ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​​​ ಕ್ರಿಯೇಟ್​​​ ಮಾಡಿರುವ ಈ ಕುಮಾರಿ ಆಂಟಿ ಯಾರು?

|

Updated on: Feb 06, 2024 | 2:00 PM

2 ಲಿವರ್ ಎಕ್ಸ್‌ಟ್ರಾ ಎಂಬ ಡೈಲಾಗ್​​ ಮೂಲಕವೇ ನೆಟ್ಟಿಗರ ಮನೆಮಾತಾಗಿದ್ದ ಈ ಕುಮಾರಿ ಆಂಟಿ ಯಾರು? ಅವರ ಹಿನ್ನೆಲೆ ಏನು? ಸಾಮಾಜಿಕ ಜಾಲತಾಣಗಳಲ್ಲಿ ಅವರು ಯಾಕಿಷ್ಟು ಫೇಮಸ್​​​​​? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​​​ ಕ್ರಿಯೇಟ್​​​ ಮಾಡಿರುವ ಈ ಕುಮಾರಿ ಆಂಟಿ ಯಾರು?
Kumari Aunty_
Follow us on

ಹೈದರಾಬಾದ್: ಕುಮಾರಿ ಆಂಟಿ ಎಂದೇ ಪ್ರಸಿದ್ಧರಾಗಿರುವ ಸಾಯಿ ಕುಮಾರಿಯವರು ಕೈಗೆಟಕುವ ದರ ಹಾಗೂ ರುಚಿಕರವಾದ ಆಹಾರದಿಂದಲೇ ಹೈದರಾಬಾದ್‌ನ ಸ್ಥಳೀಯರ ಗಮನ ಸೆಳೆದಿದ್ದರು. ಆದರೆ 2 ಲಿವರ್ ಎಕ್ಸ್‌ಟ್ರಾ ಎಂಬ ಯೂಟ್ಯೂಬ್ ವೀಡಿಯೊ ವೈರಲ್ ಆದ ನಂತರ ಹೆಚ್ಚಿನ ಜನಪ್ರಿಯತೆ ಗಳಿಸಿದ್ದಾರೆ. ಇತ್ತೀಚೆಗಷ್ಟೇ ಅವರ ಜನಪ್ರಿಯತೆ ಅವರ ವ್ಯಾಪಾರಕ್ಕೆ ಮುಳುವಾಗಿತ್ತು. ಕುಮಾರಿ ಆಂಟಿಯ ರಸ್ತೆ ಬದಿಯ ಅಂಗಡಿ ಟ್ರಾಫಿಕ್​​ಗೆ, ವಾಹನ ದಟ್ಟನೆಗೆ ಕಾರಣವಾಗುತ್ತದೆ ಎಂಬ ಕಾರಣಕ್ಕೆ ಅವರ ಅಂಗಡಿಯನ್ನು ಅಲ್ಲಿಂದ ತೆಗಿಸಲಾಗಿತ್ತು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಅಂಗಡಿಯನ್ನು ಮತ್ತೆ ತೆರೆಯುವಂತೆ ಬೆಂಬಲಿಸುವ ಮೂಲಕ ಈವಿಷಯ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ ಮೊರೆ ಹೋಗಿತ್ತು. ಅಲ್ಲಿ ಬ್ಯುಸಿನೆಸ್ ಮಾಡಬಹುದು ಎಂದು ರೇವಂತ್ ರೆಡ್ಡಿ ಸ್ಪಷ್ಟಪಡಿಸಿದ ಬಳಿಕ ಕುಮಾರಿ ಆಂಟಿ ಎಲ್ಲೆಡೆ ಹಾಟ್ ಟಾಪಿಕ್ ಆದರು.

ಕುಮಾರಿ ಆಂಟಿಯ ಪ್ರತಿದಿನದ ಆದಾಯ ಎಷ್ಟು?

ಸುಮಾರು 13 ವರ್ಷಗಳಿಂದ ಐಟಿಸಿ ಕೊಹಿನೂರ್ ಜಂಕ್ಷನ್‌ನಲ್ಲಿ ಪುಡ್​​​ ಸ್ಟಾಲ್​​ ಪ್ರಾರಂಭಿಸಿರುವ ಸಾಯಿ ಕುಮಾರಿಯವರು, ಚಿಕನ್ ಕರಿ, ಮಟನ್ ಕರಿ, ಅನ್ನ ಮುಂತಾದ ವಿವಿಧ ಖಾದ್ಯಗಳನ್ನು ನೀಡುತ್ತಾರೆ. ಅವರು ಪ್ರತಿದಿನ ಕನಿಷ್ಠ ರೂ 30,000 ಗಳಿಸುತ್ತಾರೆ ಎಂದು ಒನ್ಇಂಡಿಯಾ ವರದಿ ಮಾಡಿದೆ . ಸೋಶಿಯಲ್​ ಮೀಡಿಯಾ ಮತ್ತು ಆಹಾರ ವ್ಲಾಗರ್‌ಗಳಿಂದಾಗಿ ಅವರ ಫುಡ್ ಸ್ಟಾಲ್ ಸಾಕಷ್ಟು ಜನಪ್ರಿಯವಾಗಿದೆ.

ಟಾಲಿವುಡ್ ಖ್ಯಾತ ಗಾಯಕನ ಮನೆಯಲ್ಲಿ ಕೆಲಸ:

ಮೊದಲು, ಈ ಸಾಯಿ ಕುಮಾರಿಯವರು ಟಾಲಿವುಡ್ ಖ್ಯಾತ ಗಾಯಕ ಹೇಮಾ ಚಂದ್ರ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವಿಷಯವನ್ನು ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.2009ರಲ್ಲಿ ಹೈದರಾಬಾದ್‌ಗೆ ಬಂದಿದ್ದೆ. ಆಗ ನಾನು ಬಟ್ಟೆ ಹೊಲಿಯುತ್ತಿದ್ದೆ. ಅದೇ ಸಮಯಕ್ಕೆ ಹೇಮಚಂದ್ರನ ಮನೆಗೆ ಅಡುಗೆ ಮಾಡಲು ಹೋಗುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಡೋಲೋ 650 ಶಶಿರೇಖಾ ಈಗ ಸಿನಿಮಾ ಹೀರೋಯಿನ್​​; ವಿಡಿಯೋ ವೈರಲ್​​

ಸುಮಾರು 200 ಮಂದಿ, ಅವರಲ್ಲಿ ಹೆಚ್ಚಿನವರು ಯೂಟ್ಯೂಬರ್‌ಗಳಾಗಿದ್ದು, ಪ್ರತಿದಿನ ಮಧ್ಯಾಹ್ನ 12 ರಿಂದ 2 ಗಂಟೆಯ ನಡುವೆ ವೀಡಿಯೊಗಳನ್ನು ಚಿತ್ರೀಕರಿಸಲು ಮತ್ತು ಸ್ಟಾಲ್‌ನ ಸುತ್ತಲೂ ತಮ್ಮ ವಾಹನಗಳನ್ನು ನಿಲ್ಲಿಸಲು ಇಲ್ಲಿಗೆ ಬರುತ್ತಾರೆ, ಇದು ದಟ್ಟಣೆಗೆ ಕಾರಣವಾಗುತ್ತದೆ ಎಂದು ರಾಯದುರ್ಗಂ ಸಂಚಾರ ಪೊಲೀಸ್ ಇನ್ಸ್‌ಪೆಕ್ಟರ್ ಗಣೇಶ್ ಪಟೇಲ್ ದೂರು ನೀಡಿ ಅಂಗಡಿಯನ್ನು ತೆರವುಗೊಳಿಸಲಾಗಿತ್ತು. ಆದರೆ ಇದೀಗಾ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕುಮಾರಿ ಆಂಟಿಯ ಫುಡ್ ಸ್ಟಾಲ್ ಮತ್ತೆ ತೆರೆಯುವಂತೆ ಆದೇಶ ನೀಡಿದ್ದು, ಇದೀಗಾ ಕುಮಾರಿ ಆಂಟಿ ಎಂಬ ಹೆಸರು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಸೆಟ್​ ಕ್ರಿಯೇಟ್​​ ಮಾಡಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:59 pm, Tue, 6 February 24