Video: ಗಲ್ಲಿ ಕ್ರಿಕೆಟ್‌ನಲ್ಲಿ ವಿಕೆಟ್‌ ಕೀಪರ್‌ ಆಗಿ ಮಿಂಚಿದ ಶ್ವಾನ; ವೈರಲ್‌ ಆಯ್ತು ವಿಡಿಯೋ

ಮಹೇಂದ್ರ ಸಿಂಗ್‌ ಧೋನಿ ಟೀಂ ಇಂಡಿಯಾದ ಚಾಣಾಕ್ಷ ವಿಕೆಟ್‌ ಕೀಪರ್‌ ಅಂತಾನೇ ಪ್ರಸಿದ್ಧಿ ಪಡೆದವರು. ಇದೀಗ ಇಲ್ಲೊಂದು ಶ್ವಾನ ನಾನು ಕೂಡಾ ಧೋನಿಯವರಂತೆ ವಿಕೆಟ್‌ ಕೀಪಿಂಗ್‌ ಮಾಡಲು ಬಯಸುತ್ತೇನೆ ಎಂದು ಗಲ್ಲಿ ಕ್ರಿಕೆಟ್‌ನಲ್ಲಿ ಸಖತ್‌ ಆಗಿ ವಿಕೆಟ್‌ ಕೀಪಿಂಗ್‌ ಮಾಡಿ ಮಿಂಚಿದೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ವಿಕೆಟ್‌ ಕೀಪರ್‌ ಆಗಿ ಅದ್ಭುತ ಪ್ರದರ್ಶನ ನೀಡಿದ ಲ್ಯಾಬ್ರಡಾರ್‌ ಶ್ವಾನದ ಆಟಕ್ಕೆ ನೆಟ್ಟಿಗರಂತೂ ಕ್ಲೀನ್‌ ಬೋಲ್ಡ್‌ ಆಗಿದ್ದಾರೆ.

Video: ಗಲ್ಲಿ ಕ್ರಿಕೆಟ್‌ನಲ್ಲಿ ವಿಕೆಟ್‌ ಕೀಪರ್‌ ಆಗಿ ಮಿಂಚಿದ ಶ್ವಾನ; ವೈರಲ್‌ ಆಯ್ತು ವಿಡಿಯೋ
ವಿಕೆಟ್‌ ಕೀಪರ್‌ ಆಗಿ ಮಿಂಚಿದ ಶ್ವಾನ
Image Credit source: Social Media

Updated on: Jul 18, 2025 | 11:21 AM

ನಾಯಿಗಳು (Dogs) ಮನುಷ್ಯನ ಉತ್ತಮ ಸ್ನೇಹಿತ ಅಂತಾನೇ ಹೇಳಬಹುದು. ಇವುಗಳು ಮನೆಯನ್ನು ಕಾಯಿಯುವುದರ ಜೊತೆಗೆ ಮನೆಯವರೊಂದಿಗೆ ಆಟ ತುಂಟಾಟವನ್ನು ಮಾಡುತ್ತಿರುತ್ತವೆ. ಶ್ವಾನಗಳ ಮುದ್ದು ಮುದ್ದಾದ ಆಟ, ತರ್ಲೆ ತಮಾಷೆಗಳ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ದೃಶ್ಯ ವೈರಲ್‌ ಆಗಿದ್ದು, ಶ್ವಾನವೊಂದು ಗಲ್ಲಿ ಕ್ರಿಕೆಟ್‌ನಲ್ಲಿ (Dog turns wicketkeeper in gully cricket) ಸಖತ್‌ ಆಗಿ ವಿಕೆಟ್‌ ಕೀಪಿಂಗ್‌ ಮಾಡುವ ಮೂಲಕ ಮಿಂಚಿದೆ. ಹೌದು ಎಂ.ಎಸ್‌ ಧೋನಿ ಅವರಂತೆ ನಾನು ಕೂಡಾ ಒಂದು ಮಟ್ಟಿಗೆ ವಿಕೆಟ್‌ ಕೀಪಿಂಗ್‌ ಮಾಡಬಲ್ಲೆ ಎನ್ನುತ್ತಾ, ಭರ್ಜರಿಯಾಗಿ ಆಡಿದ್ದು, ಲ್ಯಾಬ್ರಡಾರ್‌ ತಳಿಯ ಈ ಶ್ವಾನದ ಕ್ರಿಕೆಟ್‌ ಆಟಕ್ಕೆ ಕ್ರಿಕೆಟ್‌ ಪ್ರೇಮಿಗಳಂತೂ ಫಿದಾ ಆಗಿದ್ದಾರೆ.

ಗಲ್ಲಿ ಕ್ರಿಕೆಟ್‌ನಲ್ಲಿ ವಿಕೆಟ್‌ ಕೀಪರ್‌ ಆಗಿ ಮಿಂಚಿದ ಶ್ವಾನ:

ಲ್ಯಾಬ್ರಡಾರ್‌ ತಳಿಯ ಶ್ವಾನವೊಂದು ವೃತ್ತಿಪರ ಆಟಗಾರರಂತೆ ಸಖತ್ತಾಗಿ ವಿಕೆಟ್‌ ಕೀಪಿಂಗ್‌ ಮಾಡುವ ಮೂಲಕ ಸುದ್ದಿಯಲ್ಲಿದೆ. ಈ ಶ್ವಾನ ಗಲ್ಲಿ ಕ್ರಿಕೆಟ್‌ನಲ್ಲಿ ವಿಕೆಟ್‌ ಕೀಪರ್‌ ಆಗಿ ಮಿಂಚಿದ್ದು, ಈ ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ.

ಇದನ್ನೂ ಓದಿ
ಈಜುತ್ತಾ ದಡ ಸೇರಿ ಕಾಡಿನ ಕಡೆಗೆ ಓಡಿ ಹೋದ ಚಿರತೆ
ಕಾಲೇಜು ಯುವತಿಯ ಮೇಲೆ ಬೀದಿ ನಾಯಿಗಳ ಡೆಡ್ಲಿ ಅಟ್ಯಾಕ್
ಮರಳಿ ಅಮ್ಮನ ಮಡಿಲು ಸೇರಿದ ಮರಿಯಾನೆಯ ಖುಷಿ ನೋಡಿ
ಸಾವಿನಿಂದ ತಪ್ಪಿಸಿಕೊಳ್ಳಲು ಹಾವಿನ ತಲೆಯ ಮೇಲೆ ಕುಳಿತ ಇಲಿ

ಈ ವಿಡಿಯೋವನ್ನು ಆದಿತ್ಯ ತಿವಾರಿ (Aditya Tiwari) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ಮಹೇಂದ್ರ ಸಿಂಗ್‌ ಅವರ ಶ್ವಾನ, ಕ್ರಿಕೆಟ್‌ ಸಮುದಾಯದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆʼ ಎಂಬ ತಮಾಷೆಯ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್‌  ವಿಡಿಯೋ ಇಲ್ಲಿದೆ ನೋಡಿ:

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಶ್ವಾನವೊಂದು ಯುವಕರ ಜೊತೆ ಗಲ್ಲಿ ಕ್ರಿಕೆಟ್‌ ಆಡುತ್ತಿರುವ ದೃಶ್ಯವನ್ನು ಕಾಣಬಹುದು. ವಿಕೆಟ್‌ ಕೀಪರ್‌ ಆಗಿ ನಿಂತು ಬಂದ ಎಲ್ಲಾ ಬಾಲ್‌ಗಳನ್ನು ಬಾಯಲ್ಲಿ ಹಿಡಿದು ಅಧ್ಬುತ ಪ್ರದರ್ಶನವನ್ನು ನೀಡಿದ್ದು, ಶ್ವಾನದ ವಿಕೆಟ್‌ ಕೀಪಿಂಗ್‌ಗೆ ಎಲ್ಲರೂ ಫುಲ್‌ ಫಿದಾ ಆಗಿದ್ದಾರೆ.

ಇದನ್ನೂ ಓದಿ: ಕೊನೆಗೂ ಸ್ವಾತಂತ್ರ್ಯ ಸಿಕ್ತು; ನದಿ ದಾಟಿ ಓಡುತ್ತಾ ಕಾಡು ಸೇರಿದ ಚಿರತೆ

ಜುಲೈ 15 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಬ್ಬಬ್ಬಾ ಎಂತಹ ಉತ್ತಮ ವಿಕೆಟ್‌ ಕೀಪರ್‌ ಇವನುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಬಾಲ್‌ ಹಿಡಿಯಲು ಎಷ್ಟು ಚುರುಕುತನ ಉಪಯೋಗಿಸಿತು ನೋಡಿ, ಅದ್ಭುತ ಪ್ರದರ್ಶನʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇವನು ಬಾರ್ನ್‌ ವಿಕೆಟ್‌ ಕೀಪರ್‌ʼ ಎಂದು ಹೇಳಿದ್ದಾರೆ. ಇನ್ನೊಬ್ಬರು ʼಇವನು ಪಕ್ಕಾ ಮಹೇಂದ್ರ ಸಿಂಗ್‌ ಅವರ ಶ್ವಾನʼ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ