆ ಪೊಲೀಸ್‌ಗೆ ಒಪ್ಪಿಸಲಾಯಿತು. ಪೆಪ್ಪರ್‌ ಸ್ಪ್ರೇ ವೈಯಕ್ತಿಕ ಸುರಕ್ಷತೆಗಾಗಿ ಬಳಸಬೇಕು, ಆದರೆ ಈ ಕ್ರಿಮಿನಲ್‌ ಮನಸ್ಸಿನವಳು ಈ ರೀತಿ ತಪ್ಪು ಕಾರ್ಯ ಮಾಡಿದ್ದಾಳೆ” ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ವೈರಲ್‌  ವಿಡಿಯೋ ಇಲ್ಲಿದೆ ನೋಡಿ:

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಟ್ರೈನ್‌ನಲ್ಲಿ ಸಿಂಪಡಿಸಿದ ಮಹಿಳೆಗೆ ಇಲ್ಲಿಮಕ್ಕಳಿರುವಾಗ, ನೀವು ಈ ರೀತಿ ಮಾಡಿದ್ದು ಎಷ್ಟು ಸರಿ ಎಂದು ಸಹ ಪ್ರಯಾಣಿಕರು ಹಿಗ್ಗಾಮುಗ್ಗ ಬೈಯುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ರಾತ್ರಿ ನನ್ನ ಹೆಂಡತಿ ಹಾವಾಗಿ ಕಚ್ಚುತ್ತಾಳೆ; ಪೊಲೀಸರಿಗೆ ವಿಚಿತ್ರ ದೂರು ನೀಡಿದ ಗಂಡ!

ಸೆಪ್ಟೆಂಬರ್‌ 26 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಕೆಲವರು ಮುಗ್ಧ ಜನರ ಮೇಲೆ ಅಟ್ಯಾಕ್‌ ಮಾಡಲು ಪೆಪ್ಪರ್‌ ಸ್ಪ್ರೇಯನ್ನು ಆಯುಧವಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆʼ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಸುರಕ್ಷತೆಗಾಗಿ ತಯಾರಿಸಿದ ವಸ್ತುಗಳನ್ನು ದುರುಪಯೋಗಪಡಿಸಿಕೊಳ್ಳುವುದು ಎಷ್ಟು ಸರಿʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಮಹಿಳೆಯ ಈ ಕೃತ್ಯವನ್ನು ಖಂಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ